More

    ಆರ್​ಆರ್​ಆರ್ ನೋಡಲು ಬಂದ ಅಪ್ಪು ಅಭಿಮಾನಿಗಳು ಮಾಡಿದ ಕೆಲಸ ಮನಕಲಕುತ್ತೆ!

    ಬೆಂಗಳೂರು: ಸಿನಿಮಾ ಎಂದರೆ ಕರುನಾಡಲ್ಲಿ ರಾಜ್​ಕುಮಾರ್, ಇನ್ನು ಅದರ ನಂತರ ಕೇಳಿಸುವ ಹೆಸರೇ ಪುನೀತ್ ರಾಜ್​ಕುಮಾರ್. ಅಪ್ಪು ಹೆಸರು ‘ಪವರ್ ಸ್ಟಾರ್’ ಅಭಿಮಾನಿಗಳ ಎದೆಯಲ್ಲಿ ಎಂದೆಂದಿಗೂ ಅಜರಾಮರ. ಅಪ್ಪು ಅವರು ನಿಧನರಾಗಿ ನಾಲ್ಕು ತಿಂಗಳು ಆದರೂ, ಎಲ್ಲಾ ಸಂದರ್ಭಗಳಲ್ಲೂ ಪುನೀತ್ ಅವರನ್ನು ಫ್ಯಾನ್ಸ್ ನೆನಪಿಸಿಕೊಳ್ಳುತ್ತಿದ್ದಾರೆ. ಜಾತ್ರೆ, ಉತ್ಸವ, ಹಬ್ಬ, ಸಾಮಾಜಿಕ ಸೇವೆಯ ಕಾರ್ಯಗಳಲ್ಲಿ ಅಪ್ಪು ಅವರ ಫೋಟೋಗಳು ರಾರಾಜಿಸುತ್ತಿವೆ. ಇನ್ನು, ಅಪ್ಪು ಅವರಿಗೆ ಬಹುತೇಕ ಎಲ್ಲಾ ಕಾರ್ಯಕ್ರಮಗಳಲ್ಲಿ ಉತ್ತಮ ಗೌರವ ಸಲ್ಲಿಸಲಾಗುತ್ತಿದೆ. ಇದೀಗ, ‘ಆರ್​ಆರ್​ಆರ್’ ಸಿನಿಮಾ ನೋಡುತ್ತಿದ್ದರೂ ಜನ ಅಪ್ಪು ಅವರನ್ನೇ ನೆನಪಿಸಿಕೊಂಡಿದ್ದಾರೆ.

    ಆರ್​ಆರ್​ಆರ್ ನೋಡಲು ಬಂದ ಅಪ್ಪು ಅಭಿಮಾನಿಗಳು ಮಾಡಿದ ಕೆಲಸ ಮನಕಲಕುತ್ತೆ!

    ಹೌದು, ‘ಆರ್​ಆರ್​ಆರ್’ ಸಿನಿಮಾ ನೋಡಲು ಬಂದ ಅಭಿಮಾನಿಗಳು ಅಪ್ಪು ಫೋಟೋವನ್ನು ಪ್ರದರ್ಶಿಸುತ್ತಿದ್ದಾರೆ. ಬೆಂಗಳೂರಿನ ಅನೇಕ ಚಿತ್ರಮಂದಿರಗಳ ಎದುರು ಪುನೀತ್ ರಾಜ್​ಕುಮಾರ್ ಅವರಿಗೆ ಫೋಟೋಗಳು ಮತ್ತು ಕಟೌಟ್​ಗಳು ಮಿಂಚುತ್ತಿವೆ. ಬೆಂಗಳೂರಿನ ಅಂಜನ್ ಟಾಕೀಸ್ ಚಿತ್ರಮಂದಿರದಲ್ಲಿ ‘ಆರ್​ಆರ್​ಆರ್’ ಸಿನಿಮಾ ನೋಡಲು ಬಂದ ಪ್ರೇಕ್ಷಕರು ಪುನೀತ್ ಅವರ ಪೋಸ್ಟರ್​ಗಳನ್ನು ಪ್ರದರ್ಶಿಸಿದ್ದು, ಅಪ್ಪು ಅವರಿಗೆ ಜೈಕಾರ ಹಾಕುತ್ತಿದ್ದಾರೆ. ಇನ್ನು, ಕೆಲವು ಕಡೆ ನಟ ರಾಮ್ ಚರಣ್, ಜ್ಯೂ.ಎನ್​ಟಿಆರ್ ಅವರ ಪೋಸ್ಟರ್​ಗಳ ಪಕ್ಕದಲ್ಲಿ ಅಪ್ಪು ಫೋಟೋಗಳನ್ನುಇಟ್ಟು, ಈ ಮೂವ್ವರು ನಟರಿಗೆ ಜೈಕಾರ ಹಾಕಿದ್ದಾರೆ

    ಆರ್​ಆರ್​ಆರ್ ನೋಡಲು ಬಂದ ಅಪ್ಪು ಅಭಿಮಾನಿಗಳು ಮಾಡಿದ ಕೆಲಸ ಮನಕಲಕುತ್ತೆ!

    ಇಂದು ಕಂಡ ಈ ದೃಶ್ಯಗಳು ನೋಡುತ್ತಿದ್ದರೆ ಪವರ್ ಸ್ಟಾರ್ ನಟ ಪುನೀತ್ ರಾಜ್​ಕುಮಾರ್ ಅವರ ಮೇಲೆ ಜನರಿಗೆ ಇರುವ ಅಭಿಮಾನ, ಪ್ರೀತಿ, ಅಕ್ಕರೆ ಎಂದೆಂದಿಗೂ ನಿರಂತರ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತದೆ ಎನ್ನಬಹುದು. ‘ಆರ್​ಆರ್​ಆರ್’ ಚಿತ್ರದ ಪ್ರೀರಿಲೀಸ್ ಕಾರ್ಯಕ್ರಮಕ್ಕೆ ಬಂದಿದ್ದ ಕೆಲವು ಅಭಿಮಾನಿಗಳು ಅಂದು ಕೂಡಾ ಪುನೀತ್ ಫೋಟೋವನ್ನು ಹಿಡಿದು ಬಂದಿದ್ದರು. ಅದನ್ನು ಕಂಡ ‘ಆರ್​ಆರ್​ಆರ್’ ಚಿತ್ರತಂಡವೇ ಕೆಲವು ನಿಮಿಷಗಳು ಭಾವುಕರಾಗಿದ್ದರು. ಇನ್ನೂ, ಕರುನಾಡಲ್ಲಿ ನಟ ರಾಮ್ ಚರಣ್, ಜ್ಯೂ.ಎನ್​ಟಿಆರ್ ಅಭಿಮಾನಿಗಳ ಸಂಘದವರು ಕೂಡಾ ಅಪ್ಪು ಫೋಟೋ ಇರುವ ಬ್ಯಾನರ್​ಗಳನ್ನು ಹಿಡಿದಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ

    ಆರ್​ಆರ್​ಆರ್ ನೋಡಲು ಬಂದ ಅಪ್ಪು ಅಭಿಮಾನಿಗಳು ಮಾಡಿದ ಕೆಲಸ ಮನಕಲಕುತ್ತೆ! ಆರ್​ಆರ್​ಆರ್ ನೋಡಲು ಬಂದ ಅಪ್ಪು ಅಭಿಮಾನಿಗಳು ಮಾಡಿದ ಕೆಲಸ ಮನಕಲಕುತ್ತೆ!

    ಯಾವುದೇ ಭಾಷೆ ಸಿನಿಮಾ, ಒಂದೇ ಟಿಕೆಟ್ ಬೆಲೆ! ಆಂಧ್ರ ಮಾದರಿ ಕರುನಾಡಲ್ಲಿ ಬೇಕೆ?

    ಅತಿ ಆಸೆ ಗತಿ ಗೆಡಿಸುತ್ತೆ… ಥಿಯೇಟರ್​ನವರಿಗೆ ಟಾಂಗ್ ಕೊಟ್ಟ ಶಿವಣ್ಣ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts