ಬೆಂಗಳೂರು: ತೆಲುಗಿನ ಹಾಗೂ ಬಹುನಿರೀಕ್ಷಿತ ಪ್ಯಾನ್ ಇಂಡಿಯನ್ ಸಿನಿಮಾ ಆದ 'RRR' ನಾಳೆ ರಿಲೀಸ್ ಆಗಲಿದ್ದು ಇದರಿಂದ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಕೊನೆಯ ಚಿತ್ರ 'ಜೇಮ್ಸ್' ಅನ್ನು ಚಿತ್ರಮಂದಿರಗಳಿಂದ ಎತ್ತಂಗಡಿ ಮಾಡಲಾಗುತ್ತಿದೆ ಎಂಬ ಕಿಚ್ಚು ವ್ಯಾಪಿಸುತ್ತಿದ್ದಂತೆ ನಟ ಶಿವರಾಜ್ಕುಮಾರ್ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಇಂದು ಸುದ್ದಿಗೋಷ್ಠಿ ನಡೆಸಿ ವಿವಾದಕ್ಕೆ ತೆರೆ ಎಳೆಯಲು ಯ್ನತಿಸಿದರು. ಈ ಸಂದರ್ಭದಲ್ಲಿ ಮಾತಾಡಿದ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್, ''ಥಿಯೇಟರ್ ಸಮಸ್ಯೆ ಬರುತ್ತೆ-ಹೋಗುತ್ತೆ. ಮಾತುಕತೆ ಕೆಲವು ಸಲ ಅಗ್ರಿಮೆಂಟ್ನಲ್ಲಿ ಆಗುತ್ತೆ, ಕೆಲವು ಟೈಮ್ ಮಾತಿನ ಮೇಲೆ ನಿಂತಿರುತ್ತೆ. ಡಿಸ್ಟ್ರಿಬ್ಯೂಟರ್ ಹಾಗೂ ಎಕ್ಸಿಬ್ಯೂಟರ್ಗಳ ಮಧ್ಯೆ ಯಾವ ರೀತಿ ಮಾತುಕತೆ ಆಗಿತ್ತೋ ಅದು ಗೊತ್ತಿಲ್ಲ. ಆದರೆ, ನಾನು ಎಲ್ಲರ ಪರವಾಗಿ ನಿಲ್ತೀನಿ. ನಮ್ಮ ಸಿನಿಮಾ ಇಂಡಸ್ಟ್ರಿ ಒಂದು ಕುಟುಂಬ ಇದ್ದಂತೆ. ಸಿಎಂ ಮಾತನಾಡಿದ್ದಾರೆ, ನಮ್ಮ ಸಮಸ್ಯೆಗೆ ಸ್ಪಂದಿಸಿದ್ದಾರೆ'' ಎಂದಿದ್ದಾರೆ.