ಇನ್ನು, ಆಗ ಸಿಂಗಲ್ ಸ್ಕ್ರೀನಿಂಗ್ ಇರಲಿ, ಮಲ್ಟಿಪ್ಲೆಕ್ಸ್ ಇರಲಿ, ಯಾವುದೇ ಚಿತ್ರಮಂದಿರವಾದರೂ ಟಿಕೆಟ್ ಪ್ರೈಸ್ 200 ದಾಟೋ ಆಗಿಲ್ಲ ಅಂತ ಆದೇಶ ಹೊರಡಿಸಲಾಗಿತ್ತು. ಆದರೆ, ಮಲ್ಟಿಪ್ಲೆಕ್ಸ್ ಮಾಲೀಕರು ಸರ್ಕಾರದ ಆದೇಶದ ವಿರುದ್ದ ಕೋರ್ಟ್ ಮೊರೆ ಹೋಗಿದ್ದರು. ಹೀಗಾಗಿ, ಟಿಕೆಟ್ ಬೆಲೆಯ ಹೊಸ ಆದೇಶದ ಮೇಲೆ ಸ್ಟೇ ತರಲಾಗಿದ್ದು, ಸದ್ಯ, ಈ ವಿಚಾರ ಇನ್ನೂ ಕೋರ್ಟ್ ನಲ್ಲಿದೆ. ಮತ್ತೊಂದೆಡೆ, ನಾಳೆ ಅಂದರೆ ಮಾ. 25 ರಂದು 'ಆರ್ಆರ್ಆರ್' ರಿಲೀಸ್ ಆಗಲಿದ್ದು, ಮಲ್ಟಿಪ್ಲೆಕ್ಸ್ ನವರು ಮನಸೋ ಇಚ್ಚೆ ಪ್ರೈಸ್ ಫಿಕ್ಸ್ ಮಾಡುತ್ತಿದ್ದಾರೆ. ಈಗಾಗಲೇ, 'ಆರ್ಆರ್ಆರ್' ಟಿಕೆಟ್ ಪ್ರೈಸ್ ಕರುನಾಡಲ್ಲಿ 500-1000 ರೂ.. ದಾಟುತ್ತಿದೆ.