More

    ಕನ್ನಡನಾಡಿನ ಧೀಮಂತ ಶಕ್ತಿ

    ಕಂಪ್ಲಿ: ಪುನೀತ್‌ರಾಜಕುಮಾರ್ ಅವರ ತತ್ವಾದರ್ಶ, ಸಮಾಜ ಸೇವಾ ಕಾರ್ಯಗಳು ಸದಾ ಅನುಕರಣೀಯವಾಗಿವೆ ಎಂದು ಇಲ್ಲಿನ ಪುನೀತ್‌ರಾಜಕುಮಾರ್ ಅಭಿಮಾನಿಗಳ ಬಳಗದ ಸದಸ್ಯ ಪೇಂಟರ್ ರಾಜಾ ಉಪೇಂದ್ರ ಹೇಳಿದರು.

    ಸಮಾಜ ಸೇವಾ ಕಾರ್ಯಗಳು ಸದಾ ಅನುಕರಣೀಯ

    ಪಟ್ಟಣದ ನೀರಾವರಿ ನಿಗಮ ಬಳಿಯ ಪುನೀತ್‌ರಾಜಕುಮಾರ್ ಆಟೋನಿಲ್ದಾಣದಲ್ಲಿ ಭಾನುವಾರ ಅಪ್ಪು ಅವರ 2ನೇ ವರ್ಷದ ಪುಣ್ಯ ಸ್ಮರಣಾರ್ಥ ಮಕ್ಕಳಿಗೆ ನೋಟ್‌ಬುಕ್ ವಿತರಿಸಿ ಮಾತನಾಡಿದರು. ಅಪ್ಪು ಕನ್ನಡನಾಡಿನ ಧೀಮಂತ ಶಕ್ತಿಯಾಗಿದ್ದಾರೆ. ಅವರನ್ನು ಯುವಜನತೆ ಪ್ರೇರಣೆಯನ್ನಾಗಿ ಸ್ವೀಕರಿಸಿ ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಬೇಕಿದೆ ಎಂದರು.

    ಇದನ್ನೂ ಓದಿ: ಗೋವಾದಲ್ಲಿ ಮೋಜು ಮಾಡಿ, ಮದ್ಯಪಾನ ಮಾಡಬೇಡಿ: ಕ್ರೀಡಾಪಟುಗಳಿಗೆ ಕಿವಿ ಮಾತು ಹೇಳಿದ ಮಾಜಿ ಮುಖ್ಯಮಂತ್ರಿ

    ಬಳಗದ ಪದಾಧಿಕಾರಿಗಳಾದ ಪ್ರಶಾಂತ್, ಆನಂದ, ನೂರ್‌ಬಾಷ, ರಿಹಾನ್, ಬಾಷ, ಮಲ್ಲಿಕಾರ್ಜುನ, ನಾಗೇಶ್ವರರಾವ್, ಮಹ್ಮದ್ ಸೇರಿ ಇತರರಿದ್ದರು.
    ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಮುಂಭಾಗದಲ್ಲಿನ ಡಾ.ಪುನೀತ್‌ರಾಜಕುಮಾರ್ ವೃತ್ತದಲ್ಲಿ ಅಭಿಮಾನಿಗಳು, ಕಂಪ್ಲಿ ಕರಾಟೆ ಸಂಸ್ಥೆಯ ಕರಾಟೆಪಟುಗಳು ಪುಣ್ಯಸ್ಮರಣೋತ್ಸವ ಆಚರಿಸಿದರು.

    ಪ್ರಮುಖರಾದ ರಾಮಚಂದ್ರ, ಸೋಫಿಸಾಬ್, ಪೇಂಟರ್ ನೀಲಪ್ಪ, ಭರತ್, ಖಾಜಾ, ಕರಾಟೆ ತರಬೇತುದಾರರಾದ ಮೊಹಮ್ಮದ್, ಕೇದಾರನಾಥ್, ಜೀಮ್ ಬಾಬು, ಗಂಗಣ್ಣ, ವೀರೇಶ್, ಆರ್.ಪಿ.ಶಶಿಕುಮಾರ್, ಎಂ.ರಾಜಭಕ್ಷಿ, ಬಸವ ಸೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts