More

  ಗೋವಾದಲ್ಲಿ ಮೋಜು ಮಾಡಿ, ಮದ್ಯಪಾನ ಮಾಡಬೇಡಿ: ಕ್ರೀಡಾಪಟುಗಳಿಗೆ ಕಿವಿ ಮಾತು ಹೇಳಿದ ಮಾಜಿ ಮುಖ್ಯಮಂತ್ರಿ

  ಗೋವಾ: ಗೋವಾದ ಮಾಜಿ ಮುಖ್ಯಮಂತ್ರಿ ಮತ್ತು ಪ್ರಸ್ತುತ ಕೃಷಿ ಸಚಿವ ರವಿ ನಾಯ್ಕ್, ಕ್ರೀಡಾಪಟುಗಳು ಗೋವಾದಲ್ಲಿ ತಮ್ಮ ಸಮಯವನ್ನು ಆನಂದಿಸಿ ಆದರೆ ಕಡಿಮೆ ಬೆಲೆಗೆ ಲಭ್ಯವಿದ್ದರೂ ಸಹ ಮದ್ಯವನ್ನು ದೂರವಿಡಿ ಎಂದು ಸಲಹೆ ನೀಡಿದ್ದಾರೆ.

  ಗೋವಾದಲ್ಲಿ ಪ್ರಥಮ ಬಾರಿಗೆ ನಡೆಯುತ್ತಿರುವ 37ನೇ ರಾಷ್ಟ್ರೀಯ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವನ್ನು ಮಾರ್ಗೂದಲ್ಲಿರುವ ಪಂಡಿತ್ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿ ಮಾತನಾಡಿದ್ದಾರೆ.

  37ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿದ ರವಿ ನಾಯ್ಕ್, ಕ್ರೀಡಾಪಟುಗಳು ಗೋವಾದಲ್ಲಿ ಮೋಜು ಮಸ್ತಿ ಮಾಡಿ,ಆದರೆ ಕಡಿಮೆ ದರದಲ್ಲಿ ಮದ್ಯ ದೊರೆಯುತ್ತದೆ ಎಂದು ಮದ್ಯಪಾನ ಮಾಡಬೇಡಿ. ನೀವು ರಾಷ್ಟ್ರೀಯ ಕ್ರೀಡಾಪಟುವಾಗಿರುವುದರಿಂದ ಮದ್ಯಪಾನ ಮಾಡಬೇಡಿ. ಗೋವಾದಲ್ಲಿ ಅಗ್ಗವಾಗಿ ಮದ್ಯ ದೊರೆಯುತ್ತಿದ್ದು, ಗೋಡಂಬಿಯೂ ಅಗ್ಗವಾಗಿ ದೊರೆಯುತ್ತಿದೆ ಎಂದು ಕ್ರೀಡಾ ಪಟುಗಳಿಗೆ ಸಚಿವರು ಸಲಹೆ ನೀಡಿದರು.

  ನವೆಂಬರ್ 9ರವರೆಗೆ ನಡೆಯಲಿರುವ ಈ ಕ್ರೀಡಾಕೂಟದಲ್ಲಿ ಹತ್ತು ಸಾವಿರ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಬಹು-ಕ್ರೀಡಾ ಕಾರ್ಯಕ್ರಮದ ನಂತರ ಐದು ಗಂಟೆಗಳ ಭವ್ಯವಾದ ಉದ್ಘಾಟನಾ ಸಮಾರಂಭ ನಡೆಯಿತು. ಈ ಉತ್ಸವದಲ್ಲಿ 600 ಕಲಾವಿದರು ಪ್ರದರ್ಶನ ನೀಡಿದರು.

  ಹುಲಿ ಉಗುರು ಅಷ್ಟು ಪವರ್​​ಫುಲ್ಲಾ?; ಯಾಕೆ ಧರಿಸುತ್ತಾರೆ ಗೊತ್ತಾ?

  VIDEO | 2 ಕೋಟಿ ರೂ. ಬೆಲೆ ಫ್ಲಾಟ್​​ ಖರೀದಿಗೆ ರಾತ್ರಿ 8 ತಾಸು ರಸ್ತೇಲಿ ಸರತಿ ಸಾಲಿನಲ್ಲಿ ನಿಂತ ಜನ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts