ಮುಂಬೈ: ಪುಣೆ, ದೆಹಲಿ ಮತ್ತು ಮುಂಬೈನಂತಹ ಮೆಗಾಸಿಟಿಗಳಲ್ಲಿನ ಆಸ್ತಿ ದರಗಳು ಪ್ರತಿ ವರ್ಷವೂ ಗಗನಕ್ಕೇರುತ್ತಿವೆ. ಆದರೆ, ದುಬಾರಿ ದರದ ಹೊರತಾಗಿಯೂ ಜನರು ಮನೆ ಖರೀದಿಸಲು ಸರತಿ ಸಾಲಿನಲ್ಲಿ 8 ತಾಸು ರಸ್ತೆಲಿ ನಿಂತಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ವಿಕಾಸ್ ಜಾವಡೇಕರ್ ಎಂಬ ಬಿಲ್ಡರ್ ಈ ವಸತಿ ಸಮುಚ್ಚಯ ಮಾಲೀಕರು ಪುಣೆಯಿಂದ 15 ಕಿಲೋಮೀಟರ್ ದೂರದ ವಾಕಡ್‌ನಲ್ಲಿ ಅಪಾರ್ಟ್‌ಮೆಂಟ್ ನಿರ್ಮಿಸಿದ್ದಾರೆ. ಇದನ್ನು ಖರೀದಿ ಮಾಡಲು ಜನರು ಮುಗಿಬಿದ್ದು, 8 ತಾಸು ಸಾಲಿನಲ್ಲಿ ಕಾದು ನಿಂತಿದ್ದರು. ಈ ವಿಡಿಯೋ ವೈರಲ್ ಆಗಿದೆ.
People stand in a queue for 8 hours to buy a new 1.5-2 crore apartment in Pune. (📸- @Ayeits_Ekant) pic.twitter.com/iYyEkZ1wwr
— Indian Tech & Infra (@IndianTechGuide) October 27, 2023
ಪುಣೆಯ ವಕಾಡ್‌ನಲ್ಲಿರುವ ಜನರು ವಸತಿ ಸಮುಚ್ಚಯದಂತೆ ಕಾಣುವ ಹೊರಗೆ ಸರತಿ ಸಾಲಿನಲ್ಲಿ ನಿಂತಿರುವುದನ್ನು ತೋರಿಸುತ್ತದೆ. “ಹೊಸ 1.5-2 ಕೋಟಿ ಅಪಾರ್ಟ್‌ಮೆಂಟ್ ಖರೀದಿಸಲು” ಜನರು ಎಂಟು ಗಂಟೆಗಳ ಕಾಲ ಅಲ್ಲಿ ನಿಂತಿದ್ದಾರೆ ಎಂದು ಎಕ್ಸ್ ಬಳಕೆದಾರರು ಹೇಳಿದ್ದಾರೆ. ಈ ಪೋಸ್ಟ್ ಆರು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ. ಹೊಸ 1.5-2 ಕೋಟಿ ಅಪಾರ್ಟ್‌ಮೆಂಟ್ ಖರೀದಿಸಲು” ಜನರು ಎಂಟು ಗಂಟೆಗಳ ಕಾಲ ಅಲ್ಲಿ ನಿಂತಿದ್ದಾರೆ ಎಂದು ಎಕ್ಸ್ ಬಳಕೆದಾರರು ಹೇಳಿದ್ದಾರೆ.