ನಿಧಿಮಾಳನ್ನು ಕಳೆದುಕೊಳ್ಳುವ ಆದಿ ಮುಂದೇನು ಮಾಡುತ್ತಾನೆ ಎಂಬುದೇ 'ಲವ್ ಮಾಕ್ಟೆಲ್ 2' ಚಿತ್ರದ ಕಥೆಯಾಗಿದೆ. ಇದೀಗ, ಬಿಡುಗಡೆಯಾದ ಟ್ರೈಲರ್ ಸಾಕಷ್ಟು ಕುತೂಹಲವನ್ನು ಸಿನಿಪ್ರೇಕ್ಷಕರಲ್ಲಿ ಹುಟ್ಟಿಸಿದೆ. ಹಾಗಾಗಿ, ಸಿನಿಮಾ ನೋಡಲು ವೀಕ್ಷಕರು ಕಾದು ಕುಳಿತಿದ್ದಾರೆ ಎನ್ನಬಹುದು. ಹೀಗೆ ಸಾಕಷ್ಟು ಕುತೂಹಲ ಹುಟ್ಟಿಸಿರುವ 'ಲವ್ ಮಾಕ್ಟೆಲ್ 2' ಚಿತ್ರದ ಟ್ರೈಲರ್ ಸದ್ಯ ಯುಟ್ಯೂಬ್ನಲ್ಲಿ ದಾಖಲೆಗಳನ್ನು ಬರೆಯುತ್ತಿದೆ.