ಜಾಕಿ ಶ್ರಾಫ್ ಪುತ್ರಿ, ಟೈಗರ್ ಶ್ರಾಫ್ ಸಹೋದರಿಯಾಗಿರುವ ಕೃಷ್ಣ ಶ್ರಾಫ್ ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳದಿದ್ದರೂ, ಗ್ಲಾಮರ್ ಕ್ಷೇತ್ರದಲ್ಲಿ ಹೆಸರು ಮಾಡುತ್ತಿದ್ದಾರೆ. ಫಿಟ್ನೆಸ್ ವಿಚಾರದಲ್ಲಿ ಕಟ್ಟುನಿಟ್ಟಾಗಿರುವ ಕೃಷ್ಣ, ಸಿಕ್ಸ್ ಪ್ಯಾಕ್ ಆ್ಯಬ್ಸ್ ಸಹ ಹೊಂದಿದ್ದು, ಅಂಥ ಒಂದಷ್ಟು ಫೋಟೋಗಳನ್ನು ಸೋಷಿಯಲ್ ಮೀಡಿಯಾ ವೇದಿಕೆ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.