More

    ಪ್ರಭಾಸ್ ಚಿತ್ರದಲ್ಲಿ 10ಕ್ಕೂ ಅಧಿಕ ಬಾಲಿವುಡ್ ನಟರು!; ತಂಡದ ಕಲಾವಿದರ ಸಂಭಾವನೆಯೇ 200 ಕೋಟಿ ರೂ!

    ಮುಂಬೈ: ಟಾಲಿವುಡ್​ನಲ್ಲಿ ಮೋಡಿ ಮಾಡಿ, ಬಾಲಿವುಡ್​ನಲ್ಲಿಯೂ ಹೆಸರು ಮಾಡಿರುವ ನಟ ಪ್ರಭಾಸ್​, ಪ್ಯಾನ್​ ಇಂಡಿಯಾ ಹೀರೋ ಆಗಿ ಗುರುತಿಸಿಕೊಂಡಿದ್ದಾರೆ. ಈಗಾಗಲೇ ಅವರ ಸಾಲು ಸಾಲು ಸಿನಿಮಾಗಳು ಶೂಟಿಂಗ್​ ಹಂತದಲ್ಲಿದ್ದರೆ, ಇನ್ನೇನು ಸೆಟ್ಟೇರುವ ಚಿತ್ರಗಳೂ ಹಲವಾರಿವೆ. ಇದೀಗ ಹೊಸ ಸುದ್ದಿ ಏನೆಂದರೆ, ಪ್ರಭಾಸ್ ಅವರ ಮುಂದಿನ ಸಿನಿಮಾದಲ್ಲಿ 10ಕ್ಕೂ ಅಧಿಕ ಬಾಲಿವುಡ್​ ಕಲಾವಿದರು ನಟಿಸಲಿದ್ದಾರೆ ಎಂಬುದು!

    ಇದನ್ನೂ ಓದಿ: ವಿಜಯ್ ಚಿತ್ರಕ್ಕೆ ಕೀರ್ತಿ; ಹ್ಯಾಟ್ರಿಕ್ ಬಾರಿಸುತ್ತಾರಾ ಮಹಾನಟಿ?

    ಹೌದು, ಟಾಲಿವುಡ್​ನಲ್ಲಿ ವೈಜಯಂತಿ ಮೂವೀಸ್ ಬ್ಯಾನರ್​ನಲ್ಲಿ ಸಿದ್ಧವಾಗುತ್ತಿರುವ ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಮತ್ತು ದೀಪಿಕಾ ಪಡುಕೋಣೆ ನಟಿಸಲಿದ್ದಾರೆ ಎಂಬ ವಿಚಾರವನ್ನು ಸ್ವತಃ ನಿರ್ಮಾಣ ಸಂಸ್ಥೆ ಘೋಷಿಸಿಕೊಂಡಿದೆ. ಇದೀಗ ಈ ಇಬ್ಬರು ಬಿಗ್ ಸ್ಟಾರ್​ಗಳ ಜತೆಗೆ ಇನ್ನೂ 10ಕ್ಕೂ ಅಧಿಕ ಬಾಲಿವುಡ್​ನ ಘಟಾನುಘಟಿಗಳು ಈ ಸಿನಿಮಾದಲ್ಲಿ ನಟಿಸಲಿದ್ದಾರಂತೆ.

    ಇನ್ನೊಂದು ವಿಶೇಷತೆ ಇನ್ನೊಂದು ಈ ಸಿನಿಮಾದಲ್ಲಿ ನಟಿಸಲಿರುವ ಎಲ್ಲ ಕಲಾವಿದರ ಸಂಭಾವನೆಯೇ 200 ಕೋಟಿ ರೂಪಾಯಿಯಂತೆ! ಹೀಗೊಂದು ಸುದ್ದಿಯೂ ಈಗಾಗಲೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಯಾವೆಲ್ಲ ಕಲಾವಿದರನ್ನು ತಂಡ ಬರಮಾಡಿಕೊಳ್ಳಲಿದೆ ಎಂಬುದು ಸದ್ಯದ ಕುತೂಹಲದ ವಿಚಾರ.

    ಇದನ್ನೂ ಓದಿ: ರೆಬೆಲ್​ಸ್ಟಾರ್​ ಅಂಬರೀಷ್ ಸರಳ ಜನ್ಮದಿನಾಚರಣೆ

    ಒಂದಲ್ಲ ಎರಡಲ್ಲ ಹಲವು ಭಾಷೆಗಳಲ್ಲಿ ಸಿದ್ಧಗೊಳ್ಳಲಿರುವ ಈ ಚಿತ್ರ ಸದ್ಯ ಪ್ರೀ ಪ್ರೊಡಕ್ಷನ್​ ಕೆಲಸಗಳನ್ನು ಬಹುತೇಕ ಮುಗಿಸಿಕೊಂಡಿದ್ದು, ಕಲಾವಿದರ ಪಟ್ಟಿಯನ್ನೂ ಸಿದ್ಧಪಡಿಸಿದೆ. ಒಬ್ಬೊಬ್ಬರನ್ನೇ ಆಯ್ದುಕೊಳ್ಳುವ ಕೆಲಸವನ್ನೂ ಮಾಡುತ್ತಿದೆ. ಆದರೆ, ಆ ಆಯ್ಕೆ ಮಟ್ಟಿಯ ಅಧಿಕೃತ ಘೋಷಣೆ ಮುಂದಿನ ದಿನಗಳಲ್ಲಿ ಮಾಡಿಲಿದೆಯಂತೆ ನಿರ್ಮಾಣ ಸಂಸ್ಥೆ. ಮಹಾನಟಿ ಸಿನಿಮಾ ಖ್ಯಾತಿಯ ನಾಗ್​ ಅಶ್ವಿನ್ ಈ ಚಿತ್ರ ನಿರ್ದೇಶಿಸಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts