

‘ಮಹಾನಟಿ’ ಖ್ಯಾತಿಯ ಕೀರ್ತಿ ಸುರೇಶ್ ಕೈಯಲ್ಲಿ ಈಗಾಗಲೇ ಹಲವು ಚಿತ್ರಗಳಿವೆ. ರಜನಿಕಾಂತ್, ಮಹೇಶ್ ಬಾಬು ಮುಂತಾದ ಸ್ಟಾರ್ ನಟರ ಚಿತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ. ಈಗ ಅವರ ಚಿತ್ರಗಳ ಪಟ್ಟಿಗೆ ಇನ್ನೊಂದು ಚಿತ್ರ ಸೇರಿಕೊಂಡಿದೆ. ತಮಿಳು ನಟ ವಿಜಯ್ ಮೊದಲ ಬಾರಿಗೆ ಒಂದು ತೆಲುಗು ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ವಿಷಯ ಹೊಸದೇನಲ್ಲ. ಈ ಚಿತ್ರಕ್ಕೆ ಕೀರ್ತಿ ನಾಯಕಿಯಾಗಲಿದ್ದಾರೆ ಎಂಬ ವಿಷಯ ಟಾಲಿವುಡ್ ಅಂಗಳದಲ್ಲಿ ಕೇಳಿಬಂದಿದೆ.
ವಿಜಯ್ ಜತೆಗೆ ಕೀರ್ತಿ ನಟಿಸುತ್ತಿರುವುದು ಇದು ಮೊದಲೇನಲ್ಲ. ಈಗಾಗಲೇ ಅವರಿಬ್ಬರೂ ‘ಭೈರವ’ ಮತ್ತು ‘ಸರ್ಕಾರ್’ ಚಿತ್ರಗಳಲ್ಲಿ ಜತೆಯಾಗಿ ನಟಿಸಿದ್ದಾರೆ. ಈಗ ಮೂರನೆಯ ಬಾರಿಗೆ ಇಬ್ಬರೂ ಜತೆಯಾಗಿ ನಟಿಸುತ್ತಿದ್ದಾರೆ. ಒಬ್ಬ ನಟಿಗೆ ಸ್ಟಾರ್ ಹೀರೋ ಜತೆಗೆ ಒಂದು ಚಿತ್ರದಲ್ಲಿ ಅವಕಾಶ ಸಿಗುವುದೇ ಕಷ್ಟವಾಗಿರುವಾಗ, ಸತತವಾಗಿ ಮೂರನೇ ಚಿತ್ರದಲ್ಲಿ ನಟಿಸುತ್ತಿರುವುದು, ಕೀರ್ತಿ ಪಾಲಿಗೆ ಇದು ವಿಜಯವೇ ಸರಿ. -ಏಜೆನ್ಸೀಸ್