More

    ಕಥೆಗಾರ್ತಿಯಾದ ರೋಶನಿ; ಲಾಕ್​ಡೌನ್​ನಲ್ಲಿ ಬರವಣಿಗೆ ಶುರು..

    ಬೆಂಗಳೂರು: ‘ಕವಲುದಾರಿ’ ಚಿತ್ರದ ನಂತರ ರೋಶನಿ ಪ್ರಕಾಶ್ ಅಭಿನಯದ ಬೇರ್ಯಾವ ಕನ್ನಡ ಚಿತ್ರವೂ ಬಿಡುಗಡೆಯಾಗಿಲ್ಲ. ಹಾಗಂತ ಅವರು ಕನ್ನಡ ಸಿನಿಮಾದಲ್ಲಿ ನಟಿಸಲೇ ಇಲ್ಲ ಅಂತಲ್ಲ. ಕನ್ನಡದಲ್ಲಿ ಎರಡು ಚಿತ್ರಗಳಲ್ಲಿ ನಟಿಸಿರುವ ಅವರು, ಅದರ ಜತೆಗೆ ತೆಲುಗು ಮತ್ತು ತಮಿಳಿನಲ್ಲಿ ಸಕ್ರಿಯರಾದರು. ಸಿನಿಮಾ, ವೆಬ್​ಸಿರೀಸ್​ಗಳಲ್ಲಿ ನಟಿಸಿ ಬಂದಿರುವ ರೋಶನಿ, ಇದೀಗ ಲಾಕ್​ಡೌನ್ ಗ್ಯಾಪ್​ನಲ್ಲಿ ಕಥೆ ಬರೆಯುವುದರಲ್ಲಿ ನಿರತರಾಗಿದ್ದಾರೆ!

    ಹೌದು, ನಟನೆ ಜತೆಗೆ ಬರವಣಿಗೆಯಲ್ಲಿಯೂ ರೋಶನಿ ತೊಡಗಿಸಿಕೊಂಡಿದ್ದಾರೆ. ‘ಮೊದಲಿಂದಲೂ ಬರವಣಿಗೆ ಇಷ್ಟ. ಸಮಯ ಸಿಕ್ಕಾಗಲೆಲ್ಲ ಏನಾದರೂ ಬರೆಯುತ್ತಿರುತ್ತೇನೆ. ಆದರೆ, ಅದನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಇದೀಗ ಲಾಕ್​ಡೌನ್ ಇರುವುದರಿಂದ ಶೂಟಿಂಗ್ ನಡೆಯುತ್ತಿಲ್ಲ. ಆ ಸಮಯವನ್ನೇ ಬಂಡವಾಳ ಮಾಡಿಕೊಂಡು, ಬರವಣಿಗೆ ಶುರು ಮಾಡಿದ್ದೇನೆ. ನನ್ನೊಂದಿಗೆ ನನ್ನ ಹಲವು ಸ್ನೇಹಿತರೂ ಕೈ ಜೋಡಿಸಿದ್ದಾರೆ’ ಎಂಬುದು ಅವರ ಮಾತು. ಅಂದಹಾಗೆ, ಸೀಮಿತ ಶೈಲಿಗೆ ಅಂಟಿಕೊಳ್ಳುವುದು ರೋಶನಿಗೆ ಇಷ್ಟವಿಲ್ಲವಂತೆ. ಎಲ್ಲ ಬಗೆಯ ಪಾತ್ರಗಳಲ್ಲಿಯೂ ನಟಿಸಬೇಕೆಂಬ ಹಂಬಲ ಅವರದ್ದು.

    ‘ಇದೀಗ ನಾನು ಬರೆಯುತ್ತಿರುವ ಕಥೆಯಲ್ಲಿ ಸಾಮಾಜಿಕ ಸಂದೇಶ ಪ್ರಧಾನವಾಗಿದೆ. ಎಲ್ಲ ವರ್ಗದ ಪ್ರೇಕ್ಷಕರಿಗೂ ಇದು ಸಲ್ಲಬೇಕು. ನಟನೆ ವಿಚಾರದಲ್ಲಿಯೂ ಒಂದೇ ಶೈಲಿಯ ಸಿನಿಮಾಗಳಲ್ಲಿ ನಟಿಸುವುದು ಇಷ್ಟವಿಲ್ಲ’ ಎನ್ನುತ್ತಾರವರು. ಸದ್ಯ, ಕನ್ನಡದಲ್ಲಿ ಪ್ರದೀಪ್ ವರ್ವ ನಿರ್ದೇಶನದ ‘ಮರ್ಫಿ’ ಚಿತ್ರದ ಒಂದು ಹಂತದ ಶೂಟಿಂಗ್ ಮುಗಿಸಿರುವ ರೋಶನಿ, ತಮಿಳಿನ ‘ಓ ಮೈ ಕಡವುಳೆ’ ಕನ್ನಡ ರಿಮೇಕ್​ನಲ್ಲೂ ನಟಿಸಿದ್ದು, ಈ ಎರಡು ಚಿತ್ರಗಳು ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಲಾಕ್​ಡೌನ್ ಮುಗಿದು, ಸಹಜ ಸ್ಥಿತಿಗೆ ಬಂದ ನಂತರ, ಈ ಚಿತ್ರಗಳು ಬಿಡುಗಡೆಯಾಗುವ ನಿರೀಕ್ಷೆ ಇದೆ.

    ರಾಜಕೀಯ ಬಿಟ್ಟು ಇನ್ಯಾವ ಬಿಜಿನೆಸ್ಸೂ ಜಾತಿ ಆಧಾರದ ಮೇಲೆ ನಡೆಯಲ್ಲ: ಉಪೇಂದ್ರ; ‘ದಿಗ್ವಿಜಯ ನ್ಯೂಸ್’ ಸಂದರ್ಶನ ವೈರಲ್

    ಕರೊನಾ ಸೋಂಕನ್ನು ಗೆದ್ದ ಶತಾಯುಷಿ ದಂಪತಿ; ಹೂವಿನ ಹಾರ ಹಾಕಿ ಸ್ವಾಗತಿಸಿದ ಗ್ರಾಮಸ್ಥರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts