ರೆಬೆಲ್​ಸ್ಟಾರ್​ ಅಂಬರೀಷ್ ಸರಳ ಜನ್ಮದಿನಾಚರಣೆ

Ambi
Published on

ಬೆಂಗಳೂರು: ಕರೊನಾ ಇರುವುದರಿಂದ ಅಂಬರೀಷ್ ಅವರ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿ ಎಂದು ಸುಮಲತಾ ಅಂಬರೀಷ್ ಮನವಿ ಮಾಡಿಕೊಂಡಿದ್ದರು. ಯಾವುದೇ ಸಾರ್ವಜನಿಕ ಸಮಾರಂಭ ಅಥವಾ ಸಂಭ್ರಮ ಬೇಡ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ಅದರಂತೆ, ಶನಿವಾರ ಬಹಳ ಸರಳವಾಗಿ ಅಂಬರೀಷ್ ಅವರ ಹುಟ್ಟುಹಬ್ಬ ಆಚರಿಸಲಾಗಿದೆ. ಈ ಸಂದರ್ಭದಲ್ಲಿ ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಷ್ ಸಮಾಧಿಗೆ ಪೂಜೆ ಸಲ್ಲಿಸಲಾಗಿದೆ. ಈ ಸಂದರ್ಭದಲ್ಲಿ ಸುಮಲತಾ ಅವರ ಜತೆಗೆ ಅಭಿಷೇಕ್ ಅಂಬರೀಷ್, ರಾಕ್​ಲೈನ್ ವೆಂಕಟೇಶ್, ದೊಡ್ಡಣ್ಣ ಸೇರಿದಂತೆ ಕೆಲವರಷ್ಟೇ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net