ಇದು ನಗಿಸುವ ಭೂತಾತ್ಮ : ತೆರೆಗೆ ಬರಲು "ನಮೋ ಭೂತಾತ್ಮ 2' ರೆಡಿ

asdsdasdasdad
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಕೋಮಲ್​ ಕುಮಾರ್​ ಅಭಿನಯದ ಚಿತ್ರ "ನಮೋ ಭೂತಾತ್ಮ'. ನೃತ್ಯ ನಿರ್ದೇಶಕ ಮುರಳಿ ಮಾಸ್ಟರ್​ ಆ್ಯಕ್ಷನ್​ ಕಟ್​ ಹೇಳಿದ್ದ ಮೊದಲ ಚಿತ್ರವಿದು. 2014ರಲ್ಲಿ ಸಿನಿಮಾ ರಿಲೀಸ್​ ಆಗಿತ್ತು. ಇದೀಗ ಒಂಬತ್ತು ವರ್ಷಗಳ ನಂತರ ಕೋಮಲ್​ ಮತ್ತು ಮುರಳಿ ಜೋಡಿ ಚಿತ್ರದ ಸೀಕ್ವಲ್​ ಜತೆ ಮತ್ತೆ ವಾಪಸ್ಸಾಗಿದ್ದಾರೆ.

ಮೊದಲ ಚಿತ್ರದಲ್ಲಿ ಹಾರರ್​ ಅಂಶಗಳು ಹೆಚ್ಚಿದ್ದವು. ಹೀಗಾಗಿಯೇ "ನಮೋ ಭೂತಾತ್ಮ 2' ಚಿತ್ರ ಹಾರರ್​ಗಿಂತಲೂ ಹಾಸ್ಯಪ್ರಧಾನವಾಗಿರಲಿದೆ. ಈಗಾಗಲೇ ಚಿತ್ರದ ಟ್ರೇಲರ್​ ಬಿಡುಗಡೆಯಾಗಿದ್ದು ಜಾಲತಾಣದಲ್ಲಿ ವೈರಲ್​ ಆಗಿದೆ. ಕೋಮಲ್​ ಕುಮಾರ್​ ಜತೆ ಲೇಖಚಂದ್ರ, ವರುಣ್​ ರವಿ, ಮೋನಿಕಾ ಗೌಡ, ಗೋವಿಂದೇಗೌಡ, ಮಹಾಂತೇಶ್​ ಹಿರೇಮಠ್​ ಪ್ರಮುಖ ತಾರಾಗಣದಲ್ಲಿದ್ದಾರೆ.

ಚಿತ್ರಕ್ಕೆ ಅರುಣ್​ ಆ್ಯಂಡ್ರ್ಯೂ ಸಂಗೀತ ನಿರ್ದೇಶನ, ಹಾಲೇಶ್​ ಛಾಯಾಗ್ರಹಣ, ಅಮಿತ್​ ಸಂಕಲನ, ಸತೀಶ್​ ಕಲಾನಿರ್ದೇಶನವಿರಲಿದೆ. ನೃತ್ಯ ನಿರ್ದೇಶಕ ಸಂತೋಷ್​ ಶೇಖರ್​ "ನಮೋ ಭೂತಾತ್ಮ 2' ನಿರ್ಮಿಸಿದ್ದು, ಸಿನಿಮಾ ಇದೇ ಆ. 4ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net