More

    ನಿಜವಾದ ಗಂಡಸು ಎಂದರೆ ಯಾರು? ಕೌಸಲ್ಯಾ ಸುಪ್ರಜಾ ರಾಮ ನೋಡಲು ಐದು ಕಾರಣಗಳು…

    | ಹರ್ಷವರ್ಧನ್​ ಬ್ಯಾಡನೂರು

    ಶಶಾಂಕ್​ ನಿರ್ದೇಶನದ,ಡಾರ್ಲಿಂಗ್​ ಕೃಷ್ಣ ನಟಿಸಿರುವ ಸಿನಿಮಾ “ಕೌಸಲ್ಯಾ ಸುಪ್ರಜಾ ರಾಮ’. ಚಿತ್ರಕ್ಕೆ “ಎ ಟೇಲ್​ ಆ್​ ಎ ರಿಯಲ್​ ಮ್ಯಾನ್​’ ಅರ್ಥಾತ್​ ನಿಜವಾದ ಗಂಡಸಿನ ಕಥೆ ಎಂಬ ಅಡಿಬರಹವಿದೆ. ಈಗಾಗಲೇ ಟ್ರೇಲರ್​ ಮತ್ತು ಹಾಡುಗಳು ಪ್ರೇಕ್ಷಕರಲ್ಲಿ ನಿರೀೆ ಮೂಡಿಸಿದ್ದು, ಇಂದು ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಇದೇ ಖುಷಿಯಲ್ಲಿ ಚಿತ್ರತಂಡ ಈ ಸಿನಿಮಾ ಏಕೆ ನೋಡಬೇಕೆಂದು ಐದು ಕಾರಣಗಳನ್ನು ನೀಡಿದೆ.

    ನಿಜವಾದ ಗಂಡಸು ಎಂದರೆ ಯಾರು? ಕೌಸಲ್ಯಾ ಸುಪ್ರಜಾ ರಾಮ ನೋಡಲು ಐದು ಕಾರಣಗಳು...

    ಶಶಾಂಕ್​:

    • “ಕೌಸಲ್ಯಾ ಸುಪ್ರಜಾ ರಾಮ’ ಅಂದರೆ ಕೌಸಲ್ಯೆಯ ಮಗ ಸುಪ್ರಜೆ ರಾಮ ಅಂತರ್ಥ. ಈ ಸಂದರ್ಭದಲ್ಲಿ ಬೇಕಾಗಿರುವ ವಿಷಯ. ನಮ್ಮದು ಪುರುಷ ಪ್ರಧಾನ ಸಮಾಜ. ಅದರ ಸಮಸ್ಯೆಗಳ ಸುತ್ತ ಸುತ್ತುವ ಸಿನಿಮಾ. ರಿಲೀಸ್​ ಬಳಿಕ ಚಿತ್ರದ ವಿಷಯ ಏನು ಅಂತ ತಿಳಿದ ಬಳಿಕ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತದೆ ಎಂಬ ನಂಬಿಕೆಯಿದೆ.
    • ಕೃಷ್ಣ ಜತೆ ನಾನು ಇದುವರೆಗೂ ಸಿನಿಮಾ ಮಾಡಿಲ್ಲ. ನಾವಿಬ್ಬರೂ ಯೂತ್​ುಲ್​, ್ಯಾಮಿಲಿ ಎಂಟರ್​ಟೇನರ್​ ಚಿತ್ರಗಳನ್ನು ಹೆಚ್ಚು ಮಾಡಿದ್ದೇವೆ. ನಿಜವಾದ ಗಂಡಸು ಎಂದರೆ ಯಾರು? ಎನ್ನುವುದನ್ನು ಹೆಣ್ಣಿನ ದೃಷ್ಟಿಯಲ್ಲಿ ಹೇಳುವ ಚಿತ್ರ. ಭಾರತದಲ್ಲಿ ಇಂತಹ ಪ್ರಯತ್ನವಾಗಿಲ್ಲ.
    • 2022ರ ಮಾರ್ಚ್​ 8ರ ಮಹಿಳಾ ದಿನದಂದು ಈ ಕಥೆ ಹುಟ್ಟಿದ್ದು. ನಾವು ನೋಡಿರುವ ವಿಚಾರಗಳು, ಅನುಭವಗಳು, ಪಾತ್ರಗಳೇ ಈ ಚಿತ್ರದ ಟಾಪಿಕ್​. ಇದು ಪ್ರೇಕ್ಷಕರದೇ ಕಥೆ. ಸಿನಿಮಾ ನೋಡಿದರೆ ಎಲ್ಲರಿಗೂ ಆಶ್ಚರ್ಯವಾಗಲಿದೆ. ಪ್ರತಿಯೊಬ್ಬರೂ ಒಂದಲ್ಲಾ ಒಂದು ಪಾತ್ರಕ್ಕೆ ಕನೆಕ್ಟ್​ ಆಗುತ್ತಾರೆ.
    • ಇದು ನನ್ನ ಇದುವರೆಗಿನ ಬೆಸ್ಟ್​ ಸಿನಿಮಾ. ಈ ಹಿಂದಿನ ಒಂಬತ್ತು ಚಿತ್ರಗಳಿಗೆ ಹೋಲಿಸಿದರೆ, ಇದೇ ಬೆಸ್ಟ್​ ಕಥೆ.
    • ಇದುವರೆಗೆ ರಿಲೀಸ್​ ಮಾಡಿರುವ ಮೂರು ಹಾಡುಗಳು ಹಿಟ್​ ಆಗಿವೆ. ಇದಲ್ಲದೇ ಇನ್ನೂ ಒಂದು ಹಾಡಿದೆ. ಅದನ್ನು ಸಿನಿಮಾದಲ್ಲಿ ನೋಡಿದರೆ ಚಂದ.
    ನಿಜವಾದ ಗಂಡಸು ಎಂದರೆ ಯಾರು? ಕೌಸಲ್ಯಾ ಸುಪ್ರಜಾ ರಾಮ ನೋಡಲು ಐದು ಕಾರಣಗಳು...

    ಇದನ್ನೂ ಓದಿ : ವರ್ಷಕ್ಕೆರಡು ಚಿತ್ರ ನಿರ್ಮಿಸಲು ಅಶ್ವಿನಿ ಪುನೀತ್​ ರಾಜಕುಮಾರ್​ ನಿರ್ಧಾರ

    ಮಿಲನಾ ನಾಗರಾಜ್​:

    • ಬಹಳ ದಿನಗಳ ನಂತರ ಕುಟುಂಬ ಸಮೇತ ನೋಡಬಹುದಾದ ಚಿತ್ರ. ಸೂಕ್ಷ್ಮ ವಿಷಯ, ಈ ಹಿಂದೆ ನೋಡಿರದ ಹೊಸ ವಿಚಾರವಿದೆ.
    • ಶಶಾಂಕ್​ ಸರ್​ ಹಲವು ಹಿಟ್​ಗಳನ್ನು ನೀಡುವರ ನಿರ್ದೇಶಕ. ಸಿನಿಮಾ ನೋಡಲು ಮಜವಾಗಿದೆ.
    • ಕೆಲವು ಪಾತ್ರಗಳನ್ನು ಬಿಟ್ಟುಕೊಟ್ಟಿಲ್ಲ, ಅವನ್ನು ಚಿತ್ರದಲ್ಲಿ ನೋಡಿದಾಗ ಪ್ಲಸ್​ ಆಗುತ್ತದೆ.
    • “ಲವ್​ ಮಾಕ್ಟೇಲ್​’ ಸರಣಿ ಬಳಿಕ ಕೃಷ್ಣ ಲುಕ್​ ಬದಲಿಸಿ, ಬೇರೆ ರೀತಿಯ ಸಿನಿಮಾ ಮಾಡಬೇಕು ಅಂತಿದ್ದರು. ಇದು ಅವರ ಅತ್ಯುತ್ತಮ ಪಾರ್ಮೆನ್ಸ್​ ಇರುವ ಚಿತ್ರ.
    • ಐದನೇ ಕಾರಣ ನಾನೇ. ಯಾಕೆ ಅಂತ ಹೇಳುವುದಿಲ್ಲ. ಅದನ್ನು ತೆರೆಯ ಮೇಲೆ ನೋಡಿ ಗೊತ್ತಾಗುತ್ತದೆ.
    ನಿಜವಾದ ಗಂಡಸು ಎಂದರೆ ಯಾರು? ಕೌಸಲ್ಯಾ ಸುಪ್ರಜಾ ರಾಮ ನೋಡಲು ಐದು ಕಾರಣಗಳು...

    ಇದನ್ನೂ ಓದಿ : ರಕ್ತಾಕ್ಷ ಮಾಸ್ ಟೀಸರ್; ಸಿಕ್ಸ್ ಪ್ಯಾಕ್ ಲುಕ್‌ನಲ್ಲಿ ರೋಹಿತ್ ಭರ್ಜರಿ ಆ್ಯಕ್ಷನ್

    ಬೃಂದಾ ಆಚಾರ್ಯ:

    • ಶಶಾಂಕ್​ ಸರ್​ ಸಿನಿಮಾ ಎಂಬುದೇ ಮೊದಲ ಕಾರಣ. ಅವರು ಸುಮ್ಮನೆ ಸಿನಿಮಾ ಮಾಡುವವರಲ್ಲ. ಉತ್ತಮ ವಿಷಯಗಳನ್ನಿಟ್ಟುಕೊಂಡು ಅರ್ಥಪೂರ್ಣ ಚಿತ್ರಗಳನ್ನು ಮಾಡುತ್ತಾರೆ.
    • ನಾಯಕ, ನಾಯಕಿ ಅಂತಲ್ಲ ಎಲ್ಲ ಪಾತ್ರಗಳಿಗೂ ಪ್ರಾಮುಖ್ಯತೆ ಇದೆ. ಜತೆಗೆ ಎಲ್ಲ ಪಾತ್ರಗಳೂ ಮನಸ್ಸಿನಲ್ಲಿ ಉಳಿಯುತ್ತವೆ.
    • ರಿಲೀಸ್​ ಆಗಿರುವ ಮೂರು ಹಾಡುಗಳೂ ಹಿಟ್​ ಆಗಿವೆ. “ಪ್ರೀತಿಸುವೆ’, “ಶಿವಾನಿ’, “90 ಹಾಕು ಕಿಟ್ಟಪ್ಪ’ ಹಾಡುಗಳಿಗೆ ಒಳ್ಳೆ ಪ್ರತಿಕ್ರಿಯೆ ದೊರೆತಿದೆ. ಜತೆಗೆ ನಾನು ಈಗಾಗಲೇ ಸಿನಿಮಾ ನೋಡಿದ್ದೇನೆ. ಬಿಜಿಎಂ ಕೂಡ ಚೆನ್ನಾಗಿದೆ.
    • ಎಲ್ಲರೂ ವಿಭಿನ್ನ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದೇವೆ. ನಾಲ್ಕು ಶೇಡ್​ಗಳಲ್ಲಿ ಕೃಷ್ಣ ಸರ್​ ನಟಿಸಿದ್ದಾರೆ. ಇದುವರೆಗೂ ಅವರು ಆ ರೀತಿ ಕಾಣಿಸಿಕೊಂಡಿಲ್ಲ. ಮಿಲನಾ ನಾಗರಾಜ್​ ಅವರನ್ನೂ ವಿಭಿನ್ನ ಲುಕ್​ನಲ್ಲಿ ನೋಡಬಹುದು. ನಿಧಿಮಾ ಆಗಿದ್ದ ಅವರು ಈಗ ಮುತ್ತುಲಕ್ಷಿ$್ಮ ಆಗಿ ಜನರ ಮನಸ್ಸಿನಲ್ಲಿ ಉಳಿದುಕೊಳ್ಳುತ್ತಾರೆ.
    • ತುಂಬ ದಿನಗಳ ನಂತರ ಬಂದಿರುವ ಕಲರ್​ಫುಲ್​ ಫ್ಯಾಮಿಲಿ ಎಂಟರ್​ಟೇನರ್​. ಕುಟುಂಬದ ಎಲ್ಲ ವಯಸ್ಸಿನವರೂ ಕುಳಿತು ಸಿನಿಮಾ ನೋಡಿ ಎಂಜಾಯ್​ ಮಾಡಬಹುದಾದ ಸಿನಿಮಾ.
    ನಿಜವಾದ ಗಂಡಸು ಎಂದರೆ ಯಾರು? ಕೌಸಲ್ಯಾ ಸುಪ್ರಜಾ ರಾಮ ನೋಡಲು ಐದು ಕಾರಣಗಳು...
    ನಿಜವಾದ ಗಂಡಸು ಎಂದರೆ ಯಾರು? ಕೌಸಲ್ಯಾ ಸುಪ್ರಜಾ ರಾಮ ನೋಡಲು ಐದು ಕಾರಣಗಳು...

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts