More

    ವರ್ಷಕ್ಕೆರಡು ಚಿತ್ರ ನಿರ್ಮಿಸಲು ಅಶ್ವಿನಿ ಪುನೀತ್​ ರಾಜಕುಮಾರ್​ ನಿರ್ಧಾರ

    ವಿಜಯವಾಣಿ ಸುದ್ದಿಜಾಲ ಬೆಂಗಳೂರು

    ಅಶ್ವಿನಿ ಪುನೀತ್​ ರಾಜಕುಮಾರ್​ ಪಿಆರ್​ಕೆ ಪ್ರೊಡಕ್ಷನ್ಸ್​ ಬ್ಯಾನರ್​ನಲ್ಲಿ ನಿರ್ಮಿಸುತ್ತಿರುವ ಒಂಬತ್ತನೇ ಸಿನಿಮಾ “ಆಚಾರ್​ ಆ್ಯಂಡ್​ ಕೋ’. “ಕವಲುದಾರಿ’ ಮತ್ತು “ಮಾಯಾಬಜಾರ್​’ ಹೊರತುಪಡಿಸಿದರೆ ಉಳಿದ ಆರು ಚಿತ್ರಗಳು ನೇರವಾಗಿ ಒಟಿಟಿಯಲ್ಲಿ ರಿಲೀಸ್​ ಆಗಿದ್ದವು. ಇದೀಗ ಮೂರು ವರ್ಷಗಳ ನಂತರ “ಆಚಾರ್​ ಆ್ಯಂಡ್​ ಕೋ’ ಶುಕ್ರವಾರ ತೆರೆಗೆ ಬರಲು ರೆಡಿಯಾಗಿದೆ. ಅದೇ ಖುಷಿಯಲ್ಲಿ ಅಶ್ವಿನಿ ಮುಂದಿನ ಯೋಜನೆಗಳ ಕುರಿತು ಮಾತನಾಡಿದರು.

    ಇದನ್ನೂ ಓದಿ : ಕನ್ನಡದಲ್ಲಿ ಬಾಲಿವುಡ್​ ನಟನ ಶ್ರೇಯಸ್ಸು : ರಾಧಿಕಾ ಕುಮಾರಸ್ವಾಮಿಗೆ ನಾಯಕನಾಗಿ ಶ್ರೇಯಸ್​ ತಲ್ಪಾಡೆ

    ವರ್ಷಕ್ಕೆರಡು ಚಿತ್ರ ನಿರ್ಮಿಸಲು ಅಶ್ವಿನಿ ಪುನೀತ್​ ರಾಜಕುಮಾರ್​ ನಿರ್ಧಾರ

    ಅಪ್ಪು ಒಪ್ಪಿದ್ದ ಎರಡು ಕಥೆಗಳು
    ಪುನೀತ್​ ರಾಜಕುಮಾರ್​ ಅವರೇ “ಆಚಾರ್​ ಆ್ಯಂಡ್​ ಕೋ’ ಮತ್ತು “ಓ2′ ಕಥೆಗಳನ್ನು ಕೇಳಿ, ಒಪ್ಪಿದ್ದರಂತೆ. ಇದೀಗ ಒಂದು ಸಿನಿಮಾ ರಿಲೀಸ್​ಗೆ ರೆಡಿಯಿದೆ. “ಇವೆರಡು ಚಿತ್ರಗಳು ಅಪ್ಪು ಅವರಿದ್ದಾಗಲೇ ಫೈನಲ್​ ಆಗಿತ್ತು. “ಓ2′ ಮೆಡಿಕಲ್​ ಥ್ರಿಲ್ಲರ್​ ಕಥೆಯಾಗಿದ್ದು ಆಶಿಕಾ ರಂಗನಾಥ್​ ನಟಿಸಿದ್ದಾರೆ. ಸದ್ಯ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿದ್ದು, ಎರಡು& ಮೂರು ತಿಂಗಳಲ್ಲಿ ರಿಲೀಸ್​ ಆಗಲಿದೆ’ ಎಂದು ಹೇಳಿಕೊಳ್ಳುತ್ತಾರೆ ಅಶ್ವಿನಿ.

    ವರ್ಷಕ್ಕೆರಡು ಚಿತ್ರ ನಿರ್ಮಿಸಲು ಅಶ್ವಿನಿ ಪುನೀತ್​ ರಾಜಕುಮಾರ್​ ನಿರ್ಧಾರ

    ಚಿತ್ರಗಳ ಆಯ್ಕೆ ಹೇಗೆ?
    ಅಶ್ವಿನಿಗೆ ಥ್ರಿಲ್ಲರ್​ ಜಾನರ್​ ಇಷ್ಟವಂತೆ. ಕಥೆ ಆಯ್ಕೆ ಮಾಡಿಕೊಳ್ಳುವ ಬಗ್ಗೆ, “ವಿಷಯ ಏನಿದೆ? ಮೇಕಿಂಗ್​ ಹೇಗಿರಲಿದೆ? ಪ್ರೇಕ್ಷಕರಿಗೆ ಕನೆಕ್ಟ್​ ಆಗುತ್ತಾ? ಎಂಬ ಮೂರು ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಆಯ್ಕೆ ಮಾಡಿಕೊಳ್ಳುತ್ತೇನೆ. ನಂತರ ನಮ್ಮ ಜತೆಗಿರುವ ಮೂವರು ನಿರ್ದೇಶಕರಿಗೆ ಕಥೆ ನೀಡುತ್ತೇನೆ. ಅವರು ಓಕೆ ಅಂದಾಗ ಸಿನಿಮಾ ಪ್ರಾರಂಭಿಸುತ್ತೇವೆ. ಹೀಗಾಗಿಯೇ ಇಲ್ಲಿಯವರೆಗೂ ಕಮರ್ಷಿಯಲ್ಲಾಗಿ ಎಲ್ಲ ಚಿತ್ರಗಳೂ ಕೈಹಿಡಿದಿವೆ. ಈ ವರ್ಷದಂತೆಯೇ ಮುಂದೆಯೂ ವರ್ಷಕ್ಕೆರಡು ಚಿತ್ರಗಳನ್ನು ಮಾಡಬೇಕು ಅಂತಂದುಕೊಂಡಿದ್ದೇನೆ’ ಎನ್ನುತ್ತಾರೆ. ಸದ್ಯ ಇನ್ನೊಂದು ಸಿನಿಮಾ ಮಾತುಕತೆ ನಡೆಯುತ್ತಿದೆ.

    ವರ್ಷಕ್ಕೆರಡು ಚಿತ್ರ ನಿರ್ಮಿಸಲು ಅಶ್ವಿನಿ ಪುನೀತ್​ ರಾಜಕುಮಾರ್​ ನಿರ್ಧಾರ

    ಇದನ್ನೂ ಓದಿ : ಟಿಪ್ಪು ಬಯೋಪಿಕ್​ ಇಲ್ಲ : ಪ್ರಾರಂಭಕ್ಕೂ ಮುನ್ನವೇ ಅಂತ್ಯ ಹಾಡಿದ ನಿರ್ಮಾಪಕ ಸಂದೀಪ್​

    ಪರಭಾಷಾ ಸಿನಿಮಾ ನಿರ್ಮಾಣ
    ಪರಭಾಷೆಗಳಲ್ಲಿ ಸಿನಿಮಾ ನಿರ್ಮಿಸುವ ಬಗ್ಗೆ ಅಶ್ವಿನಿ, “ಬೇರೆ ಭಾಷೆಗಳಿಂದ ಸಿನಿಮಾ ಮಾಡಿ ಅಂತ ಯಾರೂ ಬಂದಿಲ್ಲ. ನಮ್ಮ ಕುಟುಂಬದಲ್ಲಿ ಅಪ್ಪಾಜಿ, ಅಮ್ಮ, ಅಪು$್ಪ ಬೇರೆ ಭಾಷೆಗಳಲ್ಲಿ ಸಿನಿಮಾ ಮಾಡಿಲ್ಲ. ಮುಂದೆ ಉತ್ತಮ ಕಥೆಗಳು, ದೊಡ್ಡ ಬ್ಯಾನರ್​ಗಳು ಸಹ ನಿರ್ಮಾಣಕ್ಕೆ ಬಂದರೆ, ಕೈಜೋಡಿಸುವ ಬಗ್ಗೆ ಯೋಚಿಸುತ್ತೇವೆ’ ಎನ್ನುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts