More

    ರಕ್ತಾಕ್ಷ ಮಾಸ್ ಟೀಸರ್; ಸಿಕ್ಸ್ ಪ್ಯಾಕ್ ಲುಕ್‌ನಲ್ಲಿ ರೋಹಿತ್ ಭರ್ಜರಿ ಆ್ಯಕ್ಷನ್

    ಬೆಂಗಳೂರು: ಮಾಡೆಲಿಂಗ್ ಲೋಕದ ಯುವ ಪ್ರತಿಭೆ ರೋಹಿತ್ ಚೊಚ್ಚಲ ಬಾರಿಗೆ ನಾಯಕನಾಗಿ ನಟಿಸಿರುವ ಸಿನಿಮಾ ‘ರಕ್ತಾಕ್ಷ’. ಇತ್ತೀಚೆಗಷ್ಟೆ ಚಿತ್ರದ ಆ್ಯಕ್ಷನ್ ಟೀಸರ್ ರಿಲೀಸ್ ಆಗಿದೆ.

    ಪಂಚಿಂಗ್ ಡೈಲಾಗ್ ಹೊಡೆಯುತ್ತಾ ಸಿಕ್ಸ್ ಪ್ಯಾಕ್ ಲುಕ್‌ನಲ್ಲಿ ರೋಹಿತ್ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಖಳನಾಯಕ ಪ್ರಮೋದ್ ಶೆಟ್ಟಿ ಎದುರು ಅಬ್ಬರಿಸಿದ್ದಾರೆ. ವಾಸುದೇವ ಎಸ್.ಎನ್. ನಿರ್ದೇಶನದ ಮೊದಲ ಚಿತ್ರವಿದು. ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಧೀರೇಂದ್ರ ದಾಸ್ ಸಂಗೀತ ಚಿತ್ರಕ್ಕಿದೆ. ಈ ಹಿಂದೆ ‘ಕೆಜಿಎ್’ ಚಿತ್ರದಲ್ಲಿ ನಟಿಸಿದ್ದ ರೂಪಾ ರಾಯಪ್ಪ, ಅರ್ಚನಾ ಕೊಟ್ಟಿಗೆ, ರಚನಾ ದಶರತ್, ಪ್ರಭು, ವಿಶ್ವ, ಭದ್ರಿ ನಾರಾಯಣ, ಗುರುದೇವ್ ನಾಗರಾಜ್ ಪ್ರಮುಖ ತಾರಾಗಣದಲ್ಲಿದ್ದಾರೆ.

    ನಟ ವಸಿಷ್ಠ ಸಿಂಹ ಚಿತ್ರದ ಟೈಟಲ್ ಹಾಡಿಗೆ ಕಂಠದಾನ ಮಾಡಿದ್ದು, ಈಗಾಗಲೇ ಜಾಲತಾಣದಲ್ಲಿ ಸಾಂಗ್‌ಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಪ್ರಚಾರ ಆರಂಭಿಸಿರುವ ಚಿತ್ರತಂಡ ಸದ್ಯ ರಿಲೀಸ್‌ಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts