ನನ್ನ ಒಳ್ಳೆತನ ದುರುಪಯೋಗದ ಸಾಧನವಲ್ಲ - ಕುಮಾರ್​ ಆರೋಪಕ್ಕೆ ಸುದೀಪ್​ ಪರೋಕ್ಷ ಪ್ರತಿಕ್ರಿಯೆ?

Jimmy_214
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಕಳೆದ ಎರಡು ದಿನಗಳಿಂದ ನಟ ಕಿಚ್ಚ ಸುದೀಪ್​ ಜಾಲತಾಣದಲ್ಲಿ ಟ್ರೆಂಡಿಂಗ್​ನಲ್ಲಿದ್ದಾರೆ. ಭಾನುವಾರ (ಜು. 2) ಅವರ 46ನೇ ಸಿನಿಮಾ ಟೀಸರ್​ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಅದರ ಬೆನ್ನಲ್ಲೇ ನಿರ್ಮಾಪಕ, ವಿತರಕ ಎಂ.ಎನ್​. ಕುಮಾರ್​, ಎಂದು ವರ್ಷಗಳ ಹಿಂದೆ ಸಿನಿಮಾಗಾಗಿ ಸಂಭಾವನೆ ಪಡೆದಿದ್ದ ಸುದೀಪ್​ ಈಗ ಕೈಗೆ ಸಿಗುತ್ತಿಲ್ಲ ಎಂದು ಆರೋಪಿಸಿದ್ದರು.

ಅದರ ಬೆನ್ನಲ್ಲೇ ಮಂಗಳವಾರ (ಜು.4) ಸುದೀಪ್​ ಟ್ವಿಟರ್​ನಲ್ಲಿ "ಇದು ಎಲ್ಲರಿಗೂ ತಿಳಿಯಲಿ: ನನ್ನ ಒಳ್ಳೆತನ ದುರುಪಯೋಗದ ಸಾಧನವಲ್ಲ. ಅದು ನಿಜವಾಗಿದ್ದಾಗ ಹೆಚ್ಚು ಪ್ರಕಾಶಮಾನವಾಗಿ ಹೊಳೆಯುತ್ತದೆ. ದುರಹಂಕಾರ ಅದನ್ನು ಹಾಳು ಮಾಡಲು ನಾನು ಬಿಡುವುದಿಲ್ಲ. ವಿನಮ್ರವಾಗಿರಿ, ನಿಜವಾಗಿರಿ' ಎಂದು ಹಂಚಿಕೊಂಡಿರುವ ಸುದೀಪ್​, "ಈ ಉಲ್ಲೇಖವನ್ನು ಓದಿ, ತುಂಬ ಚೆನ್ನಾಗಿದೆ' ಎಂದು ಬರೆದುಕೊಂಡಿದ್ದಾರೆ.

ಜಾಲತಾಣದಲ್ಲಿ ವೈರಲ್​ ಆಗಿರುವ ಈ ಪೋಸ್ಟ್​, ನಿರ್ಮಾಪಕ ಕುಮಾರ್​ ಆರೋಪಗಳಿಗೆ ಸಂಬಂಧಿಸಿದಂತೆ ಕಿಚ್ಚ ಸುದೀಪ್​ ನೀಡಿರುವ ಪ್ರತಿಕ್ರಿಯೆ ಎಂಬ ಮಾತುಗಳು ಕೇಳಿಬರುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net