More

    ತಿಂಗಳಂತ್ಯಕ್ಕೆ “ಆಚಾರ್​ ಆ್ಯಂಡ್​ ಕೋ’ – ಪಿಆರ್​ಕೆ ಪ್ರೊಡಕ್ಷನ್​ನಲ್ಲಿ ಸಿಂಧು ಶ್ರೀನಿವಾಸಮೂರ್ತಿ ನಿರ್ದೇಶನ

    ವಿಜಯವಾಣಿ ಸುದ್ದಿಜಾಲ ಬೆಂಗಳೂರು

    ಕಳೆದ ವರ್ಷ ತೆರೆಗೆ ಬಂದ ಪುನೀತ್​ ರಾಜಕುಮಾರ್​ ಅಭಿನಯದ “ಗಂಧದಗುಡಿ’ ಚಿತ್ರದ ಬಳಿಕ ಪಿಆರ್​ಕೆ ಪ್ರೊಡಕ್ಷನ್ಸ್​ ಬ್ಯಾನರ್​ನಲ್ಲಿ ಮೂಡಿಬಂದಿರುವ ಹೊಸ ಸಿನಿಮಾ “ಆಚಾರ್​ ಆ್ಯಂಡ್​ ಕೋ’. ಸಿಂಧು ಶ್ರೀನಿವಾಸಮೂರ್ತಿ ನಿರ್ದೇಶನದ ಮೊದಲ ಚಿತ್ರವಿದು. ಕಥೆ ಬರೆದು ನಿರ್ದೇಶಿಸುವುದರ ಜತೆಗೆ ಸಿಂಧು ಅವರೇ ನಾಯಕಿಯಾಗಿಯೂ ನಟಿಸಿದ್ದಾರೆ. ಮಹತ್ವಾಕಾಂೆಯ ಸಹೋದರಿಯರು ಆಧುನಿಕತೆಯ ಸವಾಲುಗಳನ್ನು ಎದುರಿಸುತ್ತಾ, ತಮ್ಮ ಬೇರುಗಳನ್ನೂ ಬಿಡದೇ ಹೇಗೆ ಯಶಸ್ವಿಯಾಗುತ್ತಾರೆ ಎಂಬ 1960ರ ಕಾಲಟ್ಟದಲ್ಲಿ ನಡೆಯುವ ಕಥೆ. ವಸ್ತ್ರವಿನ್ಯಾಸ ಮತ್ತು ಕಲಾನಿರ್ದೇಶನದ ಮೂಲಕ 60 ಹಾಗೂ 70ರ ದಶಕದ ಬೆಂಗಳೂರನ್ನು ತೆರೆಯ ಮೇಲೆ ಮರುಸೃಷ್ಟಿ ಮಾಡಲಾಗಿದ್ದು, ಕಥೆಯನ್ನು ನೋಡುತ್ತಾ ಪ್ರೇಕ್ಷಕರು ತಮಗೇ ಗೊತ್ತಿಲ್ಲದಂತೆ ಅಂದಿನ ಕಾಲಕ್ಕೆ ಹೋಗಿಬಂದ ಅನುಭವ ನೀಡಲಿದೆ ಎಂಬ ಭರವಸೆ ಚಿತ್ರತಂಡದ್ದು. ಸಿನಿಮಾ ಇದೇ ತಿಂಗಳ 28ರಂದು ರಿಲೀಸ್​ ಆಗಲಿದೆ.

    ಇದನ್ನೂ ಓದಿ: ಕ್ಯಾನ್ಸರ್​ ಪೀಡಿತ ಬಾಲಕಿಯ ಆಸೆ ಈಡೇರಿಸಿದ ಕೋಟಿಗೊಬ್ಬ!

    ತಿಂಗಳಂತ್ಯಕ್ಕೆ "ಆಚಾರ್​ ಆ್ಯಂಡ್​ ಕೋ' - ಪಿಆರ್​ಕೆ ಪ್ರೊಡಕ್ಷನ್​ನಲ್ಲಿ ಸಿಂಧು ಶ್ರೀನಿವಾಸಮೂರ್ತಿ ನಿರ್ದೇಶನ

    ಹೆಣ್ಣುಮಕ್ಕಳೇ ಸೇರಿ ಮಾಡಿರುವ ಚಿತ್ರ
    ಈ ಚಿತ್ರದ ಬಹುತೇಕ ವಿಭಾಗಗಳಲ್ಲಿ ಮಹಿಳೆಯರೇ ಕೆಲಸ ಮಾಡಿರುವುದು ಮತ್ತೊಂದು ವಿಶೇಷ. ಈ ಚಿತ್ರದ ಅಶ್ವಿನಿ ಪುನೀತ್​ ನಿರ್ಮಾಣ, ಸಿಂಧು ನಿರ್ದೇಶನ, ಬಿಂದು ಮಾಲಿನಿ ಸಂಗೀತ ನಿರ್ದೇಶನ, ಹೇಮಾ ಸುವರ್ಣ ಸೌಂಡ್​ ಇಂಜಿನಿಯರ್​, ಇಂಚರಾ ಸುರೇಶ್​ ವಸ್ತ್ರ ವಿನ್ಯಾಸ ಸೇರಿ ಇನ್ನೂ ಹಲವು ವಿಭಾಗಗಳನ್ನು ಮಹಿಳೆಯರೇ ನಿಭಾಯಿಸಿದ್ದಾರೆ. ಜತೆಗೆ ವಿಶ್ವಾಸ್​ ಕಶ್ಯಪ್​ ಕಲಾನಿರ್ದೇಶನ ಹಾಗೂ ಅಭಿಮನ್ಯು ಸದಾನಂದ್​ ಛಾಯಾಗ್ರಹಣ ಚಿತ್ರಕ್ಕಿರಲಿದೆ.

    ಇದನ್ನೂ ಓದಿ: ಇರಲಿ ‘ನಿಮ್ಮೆಲ್ಲರ ಆಶೀರ್ವಾದ’; ಹೊಸ ಚಿತ್ರದ ಮೊದಲ ನೋಟ ಅನಾವರಣ

    ತಿಂಗಳಂತ್ಯಕ್ಕೆ "ಆಚಾರ್​ ಆ್ಯಂಡ್​ ಕೋ' - ಪಿಆರ್​ಕೆ ಪ್ರೊಡಕ್ಷನ್​ನಲ್ಲಿ ಸಿಂಧು ಶ್ರೀನಿವಾಸಮೂರ್ತಿ ನಿರ್ದೇಶನ

    “ಸಿಂಧು ಕ್ರಿಯಾಶೀಲತೆ ಮತ್ತು ಸಿನಿಮಾ ಬಗ್ಗೆ ಅವರಿಗಿರುವ ಬದ್ಧತೆಯೇ ನಾವು ಅವರ ಜತೆ ಕೈಜೋಡಿಸಲು ಮುಖ್ಯ ಕಾರಣ. ನಿರ್ಮಾಣದ ಪ್ರತಿ ಹಂತದಲ್ಲೂ ಅತ್ಯಂತ ನಾಜೂಕಾಗಿ ಕೆಲಸ ಮಾಡಿರುವ ಸಿಂಧು ಆಲೋಚನೆಗಳು ಅದ್ಭುತವಾಗಿ ಸಿನಿಮಾ ರೂಪ ತಳೆದಿದೆ. ಅದು ಎಲ್ಲ ಪ್ರೇಕ್ಷಕರಿಗೂ ತಲುಪುತ್ತದೆ’
    ಆಶ್ವಿನಿ ಪುನೀತ್​ ರಾಜಕುಮಾರ್​, ನಿರ್ಮಾಪಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts