ಅತ್ತ “ಕೆಡಿ’, ಇತ್ತ “ಮಾರ್ಟಿನ್​’ – ಮೈಸೂರಿನಲ್ಲಿ ಚಿತ್ರೀಕರಣದಲ್ಲಿ ಬಿಜಿಯಾದ ಧ್ರುವ ಸರ್ಜಾ

blank

| ಹರ್ಷವರ್ಧನ್​ ಬ್ಯಾಡನೂರು

ನಟ ಧ್ರುವ ಸರ್ಜಾ ಕೆಲ ದಿನಗಳಿಂದ ಮೈಸೂರಿನಲ್ಲಿ ಪ್ರೇಮ್​ ನಿರ್ದೇಶನದ “ಕೆಡಿ’ ಚಿತ್ರದ ಚಿತ್ರೀಕರಣದಲ್ಲಿ ಬಿಜಿಯಿದ್ದಾರೆ. ಎ.ಪಿ. ಅರ್ಜುನ್​ ಆ್ಯಕ್ಷನ್​ ಕಟ್​ ಹೇಳುತ್ತಿರುವ “ಮಾರ್ಟಿನ್​’ ಚಿತ್ರದ ಮಾತಿನ ಭಾಗದ ಶೂಟಿಂಗ್​ ಪೂರ್ಣಗೊಂಡಿದ್ದು, ಕೆಲವೇ ದಿನಗಳಲ್ಲಿ ಹಾಡುಗಳ ಚಿತ್ರೀಕರಣ ಪ್ರಾರಂಭವಾಗಲಿದೆ. ಈ ಬಗ್ಗೆ ಧ್ರುವ, “ಆಗಸ್ಟ್​ ಮೊದಲ ವಾರ “ಮಾರ್ಟಿನ್​’ ಚಿತ್ರದ ಹಾಡುಗಳ ಚಿತ್ರೀಕರಣ ಪ್ರಾರಂಭವಾಗಲಿದೆ. ಅಷ್ಟರಲ್ಲಿ “ಕೆಡಿ’ ಚಿತ್ರದ ಮೈಸೂರು ಶೆಡ್ಯುಲ್​ ಶೂಟಿಂಗ್​ ಪೂರ್ಣಗೊಳಿಸಲಿದ್ದೇವೆ’ ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ.

ಇದನ್ನೂ ಓದಿ: ನಮೋ ಭೂತಾತ್ಮ 2 ಟೀಸರ್​ ರಿಲೀಸ್​ : ಈ ಸರಿ ಹೆದರಿಸುವುದಿಲ್ಲ, ಹೆಚ್ಚು ನಗಿಸುತ್ತೇವೆ ಎಂದ ಕೋಮಲ್

ಅತ್ತ "ಕೆಡಿ', ಇತ್ತ "ಮಾರ್ಟಿನ್​' - ಮೈಸೂರಿನಲ್ಲಿ ಚಿತ್ರೀಕರಣದಲ್ಲಿ ಬಿಜಿಯಾದ ಧ್ರುವ ಸರ್ಜಾ

48 ದಿನಗಳ ಕ್ಲೆಮ್ಯಾಕ್ಸ್​!
“ಮಾರ್ಟಿನ್​’ ಚಿತ್ರದ ಕ್ಲೆಮ್ಯಾಕ್ಸ್​ ಶೂಟಿಂಗ್​ ಏಳು ವಾರಗಳ ಕಾಲ ನಡೆಸಲಾಗಿದೆ. ಈ ಬಗ್ಗೆ ಧ್ರುವ, “ಮಾತಿನ ಭಾಗವೂ ಸೇರಿ ಕೇವಲ 30 ನಿಮಿಷಗಳ ಕ್ಲೆಮ್ಯಾಕ್ಸ್​ ಚಿತ್ರೀಕರಣ 48 ದಿನಗಳ ಕಾಲ ಮಾಡಿದ್ದೇವೆ. ಕಥೆಗೆ ಪೂರಕವಾಗಿರುವ ೈಟ್​ಗಳಿವೆ. ಎಷ್ಟು ದಿನ ಶೂಟಿಂಗ್​ ಮಾಡಿದ್ದೇವೆ ಅನ್ನುವುದಕ್ಕಿಂತ ಸಿನಿಮಾ ನೋಡುವ ಪ್ರೇಕ್ಷಕರಿಗೆ ಸಿನಿಮಾ ಇಷ್ಟವಾಗಬೇಕು ಎಂಬುದು ನಮ್ಮ ಉದ್ದೇಶ. ಹೀಗಾಗಿಯೇ ಸಾಹಸ ನಿರ್ದೇಶಕರಾದ ರಾಮ & ಲಕ್ಷ$್ಮಣ ಮಾಸ್ಟರ್ಸ್​ ಮತ್ತು ರವಿವರ್ಮ ಮಾಸ್ಟರ್​ ಮೂವರೂ ಸೇರಿ ಒಂದೊಳ್ಳೆ ಔಟ್​ಪುಟ್​ ನೀಡಲು ತುಂಬ ಎರ್ಟ್​ ಹಾಕಿದ್ದಾರೆ. ನನಗೂ ಬೆಂಡೆತ್ತಿದ್ದಾರೆ’ ಎಂದು ನಗುತ್ತಾರೆ.

ಇದನ್ನೂ ಓದಿ: ‘4 ಎನ್ 6’ ಚಿತ್ರಕ್ಕೆ ಕುಂಬಳಕಾಯಿ; ಮರ್ಡರ್ ಮಿಸ್ಟ್ರಿ ರಹಸ್ಯ ಬಿಡಿಸಲು ರಚನಾ ಇಂದರ್ ರೆಡಿ

ಅತ್ತ "ಕೆಡಿ', ಇತ್ತ "ಮಾರ್ಟಿನ್​' - ಮೈಸೂರಿನಲ್ಲಿ ಚಿತ್ರೀಕರಣದಲ್ಲಿ ಬಿಜಿಯಾದ ಧ್ರುವ ಸರ್ಜಾ

ಅತ್ಯಾಧುನಿಕ ಬೋಲ್ಟ್​ ಕ್ಯಾಮರಾ ಬಳಕೆ
“ಮಾರ್ಟಿನ್​’ ಚಿತ್ರದ ಕ್ಲೆಮ್ಯಾಕ್ಸ್​ ಶೂಟಿಂಗ್​ಗೆ ಚಿತ್ರತಂಡ ಅತ್ಯಾಧುನಿಕ ಬೋಲ್ಡ್​ ಹೈ&ಸ್ಪೀಡ್​ ಸಿನೆಬೋಟ್​ ಕ್ಯಾಮರಾ ಬಳಸಿರುವುದು ವಿಶೇಷ. ರೋಬೋಟ್​ನಂತೆ ಕೆಲಸ ಮಾಡುವ ಈ ಕ್ಯಾಮರಾ ಬೆಲೆ ಸುಮಾರು 1.7 ಕೋಟಿ ರೂ. ಓಡುವ, ಸ್ಟಂಟ್​ ಮಾಡುವ ವೇಗದ ಸನ್ನಿವೇಶಗಳನ್ನು ಸ್ಟಷ್ಟ ಹಾಗೂ ಸೂಕ್ಷ$್ಮವಾಗಿ ಸೆರೆ ಹಿಡಿಯುವ ತಾಂತ್ರಿಕತೆ ಈ ಕ್ಯಾಮರಾದಲ್ಲಿದೆ. ಟ್ರಾಲಿಯ ತೂಕವೇ ಬರೋಬ್ಬರಿ 600 ಕೆಜಿಗೂ ಹೆಚ್ಚು ತೂಕವಿದ್ದು, ಕ್ಯಾಮರಾ ತೂಕ ಕೂಡ 20 ಕೆಜಿಯಿದೆ.

Share This Article

ಬೆಲ್ಲ ತಿಂದ್ರೆ ಬೆಟ್ಟದಷ್ಟು ಉಪಯೋಗ! ಆದರೆ ಬೆಲ್ಲ ತಿನ್ನುವುದರಿಂದ ನಿಮ್ಮ ಮೂತ್ರಪಿಂಡಗಳಿಗೆ ಹಾನಿಯಾಗುತ್ತದೆಯೇ? Jaggery Benefits

Jaggery Benefits:  ಬೆಲ್ಲ ತಿಂದ್ರೆ ಬೆಟ್ಟದಷ್ಟು ಉಪಯೋಗಗಳಿವೆ. ಪ್ರತಿದಿನ ಬೆಳಗ್ಗೆ ಬೆಲ್ಲ ತಿಂದ್ರೆ ಆರೋಗ್ಯಕ್ಕೆ ತುಂಬಾ…

ಈ 3 ರಾಶಿಯವರು ತಮ್ಮ ತಾಯಂದಿರನ್ನು ದೇವತೆಯಂತೆ ನೋಡಿಕೊಳ್ಳುತ್ತಾರಂತೆ! ನಿಮ್ಮದೂ ಇದೇ ರಾಶಿನಾ? Zodiac Signs

Zodiac Signs : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ಯಾವ ರಾಶಿಚಕ್ರ ಮತ್ತು ನಕ್ಷತ್ರದಲ್ಲಿ…

ಮನೆಯಲ್ಲೇ ಮಾಡಿ ಟೇಸ್ಟಿ ಹಾಗಲಕಾಯಿ ಉಪ್ಪಿನಕಾಯಿ; ಇಲ್ಲಿದೆ ಸಿಂಪಲ್​ ವಿಧಾನ | Recipe

ಉಪ್ಪಿನಕಾಯಿ ಆಹಾರದ ರುಚಿಯನ್ನು ದ್ವಿಗುಣಗೊಳಿಸುತ್ತದೆ. ಉಪ್ಪಿನಕಾಯಿ ಇಲ್ಲದೆ ಊಟ ಸಂಪೂರ್ಣ ಎನ್ನಿಸುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಹೆಚ್ಚಿನ…