More

    ದೇಶಕ್ಕೆ ಅಂಬೇಡ್ಕರ್ ಕೊಡುಗೆ ಅಪಾರ

    ಅಳವಂಡಿ: ಅಂಬೇಡ್ಕ್ಕರ್ ಒಂದು ಸಮುದಾಯದ ವ್ಯಕ್ತಿಯಾಗದೇ, ಭಾರತದ ಶಕ್ತಿಯಾಗಿ ಹೊರಹೊಮ್ಮಿದ್ದಾರೆ ಎಂದು ಅಳವಂಡಿ ಸಿದ್ದೇಶ್ವರ ಮಠದ ಶ್ರೀ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ಸಮೀಪದ ಕವಲೂರಿನಲ್ಲಿ ಶ್ರೀ ಶಾಹು ಮಹಾರಾಜ್ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆ, ಅಂಬೇಡ್ಕರ್ ಯುವಕ ಸಂಘ ಡಾ. ಅಂಬೇಡ್ಕರ ಹಾಗೂ ಬಾಬು ಜಗಜೀವನರಾಮ್ ಜಯಂತಿ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.

    ಭಾರತಕ್ಕೆ ಸಂವಿಧಾನ ನೀಡಿದ ಕೊಡುಗೆ ಅಪಾರ. ಸಾಮೂಹಿಕ ವಿವಾಹದಿಂದ ಬಡವರಿಗೆ ಆರ್ಥಿಕ ಹೊರೆ ಕಡಿಮೆಯಾಗಲಿದೆ. ನವ ದಂಪತಿಗಳು ಅನ್ಯೋನ್ಯದಿಂದ ಜೀವನ ನಡೆಸಬೇಕು ಎಂದರು.

    ಇಟಗಿ ಶ್ರೀ ಗದಿಗೆಪ್ಪ ಅಜ್ಜನವರು ಮಾತನಾಡಿ, ಶೋಷಿತ, ದಲಿತ, ಹಿಂದುಳಿದ ವರ್ಗಕ್ಕೆ ಸಮಾನ ಹಕ್ಕು ನೀಡಿದ ಹಾಗೂ ವಿಶ್ವಕ್ಕೆ ಮಾರ್ಗದರ್ಶಿ ಸಂವಿಧಾನವನ್ನು ನೀಡಿದ ಡಾ.ಅಂಬೇಡ್ಕರ್ ಆದರ್ಶಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು. ಹಸಿರು ಕ್ರಾಂತಿ ಹರಿಕಾರ ಬಾಬು ಜಗಜೀವನರಾಮ್, ದೇಶದ ಕೃಷಿ ವ್ಯವಸ್ಥೆಗೆ ಮಹಾನ್ ಕೊಡುಗೆ ನೀಡಿದ್ದಾರೆ. ಶಿಕ್ಷಣ, ಸಂಘಟನೆ, ಹೋರಾಟ ಇದು ಅಂಬೇಡ್ಕರ್ ಅವರ ಘೋಷವಾಕ್ಯ. ಅವರ ಆಶಯದಂತೆ ಎಲ್ಲರೂ ಶಿಕ್ಷಣವಂತರಾಗಬೇಕು ಎಂದರು.

    ಹಂಪಿ ಮಾತಂಗಮುನಿ ಆಶ್ರಮದ ಪೂರ್ಣಾನಂದ ಭಾರತಿ ಸ್ವಾಮೀಜಿ, ಕುಕನೂರು ಇಟಗಿ ಮರುಳು ಸಿದ್ದೇಶ್ವರ ಮಠದ ಮರುಳು ಸಿದ್ದೇಶ್ವರ ಸ್ವಾಮೀಜಿ, ಅರ್ಚಕ ರಣದಪ್ಪ, ವಕೀಲ ಕೆ.ಎಸ್. ಮೈಲಾರಪ್ಪ, ಪಿಡಿಒ ಸಂಜಯ ಚವಡಾಳ, ಪ್ರಮುಖರಾದ ಮಲ್ಲಪ್ಪ, ದುರುಗಪ್ಪ, ಈರಪ್ಪ, ಗುಡದಪ್ಪ, ಶಿವು, ನಾಗಪ್ಪ, ಶಿವಪ್ಪ, ಸಾರೆಪ್ಪ, ರಣದಪ್ಪ, ಪ್ರಭು, ಮಲ್ಲಪ್ಪ, ರಜೀಯಾ, ಸೈನಾಜ್, ನೀಲಪ್ಪ, ಕೊಟ್ರಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts