ನಮೋ ಭೂತಾತ್ಮ 2 ಟೀಸರ್​ ರಿಲೀಸ್​ : ಈ ಸರಿ ಹೆದರಿಸುವುದಿಲ್ಲ, ಹೆಚ್ಚು ನಗಿಸುತ್ತೇವೆ ಎಂದ ಕೋಮಲ್​

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಕೋಮಲ್​ ಕುಮಾರ್​ ಅಭಿನಯದ ನೃತ್ಯನಿರ್ದೇಶಕ ಮುರಳಿ ಮಾಸ್ಟರ್​ ಚೊಚ್ಚಲ ಬಾರಿಗೆ ನಿರ್ದೇಶಿಸಿದ್ದ ಸಿನಿಮಾ “ನಮೋ ಭೂತಾತ್ಮ’ 2014ರಲ್ಲಿ ರಿಲೀಸ್​ ಆಗಿತ್ತು. ಅದಾಗಿ ಒಂಬತ್ತು ವರ್ಷಗಳ ನಂತರ ಈ ಜೋಡಿ ಸೀಕ್ವಲ್​ನೊಂದಿಗೆ ವಾಪಸ್ಸಾಗಿದೆ. ಇತ್ತೀಚೆಗಷ್ಟೆ ಧ್ರುವ ಸರ್ಜಾ “ನಮೋ ಭೂತಾತ್ಮ 2′ ಚಿತ್ರದ ಟೀಸರ್​ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದರು.

ನಮೋ ಭೂತಾತ್ಮ 2 ಟೀಸರ್​ ರಿಲೀಸ್​ : ಈ ಸರಿ ಹೆದರಿಸುವುದಿಲ್ಲ, ಹೆಚ್ಚು ನಗಿಸುತ್ತೇವೆ ಎಂದ ಕೋಮಲ್​

ಇದನ್ನೂ ಓದಿ: ನೀವು ನನಗಾಗಿ ಕಾದಿದ್ದೀರಿ, ನಾನು ನಿಮ್ಮ ಭೇಟಿಗಾಗಿ ಕಾಯುತ್ತಿರುತ್ತೇನೆ: ಎಲ್ಲರಿಗೂ ನಿರ್ದೇಶಕ ರಿಷಬ್ ಶೆಟ್ಟಿ ಆಹ್ವಾನ

ಕೋಮಲ್​, “”ಲಿಂಗ’, “ಪಿಕೆ’ಯಂತಹ ಪರಭಾಷೆಯ ದೊಡ್ಡ ಸಿನಿಮಾಗಳು ಬಂದ ಕಾರಣ “ನಮೋ ಭೂತಾತ್ಮ’ ಚಿತ್ರ ನಿರೀಸಿದಷ್ಟು ಯಶಸ್ಸು ಕಾಣಲಿಲ್ಲ. ಆ ಬಳಿಕ ಮುರಳಿ ಮಾಸ್ಟರ್​ಗೆ ಎರಡು ಬಾರಿ ನಿರ್ದೇಶಿಸಲು ಕೇಳಿದ್ದೆ, ಆದರೆ ಅವರು ಬಿಜಿಯಿದ್ದ ಕಾರಣ ಸಾಧ್ಯವಾಗಿರಲಿಲ್ಲ. ನನಗೆ ಮಕ್ಕಳು ಫ್ಯಾನ್ಸ್​​ ತುಂಬ ಇದ್ದಾರೆ. ಹೀಗಾಗಿ ಹಾರರ್​ಗಿಂತ ಹೆಚ್ಚಾಗಿ ಕಾಮಿಡಿ ಈ ಸೀಕ್ವಲ್​ನಲ್ಲಿರಲಿದೆ. ಹೆದರಿಸೋದಕ್ಕಿಂತ ಹೆಚ್ಚಾಗಿ ನಗಿಸಲಿದ್ದೇವೆ’ ಎಂದು ಮಾಹಿತಿ ನೀಡಿದರು.

ನಮೋ ಭೂತಾತ್ಮ 2 ಟೀಸರ್​ ರಿಲೀಸ್​ : ಈ ಸರಿ ಹೆದರಿಸುವುದಿಲ್ಲ, ಹೆಚ್ಚು ನಗಿಸುತ್ತೇವೆ ಎಂದ ಕೋಮಲ್​

ಇದನ್ನೂ ಓದಿ: ನನಗೆ ನಿದ್ದೆ ಬರುತ್ತಿಲ್ಲವೆಂದು ಕಣ್ಣೀರಿಟ್ಟ ನಟ ದುಲ್ಕರ್ ಸಲ್ಮಾನ್; ಭಾನುವಾರ ರಾತ್ರಿ ವಿಡಿಯೋ ಪೋಸ್ಟ್.. ತಕ್ಷಣ ಡಿಲೀಟ್

ನಿರ್ದೇಶಕ ಮುರಳಿ ಮಾಸ್ಟರ್​, “ಕರೋನಾಗೆ ಮುನ್ನವೇ ಸಿನಿಮಾ ಕಥೆ ರೆಡಿಯಾಗಿತ್ತು. ಕೋಮಲ್​ ಸರ್​ಗೆ ಕಥೆ ಹೇಳಿದೆವು, ಅವರು ಖುಷಿಯಿಂದ ಒಪ್ಪಿಕೊಂಡು ಸಿನಿಮಾ ಮಾಡಿಕೊಟ್ಟರು. ಪ್ರತಿ ಹಂತದಲ್ಲೂ ನಮ್ಮ ಜತೆಗೆ ನಿಂತು, ಸಪೋರ್ಟ್​ ಮಾಡಿದರು’ ಎಂದರು. ನಾಯಕಿ ಲೇಖಚಂದ್ರ, “ಕಷ್ಟಪಟ್ಟು ಎನ್ನುವುದಕ್ಕಿಂತ ಇಷ್ಟಪಟ್ಟು ಮಾಡಿದ ಚಿತ್ರವಿದು. ಟೀಸರ್​ಗೂ ಮೀರಿದ ವಿಷಯಗಳು ಚಿತ್ರದಲ್ಲಿವೆ’ ಎಂದು ಹೇಳಿಕೊಂಡರು. ಕೋಮಲ್​, ಲೇಖಚಂದ್ರ ಜತೆ ಹಾಸ್ಯನಟ ಗೋವಿಂದೇಗೌಡ, ಡಾನ್ಸರ್​ ವರುಣ್​ ಮತ್ತು ಮೋನಿಕಾ ಪ್ರಮುಖ ತಾರಾಗಣದಲ್ಲಿದ್ದಾರೆ.

Share This Article

ಬೆಟ್ಟದ ನೆಲ್ಲಿಕಾಯಿ ಜ್ಯೂಸ್​ನಿಂದ ಆಗುವ ಪ್ರಯೋಜನಗಳಿವು; ನಿಮಗಾಗಿ ಹೆಲ್ತಿ ಟಿಪ್ಸ್​​​ | Health Tips

ತಾಜಾ ಹಣ್ಣಿನ ಜ್ಯೂಸ್​ ಕುಡಿಯುವುದು ಆರೋಗ್ಯಕ್ಕೆ ಪ್ರಯೋಜನಕಾರಿ. ಇದು ನಮ್ಮ ದೇಹಕ್ಕೆ ಅಗತ್ಯವಿರುವ ಜೀವಸತ್ವಗಳು, ಖನಿಜಾಂಶಗಳನ್ನು…

ತೂಕ ಇಳಿಸಲು ಮೆಂತ್ಯ ಉತ್ತಮ ಮಾರ್ಗ; ಬಳಸುವ ವಿಧಾನ ಇಲ್ಲಿದೆ | Health Tips

ಪ್ರಸ್ತುತ ಜೀವನಶೈಲಿಯಲ್ಲಿ ಬೊಜ್ಜು ಕರಗಿಸುವುದು ಮತ್ತು ತೂಕ ಇಳಿಸುವುದು ದೊಡ್ಡ ಸವಾಲಾಗಿದೆ. ತೂಕ ಇಳಿಸಲು ಹಲವಾರು…

ಈ ಸಮಸ್ಯೆಗಳಿರುವ ಜನರು, ಅಪ್ಪಿತಪ್ಪಿಯೂ ಸಹ ಬಿಸಿನೀರನ್ನು ಕುಡಿಯಬಾರದು! hot water

hot water: ಸಾಮಾನ್ಯವಾಗಿ ಜನರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರನ್ನು ಕುಡಿಯಲು ಇಷ್ಟಪಡುತ್ತಾರೆ.  ವಯಸ್ಕರು…