ಹೆಚ್ಚು ಟ್ವೀಟ್​ ಆದ ಚಿತ್ರಗಳು: 'ದರ್ಬಾರ್​' ಹಿಂದಿಕ್ಕಿದ 'ಕೆಜಿಎಫ್​ 2'

Most Tweeted - Final
Published on

ಬೆಂಗಳೂರು: ಅತೀ ಹೆಚ್ಚು ಟ್ವೀಟ್​ ಆದ ದಕ್ಷಿಣ ಭಾರತದ ಚಿತ್ರಗಳ ಪಟ್ಟಿಯನ್ನು ಟ್ವಿಟರ್​ ಬಿಡುಗಡೆ ಮಾಡಿದೆ. 10 ಚಿತ್ರಗಳ ಪಟ್ಟಿಯಲ್ಲಿ ಯಶ್​ ಅಭಿನಯದ 'ಕೆಜಿಎಫ್​ - ಚಾಪ್ಟರ್​ 2' ಚಿತ್ರವು ಒಂಬತ್ತನೇ ಸ್ಥಾನದಲ್ಲಿದ್ದು, ರಜನಿಕಾಂತ್​ ಅವರ 'ದರ್ಬಾರ್​' ಚಿತ್ರವನ್ನೂ ಹಿಂದಿಕ್ಕಿದೆ ಎನ್ನುವುದು ವಿಶೇಷ.

ದಕ್ಷಿಣ ಭಾರತದ ಈ 10 ಚಿತ್ರಗಳ ಪೈಕಿ ತೆಲುಗು ಚಿತ್ರಗಳ ಸಂಖ್ಯೆ ಐದಿದ್ದರೆ, ತಮಿಳಿನ ನಾಲ್ಕು ಚಿತ್ರಗಳಿವೆ. ಇನ್ನು ಕನ್ನಡದಿಂದ ಒಂದು ಚಿತ್ರ ಮಾತ್ರ ಇದೆ. ಅದರಲ್ಲೂ ಕನ್ನಡದಿಂದ 'ಕೆಜಿಎಫ್​ - ಚಾಪ್ಟರ್​ 2' ಮಾತ್ರ ಆಯ್ಕೆಯಾಗಿದೆ.

2020ರಲ್ಲಿ ಅತೀ ಹೆಚ್ಚು ಟ್ವೀಟ್​ ಆದ ಚಿತ್ರಗಳ ಪೈಕಿ ತಮಿಳು ನಟ ವಿಜಯ್​ ಅಭಿನಯದ 'ಮಾಸ್ಟರ್​' ಚಿತ್ರವು ಮೊದಲ ಸ್ಥಾನ ಪಡೆದಿದೆ. ನಂತರದ ಸ್ಥಾನಗಳಲ್ಲಿ ಪವನ್​ ಕಲ್ಯಾಣ್​ ಅಭಿನಯದ 'ವಕೀಲ್​ ಸಾಬ್​', ಅಜಿತ್​ ಅಭಿನಯದ 'ವಾಲಿಮೈ', ಮಹೇಶ್​ ಬಾಬು ಅಭಿನಯದ 'ಸರಕಾರು ವಾರಿ ಪಾಠ', ಸೂರ್ಯ ಅಭಿನಯದ 'ಸೂರರೈ ಪೋಟ್ರು',ರಾಮ್​ಚರಣ್​ ತೇಜ ಮತ್ತು ಜ್ಯೂನಿಯರ್​ ಎನ್​ಟಿಆರ್​ ಅಭಿನಯದ 'ಆರ್​ಆರ್​ಆರ್​', ಅಲ್ಲು ಅರ್ಜುನ್​ ಅಭಿನಯದ 'ಪುಷ್ಪಾ', ಮಹೇಶ್​ ಬಾಬು ಅಭಿನಯದ 'ಸರಲೇರು ನೀಕೆವ್ವರು', ಯಶ್​ ಅಭಿನಯದ 'ಕೆಜಿಎಫ್​ ಚಾಪ್ಟರ್​ 2' ಮತ್ತು ರಜನಿಕಾಂತ್​ ಅಭಿನಯದ 'ದರ್ಬಾರ್​' ಚಿತ್ರಗಳು ಇವೆ.

ಇನ್ನು, ಮಲಯಾಳಂ ಚಿತ್ರರಂಗದಿಂದ ಯಾವೊಂದು ಚಿತ್ರ ಸಹ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ ಎಂಬುದು ಗಮನಾರ್ಹ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net