ಕಿವಿಯೋಲೆ ಹುಡುಕಿಕೊಟ್ರೆ ಬಹುಮಾನ ಕೊಡ್ತಾರಂತೆ ಜೂಹಿ ಚಾವ್ಲಾ

Juhi Chawla
Published on

ಬೆಂಗಳೂರು: ವಜ್ರಖಚಿತ ಕಿವಿಯೋಲೆ ಒಂದು ಕಳೆದುಹೋಗಿದೆ. ಹುಡುಕಿಕೊಟ್ರೆ ಬಹುಮಾನ ಕೊಡ್ತೇನೆ ಅಂತ ನಟಿ ಜೂಹಿ ಚಾವ್ಲಾ ಭಾನುವಾರ ರಾತ್ರಿ ಟ್ವೀಟ್ ಮಾಡಿದ್ದಾರೆ. ಕಳೆದು ಹೋದ ಕಿವಿಯೋಲೆಯ ಜೊತೆಯ ಇನ್ನೊಂದರ ಚಿತ್ರವನ್ನು ಟ್ವೀಟ್​ ಜತೆಗೆ ಸೇರಿಸಿದ್ದಾರೆ.

ಜೂಹಿ ಚಾವ್ಲಾ ಅವರು ಭಾನುವಾರ ಬೆಳಗ್ಗೆ ಮುಂಬಯಿ ಇಂಟರ್ನ್ಯಾಷನಲ್​ ಏರ್​ಪೋರ್ಟ್​ನ ಟಿ2, ಗೇಟ್ 8ರ ಮೂಲಕ ಹೋಗುತ್ತಿರುವಾಗ ಎಮಿರೇಟ್ಸ್ ಕೌಂಟರ್, ಸೆಕ್ಯುರಿಟಿ ಚೆಕ್​ ಇಮ್ಮಿಗ್ರೇಶನ್ಸ್​ , ಪ್ರಣಾಮ್ ಬಗ್ಗಿ ಆ ಪ್ರದೇಶದಲ್ಲೆಲ್ಲೋ ಒಂದು ಕಿವಿಯಲ್ಲಿದ್ದ ರತ್ನಖಚಿತ ಆಭರಣ ಬಿದ್ದು ಹೋಗಿದೆ. ಯಾರದರೂ ಅದನ್ನು ಪತ್ತೆ ಹಚ್ಚುವಲ್ಲಿ ನೆರವಾದರೆ ತುಂಬಾ ಸಂತೋಷ. ಪೊಲೀಸರಿಗೆ ಮಾಹಿತಿ ಕೊಡಿ. ನಾನು ನಿಮಗೆ ಬಹುಮಾನ ಕೊಡುವೆ.

ಕಳೆದ ಹದಿನೈದು ವರ್ಷಗಳಿಂದ ಧರಿಸುತ್ತಿರುವ ಆಭರಣವಿದು. ಒಂದು ಕಳೆದು ಹೋಗಿದೆ. ಇನ್ನೊಂದರ ಚಿತ್ರ ಇಲ್ಲಿದೆ. ಯಾರದರೂ ನನಗೆ ನೆರವಾಗಿ. ಧನ್ಯವಾದಗಳು ಎಂದು ಸೋಷಿಯಲ್ ಮೀಡಿಯ ಮೂಲಕ ನೆರವು ಕೋರಿದ್ದಾರೆ.

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ.. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net