'ಕಿಕ್ಕು ಪ್ರಾಪ್ತಿರಸ್ತು' ಎಂದು ಅವಳು ಇಂದೇ ಹಾರೈಸಿಬಿಟ್ಟಳು!; ಇದು ಕಾಕತಾಳೀಯವಾ..?

Kicku F
Published on

ಬೆಂಗಳೂರು: ವರ್ಷದ ಅತ್ಯಂತ ಟೈಟ್​ ದಿನ ಯಾವುದು ಎಂದು ಕೇಳಿದರೆ ಡಿ. 31 ಎನ್ನಬಹುದು. ಏಕೆಂದರೆ ಅಂದು "ಇಂದು ಮತ್ತು ನಾಳೆ"ಯ ನಡುವೆ 'ಮತ್ತು' ಇರುತ್ತದೆ. ಇನ್ನು ಅದೇ ದಿನ 'ಕಿಕ್ಕು ಪ್ರಾಪ್ತಿರಸ್ತು' ಎಂದೂ ಹಾರೈಸಿದರೆ ಹೇಗಿರಬಹುದು?

ಅಷ್ಟಕ್ಕೂ ಒಬ್ಬಳು ಒಬ್ಬನಿಗೆ 'ಕಿಕ್ಕು ಪ್ರಾಪ್ತಿರಸ್ತು' ಎಂದು ಹಾರೈಸಿದ್ದೀಗ ಬಹಿರಂಗಗೊಂಡಿದೆ. ಹಾಗಂತ ಇದು ರಿಯಲ್ ಅಲ್ಲ, ರೀಲ್ ವಿಚಾರ. ಅರ್ಥಾತ್, 'ಕಿಕ್ಕು ಪ್ರಾಪ್ತಿರಸ್ತು' ಎಂಬ ಸಿನಿಮಾದ ಫಸ್ಟ್​ಲುಕ್​ ಕಾಕತಾಳೀಯ ಎಂಬಂತೆ ಡಿ. 31ರಂದೇ ಬಿಡುಗಡೆ ಆಗಿದೆ. ಅದಾಗ್ಯೂ ಇದು ಕಾಕತಾಳೀಯ ಎನ್ನುವುದಕ್ಕಿಂತ ಪೂರ್ವನಿಯೋಜಿತ ಎನ್ನುವುದೇ ಸರಿ.

ಆರ್​ಕೆ ಕ್ರಿಯೇಷನ್ಸ್ ಬ್ಯಾನರ್​ನಡಿ ಕೆ.ಆರ್​.ಪುರದ ಶ್ರೀನಿ ಹಾಗೂ ಸುಬ್ಬಣ್ಣ ಎಂಬವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಸಿನಿಮಾದ ನಿರ್ದೇಶಕ ಸುನಿಲ್ ಸನ್ನಿ. ಹರ್ಷಿತ್, ಶಿಲ್ಪ, ಶಿವ, ನವೀನ್ ಅವರ ಅಭಿನಯದಲ್ಲಿ ಈ ಸಿನಿಮಾ ಮೂಡಿಬರುತ್ತಿದ್ದು, ಇಂದು ಇದರ ಫಸ್ಟ್​ಲುಕ್ ಬಿಡುಗಡೆ ಆಗಿದೆ. ಪೋಸ್ಟರ್ ಡಿಸೈನ್, ಸಿನಿಮಾದ ಶೀರ್ಷಿಕೆ ಹಾಗೂ ಬಿಡುಗಡೆ ಮಾಡಿದ ದಿನ ಎಲ್ಲವೂ ಒಂದಕ್ಕೊಂದು ಪೂರಕವಾಗಿರುವುದು ಚಿತ್ರದ ಕುರಿತು ಕುತೂಹಲ ಮೂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net