ಒಟಿಟಿಗೆ ಕಂಗನಾ: ಟೆಂಪ್ಟೇಶನ್ ಐಲ್ಯಾಂಡ್ ಕಾರ್ಯಕ್ರಮ ನಿರೂಪಣೆ

Kangana
Published on

ಬಾಲಿವುಡ್​ನ ಬಿಜಿ ನಟಿಯರ ಪೈಕಿ ಕಂಗನಾ ಸಹ ಒಬ್ಬರು. ಅದೆಷ್ಟೇ ವಿವಾದಗಳ ನಡುವೆಯೂ ಕಂಗನಾಗೆ ಅವಕಾಶಗಳು ಕಿಂಚಿತ್ತೂ ಕಡಿಮೆಯಾಗಿಲ್ಲ. ಈಗಾಗಲೇ ‘ಧಾಕಡ್’ ಮತ್ತು ‘ತೇಜಸ್’ ಎಂಬ ಚಿತ್ರಗಳಲ್ಲಿ ನಟಿಸುತ್ತಿರುವ ಕಂಗನಾ, ‘ಎಮರ್ಜೆನ್ಸಿ’ ಎಂಬ ಚಿತ್ರವನ್ನು ನಿರ್ದೇಶಿಸುವುದಾಗಿಯೂ ಘೋಷಿಸಿದ್ದಾರೆ. ಈ ಮಧ್ಯೆ, ಅವರು ಒಟಿಟಿಗೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ. ಅಮೆರಿಕಾದಲ್ಲಿ ಅತ್ಯಂತ ಜನಪ್ರಿಯಗೊಂಡ ರಿಯಾಲಿಟಿ ಶೋ ಎಂದರೆ ಅದು ‘ಟೆಂಪ್ಟೇಶನ್ ಐಲ್ಯಾಂಡ್’. ಈ ಕಾರ್ಯಕ್ರಮವು ಇದೀಗ ಒಟಿಟಿಯೊಂದರಲ್ಲಿ ಸ್ಟ್ರೀಮ್ ಆಗಲಿದ್ದು, ಅದನ್ನು ನಡೆಸಿಕೊಡುವುದಕ್ಕೆ ಕಂಗನಾ ಅವರನ್ನು ಕೇಳಲಾಗಿದೆ. ಇದುವರೆಗೂ ಕಿರುತೆರೆ ಮತ್ತು ಒಟಿಟಿಯಿಂದ ದೂರವೇ ಇದ್ದ ಕಂಗನಾ, ಆಫರ್ ಕೇಳಿ ಖುಷಿಯಾಗಿದ್ದಾರೆ. ಅಷ್ಟೇ ಅಲ್ಲ, ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನು ಹೊರುವುದಕ್ಕೆ ಗ್ರೀನ್ ಸಿಗ್ನಲ್ ಸಹ ಕೊಟ್ಟಿದ್ದಾರಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net