

ಕರಣ್ ಜೋಹರ್ ವಿರುದ್ಧ ಬಾಲಿವುಡ್ನ ಕೆಲ ಸ್ಟಾರ್ ನಟರು ತಿರುಗಿ ಬಿದ್ದಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಬೆನ್ನಲ್ಲೆ, ಸ್ವಜನಪಕ್ಷಪಾತದ ಹೊಗೆ ಬಾಲಿವುಡ್ನಲ್ಲಿ ಭುಗಿಲೆದ್ದಿದ್ದು, ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳಿಗೂ ಬಿಸಿ ತಟ್ಟಿದೆ. ಅದರಲ್ಲೂ ಕಂಗನಾ ರಣಾವತ್ ಮತ್ತು ಕರಣ್ ಜೋಹರ್ ನಡುವಿನ ಶೀತಲ ಸಮರ ಮಾತ್ರ ಇನ್ನೂ ನಿಲ್ಲುವ ಹಂತಕ್ಕೆ ಬಂದಿಲ್ಲ. ಇದೀಗ ಸ್ಟಾರ್ ನಟರ ಮಕ್ಕಳ ಫೋಟೋ ಬಗ್ಗೆ ಕಂಗನಾ ಕಮೆಂಟ್ ಮಾಡಿದ್ದು, ಕರಣ್ಗೆ ನೇರವಾಗಿ ತರಾಟೆ ತೆಗೆದುಕೊಂಡಿದ್ದಾರೆ.
ಆಲಿಯಾ ಭಟ್, ಸಾರಾ ಆಲಿಖಾನ್, ಸೋನಮ್ ಕಪೂರ್, ಸೋನಾಕ್ಷಿ ಸಿನ್ಹಾ ಈ ನಾಲ್ವರು ಬಾಲಿವುಡ್ನ ಖ್ಯಾತನಾಮ ನಟ, ನಿರ್ದೇಶಕರ ಮಕ್ಕಳು. ಸಿನಿಮಾಕ್ಕೆ ಆಗಮಿಸುವುದಕ್ಕೂ ಮುನ್ನ ಇವರ ಲುಕ್ ಹೇಗಿತ್ತು ಎಂಬುದನ್ನು ಈಗಾಗಲೇ ಫೋಟೋಗಳಲ್ಲಿ ಕಂಡಾಗಿದೆ. ಇದೀಗ ಟ್ವಿಟರ್ನಲ್ಲಿ ಅಂಥ ಒಂದು ಫೋಟೋಕ್ಕೆ ಕಂಗನಾ ಪ್ರತಿಕ್ರಿಯಿಸಿದ್ದಾರೆ.
‘ಒಂದಷ್ಟು ಮಂದಿ ಇದಕ್ಕೆ ಬಾಡಿ ಶೇಮಿಂಗ್ ಎನ್ನಬಹುದು. ಆದರೆ, ಇದು ಅದಲ್ಲ. ಕರಣ್ ಜೋಹರ್ ಅವರಂಥವರಿಗೆಲ್ಲ ಇದೊಂದು ರಿಯಾಲಿಟಿ ಚೆಕ್ ಇದ್ದಂತೆ. ಅವರ ಪ್ರಕಾರ ಸ್ಟಾರ್ ಮಕ್ಕಳಷ್ಟೇ ಸುಂದರಿಯರು. ಪ್ರತಿಭಾನ್ವಿತರು. ಹೊರಗಿನಿಂದ ಬಂದವರ್ಯಾರು ಇವರ ಕಣ್ಣಿಗೆ ಕಾಣಿಸುವುದಿಲ್ಲ. ಜನ ಎಚ್ಚೆತ್ತುಕೊಳ್ಳಬೇಕು’ ಎಂದಿದ್ದಾರೆ.
ಇದನ್ನೂ ಓದಿ: PHOTOS| ಮಕ್ಕಳೊಂದಿಗೆ ಸನ್ನಿ ಲಿಯೋನ್ ಆಟ, ಸುತ್ತಾಟ
ಇನ್ನು ಬಾಲಿವುಡ್ನಲ್ಲಿ ನೆಪೋಟಿಸಂ ವಿರುದ್ಧ ಈಗಾಗಲೇ ಸಾಕಷ್ಟು ಕಲಾವಿದರು ಅಸಮಾಧಾನ ಹೊರಹಾಕಿದ್ದಾರೆ. ಬಿಪಾಶಾ ಬಸು, ಅಭಯ್ ಡಿಯೋಲ್, ಸುಹಾನಾ ಖಾನ್ ಸಹ ಧ್ವನಿ ಎತ್ತಿದ್ದರು. ಇದೊಂದು ದೀರ್ಘವಾದ ಮತ್ತು ಏಕಾಂಗಿ ಹೋರಾಟ. ಆದರೆ ಫಲಿತಾಂಶ ಮಾತ್ರ ಈ ಚಳವಳಿಯಲ್ಲಿ ಇಡೀ ದೇಶ ಭಾಗಿಯಾಗಬೇಕು’ ಎಂದೂ ಈ ಹಿಂದೆ ಕಂಗನಾ ಹೇಳಿಕೊಂಡಿದ್ದರು. (ಏಜೆನ್ಸೀಸ್)