

ಮುಂಬೈ: 'ಪಠಾಣ್' ಚಿತ್ರ ಬಿಡುಗಡೆಯಾದ ಈ ಒಂದು ವಾರದಲ್ಲಿ ಹಲವು ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿದೆ. ಈ ಚಿತ್ರದ ಬಗ್ಗೆ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಸಾಕಷ್ಟು ಮಾತನಾಡಿದ್ದಾರೆ. ಆದರೆ, ಜಾನ್ ಅಬ್ರಹಾಂ ಈ ಚಿತ್ರದ ಬಗ್ಗೆ ಹೆಚ್ಚು ಮಾತನಾಡಿರಲಿಲ್ಲ. ಈಗ ಅವರು ಮೊದಲ ಬಾರಿಗೆ ಚಿತ್ರಕ್ಕಿಂತ ಹೆಚ್ಚಾಗಿ ಶಾರುಖ್ ಖಾನ್ ಬಗ್ಗೆ ಮಾತನಾಡಿದ್ದಾರೆ.
ಇತ್ತೀಚೆಗೆ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಜಾನ್, ಶಾರುಖ್ ಅವರನ್ನು ರಾಷ್ಟ್ರದ ನಿಧಿ ಎಂದು ಕರೆದಿದ್ದಾರೆ.
'ಇದಕ್ಕೂ ಮುನ್ನ ನಾನೊಬ್ಬ ದೊಡ್ಡ ಆಕ್ಷನ್ ಹೀರೋ ಎಂಬ ಭ್ರಮೆಯಲ್ಲಿದ್ದೆ. ಆದರೆ, ನನ್ನ ಭ್ರಮೆಯನ್ನು ಶಾರುಖ್ ನುಚ್ಚುನೂರು ಮಾಡಿದ್ದಾರೆ. ಅವರು ಈ ದೇಶದ ಅತೀ ದೊಡ್ಡ ಆಕ್ಷನ್ ಹೀರೋ ಎಂದರೆ ತಪ್ಪಿಲ್ಲ' ಎಂದು ಜಾನ್ ಅಬ್ರಹಾಂ ಹೇಳಿಕೊಂಡಿದ್ದಾರೆ.
ಇಷ್ಟು ದಿನ ಶಾರುಖ್ ಆಕ್ಷನ್ ಚಿತ್ರಗಳನ್ನು ಏಕೆ ಮಾಡಲಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದ ಜಾನ್. 'ಅವರು ಸಖತ್ ಫ್ಲಿಕ್ಸಿಬಲ್. ಇಷ್ಟು ದಿನ ಯಾಕೆ ಅವರು ಆಕ್ಷನ್ ಸ್ಟಾರ್ ಆಗಲಿಲ್ಲ ಎಂದು ಆಶ್ಚರ್ಯವಾಗುತ್ತಿದೆ. ನನಗೆ ಅವರಿಗೆ ಹೊಡೆಯೋಕೆ ಭಯವಾಗುತ್ತಿತ್ತು. ಅವರು ನಮ್ಮ ರಾಷ್ಟ್ರೀಯ ನಿಧಿ. ಇದೇ ಮೊದಲ ಬಾರಿಗೆ ಶಾರುಖ್ ಅವರ ಜತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ಅವರೊಬ್ಬ ನಟನಷ್ಟೇ ಅಲ್ಲ, ಅವರೊಂದು ಭಾವನೆ' ಎಂದು ಜಾನ್ ಕೊಂಡಾಡಿದ್ದಾರೆ.