More

    ಒಂದು ಮದುವೆಯ ಕಥೆ!; ವಿಭಿನ್ನ ಶೀರ್ಷಿಕೆಯ ಚಿತ್ರ ಪ್ರಾರಂಭ

    ಬೆಂಗಳೂರು: ‘4.30-6ಕ್ಕೆ ಮುಹೂರ್ತ, ನಾಲ್ಕು ಜನ ಕಾಣಿಸ್ತಿಲ್ಲ …’ ಹೀಗೊಂದು ವಿಭಿನ್ನ ಶೀರ್ಷಿಕೆಯ ಚಿತ್ರ ಇತ್ತೀಚೆಗಷ್ಟೇ ಸೆಟ್ಟೇರಿದೆ. ತಮಿಳು ಚಿತ್ರರಂಗದಲ್ಲಿ ಅನುಭವ ಪಡೆದಿರುವ ಶಿವರಾಜ್ ಮತ್ತು ಪೂವೈ ಸುರೇಶ್ ಜಂಟಿಯಾಗಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಯೋಗರಾಜ್ ಸಿನಿಮಾ ನಿರ್ವಣದ ಜತೆಗೆ ಛಾಯಾಗ್ರಹಣ ಮತ್ತು ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ.

    90ರ ದಶಕದಲ್ಲಿ ನಡೆಯುವ ರೆಟ್ರೋ ಕಥೆಯಾಗಿದ್ದು, ಕಲ್ಯಾಣ ಮಂಟಪದಲ್ಲಿ ಒಂದು ದಿನದಲ್ಲಿ ನಡೆಯುವ ಘಟನೆಗಳನ್ನು ಹಾಸ್ಯದ ಮೂಲಕ ತೋರಿಸುವ ಪ್ರಯತ್ನ ಚಿತ್ರತಂಡದ್ದು. ಪೂವೈ ಸುರೇಶ್ ವಿವಾಹಕ್ಕೆ ಹೋದ ಸಂದರ್ಭದಲ್ಲಿ ನಡೆದ ನೈಜ ಅಂಶಗಳಿಗೆ ಸಿನಿಮಾ ರೂಪ ನೀಡುತ್ತಿದ್ದಾರೆ. ವರದಕ್ಷಿಣೆ ಸಮಸ್ಯೆ, ಕುಡಿದು ಬಂದು ಗಲಾಟೆ ಮಾಡುವುದು, ಅಡುಗೆ ಸಮಸ್ಯೆ, ವಧು ಓಡಿ ಹೋಗುವುದು, ಗಂಡು ವಿರೋಧಿಸುವುದು … ಹೀಗೆ ಮದುವೆ ಮನೆಯಲ್ಲಿ ನಡೆಯುವ ಹಲವು ಸಮಸ್ಯೆಗಳ ಸುತ್ತ ಕಥೆ ಸುತ್ತುತ್ತದೆ.

    ‘ರಥಾವರ’ ಚಿತ್ರದ ನಿರ್ವಪಕ ಧರ್ಮಶ್ರೀ ಮಂಜುನಾಥ್ ಪುತ್ರ ಗೋವಿಂದ್, ರಂಗಭೂಮಿಯಲ್ಲಿ ತರಬೇತಿ ಪಡೆದು ಈ ಚಿತ್ರದಲ್ಲಿ ನಾಯಕನಾಗಿ ಪದಾರ್ಪಣೆ ಮಾಡಲಿದ್ದಾರೆ. ಜಾನ್ವಿ ಶರ್ವ, ಸುರಕ್ಷಿತಾ ಅವರಿಗೆ ನಾಯಕಿಯರು. ಉಳಿದಂತೆ ಬಲ ರಾಜವಾಡಿ, ಬ್ಯಾಂಕ್ ಜನಾರ್ಧನ್, ಟೆನ್ನಿಸ್ ಕೃಷ್ಣ, ಕಮಲಾ, ತನುಜಾ, ಮಮತಾ, ಸವಿತಾ, ಅರವಿಂದ್ ಪ್ರಮುಖ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಅಗ್ನಿ ಗಣೇಶ್ ಸಂಗೀತವಿರಲಿದೆ. ಕನ್ನಡ ಹಾಗೂ ತಮಿಳು ಭಾಷೆಗಳಲ್ಲಿ ಸಿನಿಮಾ ಮೂಡಿಬರಲಿದೆ.

    ಮಾಂಸ ಮಾರಾಟ ನಿಷೇಧ, ಮಾಂಸಾಹಾರಿ ಹೋಟೆಲ್​ಗಳೂ ಬಂದ್; ಈಗ ಕ್ರೇನ್​ ಕಾರ್ಯಕ್ಕೂ ನಿರ್ಬಂಧ: ಎಲ್ಲಿ, ಏಕೆ, ಯಾವಾಗ?

    ರಾಜ್ಯಕ್ಕೆ ಎದುರಾಗಿದೆ ಒಂದು ಹೊಸ ಆತಂಕ; ಸರ್ಕಾರದ ಮೊರೆ ಹೋದ ರೇಡಿಯಾಲಜಿ ಇಮೇಜಿಂಗ್ ಅಧಿಕಾರಿಗಳ ಸಂಘ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts