More

    ರಾಜ್ಯಕ್ಕೆ ಎದುರಾಗಿದೆ ಒಂದು ಹೊಸ ಆತಂಕ; ಸರ್ಕಾರದ ಮೊರೆ ಹೋದ ರೇಡಿಯಾಲಜಿ ಇಮೇಜಿಂಗ್ ಅಧಿಕಾರಿಗಳ ಸಂಘ

    ಬೆಂಗಳೂರು: ಆರೋಗ್ಯ ಇಲಾಖೆ ಅಧೀನದ ಕ್ಷ ಕಿರಣ ವಿಕಿರಣ ಸುರಕ್ಷತಾ ನಿರ್ದೇಶನಾಲಯ ಮುಚ್ಚುವ ಲಕ್ಷಣಗಳು ಗೋಚರಿಸಿದ್ದು, ರಾಜ್ಯಕ್ಕೆ ಒಂದು ಹೊಸ ಆತಂಕ ಶುರುವಾಗಿದೆ. ಈ ನಿರ್ದೇಶನಾಲಯವನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳುವಂತೆ ರಾಜ್ಯ ಸರ್ಕಾರಿ ರೇಡಿಯಾಲಜಿ ಇಮೇಜಿಂಗ್ ಅಧಿಕಾರಿಗಳ ಕೇಂದ್ರ ಸಂಘ ಸರ್ಕಾರದ ಮೊರೆ ಹೋಗಿದೆ.

    ಕೇಂದ್ರ ಸರ್ಕಾರದ ಪರಮಾಣು ಶಕ್ತಿ ನಿಯಂತ್ರಣ ಮಂಡಳಿ (ಎಇಆರ್‌ಬಿ) ಹಾಗೂ ಆರೋಗ್ಯ ಇಲಾಖೆಯ ನಡುವಿನ 2018ರ ಡಿ.22ರಂದು ಒಪ್ಪಂದದಂತೆ ಇಲಾಖೆ ವ್ಯಾಪ್ತಿಯಡಿ ರಾಜ್ಯ ಕ್ಷ ಕಿರಣ ವಿಕಿರಣ ಸುರಕ್ಷತಾ ನಿರ್ದೇಶನಾಲಯ ಸ್ಥಾಪಿತವಾಗಿದೆ. ಖಾಸಗಿ ಕ್ಷ ಕಿರಣ ಕೇಂದ್ರಗಳ ನಿಯಂತ್ರಣ ಹಾಗೂ ಕ್ಷ ಕಿರಣಗಳಿಂದ ಉಂಟಾಗುವ ಅಪಾಯ ತಡೆಟಗಟ್ಟಲು ನಿರ್ದೇಶನಾಲಯ ಕಾರ್ಯನಿರ್ವಹಿಸುತ್ತಿದೆ.

    ಎಇಆರ್‌ಬಿ ನಿಯಮದಂತೆ ನಿರ್ದೇಶನಾಲಯ ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದಲ್ಲಿ ಎಂಎಸ್​ಸಿ ಪದವಿ ಪಡೆದಿರಬೇಕು. ರೇಡಿಯಾಲಜಿಕಲ್ ಭೌತಶಾಸ್ತ್ರದಲ್ಲಿ ಎಂಎಸ್​​ಸಿ ಡಿಪ್ಲೊಮಾ ಪಡೆದಿರಬೇಕು. ಪ್ರತಿಷ್ಠಿತ ಅಕಾಡೆಮಿಕ್ ಅಥವಾ ಸಂಶೋಧನೆಗಳ ಸಂಸ್ಥೆಗಳಲ್ಲಿ ವಿಕಿರಣ ಸುರಕ್ಷತೆ ಸಂಬಂಧ ಐದು ವರ್ಷ ಕಾಲ ಕಾರ್ಯನಿರ್ವಹಿಸಿದ ಅನುಭವ ಇರುವ ಅಧಿಕಾರಿಯನ್ನು ನೇಮಿಸಬೇಕು. ಆದರೆ, ಎಇಆರ್‌ಬಿ ನಿಯಮ ಉಲ್ಲಂಘಿಸಿ ಅನರ್ಹ ಅಧಿಕಾರಿಯನ್ನು ನಿರ್ದೇಶನಾಲಯ ಹುದ್ದೆಗೆ ನೇಮಿಸಲಾಗಿದೆ. ಆದೇಶ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಎಇಆರ್‌ಬಿ, ಬರುವ ದಿನಗಳಲ್ಲಿ ನಿರ್ದೇಶನಾಲಯವನ್ನು ಮುಚ್ಚುವ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ, ನಿರ್ದೇಶನಾಲಯವನ್ನು ಮುಚ್ಚದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಸಂಘ ಮನವಿ ಮಾಡಿಕೊಂಡಿದೆ.

    ಎಇಆರ್‌ಬಿ ನಿಯಮಗಳ ಅನ್ವಯ ರಾಜ್ಯದ ಎಲ್ಲ ಕ್ಷ ಕಿರಣ ಯಂತ್ರಗಳ ವಿವರಗಳನ್ನು ಪರಿವೀಕ್ಷಣೆ ನಡೆಸಿ ವಿವರ ಸಂಗ್ರಹಿಸಲಾಗಿದೆ. ಕ್ಷ ಕಿರಣ ಸೇವೆ ಬಗ್ಗೆ ನಿರ್ದೇಶನಾಲಯ ಮೇಲ್ವಿಚಾರಣೆ ನಡೆಸುತ್ತಿದೆ. ಕ್ಷ ಕಿರಣ ಹೊರಸೂಸುವ ಯಂತ್ರಗಳಿಂದ ಅಪಾಯ ತಡೆಯುವುದು ಈ ಸಂಸ್ಥೆಯ ಜವಾಬ್ದಾರಿಯಾಗಿದೆ. ಹೀಗಿರುವಾಗ, ಅನರ್ಹ ಅಧಿಕಾರಿಯ ನೇಮಕ ಹಿನ್ನೆಲೆಯಲ್ಲಿ ನಿರ್ದೇಶನಾಲಯ ರದ್ದುಗೊಳ್ಳುವ ಹಂತಕ್ಕೆ ತಲಪಿದೆ. ಒಂದು ವೇಳೆ ಈ ವಿಭಾಗ ಮುಚ್ಚಿದರೆ ಬಡ ಮತ್ತು ಮಧ್ಯಮ ರೋಗಿಗಳಿಗೆ ತೊಂದರೆಯಾಗಲಿದೆ. ಅಲ್ಲದೆ, ಕ್ಷ ಕಿರಣಗಳಿಂದ ಉಂಟಾಗುವ ಅಪಾಯ ತಡೆಗಟ್ಟಲು ನಿರ್ದೇಶನಾಲಯವನ್ನು ಉಳಿಸಿಕೊಳ್ಳಬೇಕೆಂದು ಸರ್ಕಾರಕ್ಕೆ ಸಂಘದ ಅಧ್ಯಕ್ಷ ಡಾ.ಎಂ.ಆರ್. ರಾಮಚಂದ್ರ ರೆಡ್ಡಿ ಕೋರಿದ್ದಾರೆ.

    ಮಾಂಸ ಮಾರಾಟ ನಿಷೇಧ, ಮಾಂಸಾಹಾರಿ ಹೋಟೆಲ್​ಗಳೂ ಬಂದ್; ಈಗ ಕ್ರೇನ್​ ಕಾರ್ಯಕ್ಕೂ ನಿರ್ಬಂಧ: ಎಲ್ಲಿ, ಏಕೆ, ಯಾವಾಗ?

    ಗಂಡ ಮನೆ ಬಿಟ್ಟು ಹೋಗು ಎಂದಿದ್ದಕ್ಕೆ ಪ್ರಾಣವನ್ನೇ ಬಿಟ್ಟ ಹೆಂಡ್ತಿ; ಮಗ ಪ್ರಯೋಗಕ್ಕೆ ತಂದಿದ್ದ ಕೆಮಿಕಲ್ ಕುಡಿದು ಸತ್ತ ತಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts