ಈ ಒಂದು ಪಾತ್ರದಲ್ಲಿ ನಟಿಸಲು ಧೈರ್ಯ ಬೇಕು! ನೀರು ಕುಡಿದಷ್ಟೇ ಸುಲಭವಾಗಿ ನಟಿಸಿದ್ರು ಕಿಚ್ಚ​, ಯಾವುದು ಆ ಸಿನಿಮಾ?

Kichcha Sudeep
Published on

ಸಿನಿಮಾಗಳಲ್ಲಿ ಕೆಲವು ಪಾತ್ರಗಳನ್ನು ತುಂಬಾ ಚೆನ್ನಾಗಿ ಬರೆಯುತ್ತಾರೆ. ಆ ಪಾತ್ರಗಳಿಂದಾಗಿ ಸಿನಿಮಾ ಹೇಗಿದ್ದರೂ ಒಳ್ಳೆಯ ಹೆಸರು ಬರುತ್ತದೆ. ಆ ಪಾತ್ರಗಳಲ್ಲಿ ನಟರ ಅಭಿನಯವೂ ಪ್ರೇಕ್ಷಕರ ಮೇಲೆ ಶಾಶ್ವತವಾದ ಪ್ರಭಾವವನ್ನು ಬೀರುತ್ತದೆ. ಅವರನ್ನು ಬಿಟ್ಟರೆ ಬೇರೆ ಯಾರೂ ಆ ಪಾತ್ರಗಳನ್ನು ಅಷ್ಟು ಚೆನ್ನಾಗಿ ಮಾಡಲು ಸಾಧ್ಯವಿಲ್ಲ ಅವರಿಗಾಗಿಯೇ ಮಾಡಿದ ಪಾತ್ರವಿದು ಎಂದು ಮಾತನಾಡಿಕೊಳ್ಳುವುದ್ನು ನೀವು ಕೇಳಿರುತ್ತೀರಿ. ಅವುಗಳಲ್ಲಿ ಸುದೀಪ್​ ನಟನೆಯ ಈ ಪಾತ್ರವು ಕೂಡ ಒಂದು.

2012ರಲ್ಲಿ ಬಿಡುಗಡೆಯಾದ ಈಗ ಸಿನಿಮಾ ಒಂದು ಫ್ಯಾಂಟಸಿ ಆಕ್ಷನ್ ಚಿತ್ರ. ಈ ಸಿನಿಮಾ ಬ್ಲಾಕ್​ ಬಸ್ಟರ್​ ಹಿಟ್ ಆಯಿತು. ಎಸ್.ಎಸ್. ರಾಜಮೌಳಿ ಇದನ್ನು ನಿರ್ದೇಶಿಸಿದರು. ನಾಯಕನಾಗಿ ನ್ಯಾಚುರಲ್ ಸ್ಟಾರ್ ನಾನಿ ಮತ್ತು ನಾಯಕಿಯಾಗಿ ಸಮಂತಾ ನಟಿಸಿದರು. ಇವರಿಬ್ಬರೂ ಟಾಪ್ ನಟರು. ಇವರು ನಟಿಸುವ ಯಾವುದೇ ಸಿನಿಮಾದಲ್ಲಿ ನಟನೆಯಲ್ಲಿ ಅವರದ್ದೇ ಮೇಲುಗೈ ಇರುತ್ತದೆ ಎನ್ನಬಹುದು. ಆದರೆ, ಈಗ ಚಿತ್ರದಲ್ಲಿ ಹಾಗಾಗಲಿಲ್ಲ. ಈ ಸಿನಿಮಾದಲ್ಲಿ ವಿಲನ್ ಆಗಿ ನಟಿಸಿದ್ದ ಕಿಚ್ಚ ಸುದೀಪ್ ಅದ್ಬುತವಾಗಿ ನಟಿಸಿದರು.

ಸುದೀಪ್ ಎಷ್ಟು ಪರ್ಫೆಕ್ಟ್ ಆಗಿ ನಟಿಸಿದ್ದಾರೆ ಎಂದರೆ ನೋಡಿದವರೆಲ್ಲರು ನಾಯಕನನ್ನು ಹೊಗಳುವ ಬದಲು ಸುದೀಪ್​ ನಟನೆ ನೋಡಿ ವಾವ್ ಎಂದರು. ಸುದೀಪ್​ ಕಾಣಿಸಿಕೊಂಡ ಪ್ರತಿಯೊಂದು ದೃಶ್ಯವೂ ಅದ್ಭುತವಾಗಿತ್ತು. ಸುದೀಪ್​ ಅವರ ಪಾತ್ರವೇ ನೆಕ್ಸ್ಟ್​ ಲೆವೆಲ್​ನಲ್ಲಿ ಇತ್ತು. ರಾಜಮೌಳಿ ಅವರು ಸುದೀಪ್​ ಅವರ ಎಲ್ಲ ನಟನಾ ಕೌಶಲ್ಯವನ್ನು ಚೆನ್ನಾಗಿ ಬಳಸಿಕೊಂಡರು.

ತನ್ನ ಮುಂದೆ ಒಂದು ನೋಣ ಇದೆ ಎಂದು ಕಲ್ಪನೆ ಮಾಡಿಕೊಂಡು ನಟನೆ ಮಾಡುವುದು ತುಂಬಾ ಕಷ್ಟ. ಆದರೆ, ಸುದೀಪ್​ ಅವರ ಲೀಲಾಜಾಲವಾಗಿ ನಟಿಸಿದರು. ಈ ಒಂದು ಸಿನಿಮಾಕ್ಕಾಗಿ ಸುದೀಪ್​ ಅವರಿಗೆ ಸಾಕಷ್ಟು ಪ್ರಶಸ್ತಿಗಳು ಒಲಿದುಬಂದವು. ತೆಲಂಗಾಣ ಸರ್ಕಾರ ನೀಡಿದ ನಂದಿ ಪ್ರಶಸ್ತಿಗೆ ಸುದೀಪ್​ ಭಾಜನರಾದರು. ರಾಷ್ಟ್ರಮಟ್ಟದಲ್ಲಿ ಸುದೀಪ್​ ಅವರ ಖ್ಯಾತಿ ಹೆಚ್ಚಾಯಿತು. ತನ್ನ ಪ್ರತಿಭೆಯಿಂದಲೇ ಕಿಚ್ಚ ಎಲ್ಲರ ಗಮನ ಸೆಳೆದು ಅಭಿನಯ ಚಕ್ರವರ್ತಿ ಅನ್ನೋ ಹೆಸರಿಗೆ ಜೀವ ತುಂಬಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net