ಚೆನ್ನೈ: ಸೂರ್ಯ ಮತ್ತು ಜ್ಯೋತಿಕಾ ಕಾಲಿವುಡ್ನ ಸ್ಟಾರ್ ದಂಪತಿ. ಪ್ರೀತಿಸಿ ಮದುವೆಯಾದ ಈ ಜೋಡಿಗೆ ದಿಯಾ ಎಂಬ ಮಗಳು ಮತ್ತು ದೇವ್ ಎಂಬ ಮಗನಿದ್ದಾನೆ. ಸೆಲೆಬ್ರಿಟಿ ದಂಪತಿ ನಡುವೆ ಡಿವೋರ್ಸ್ ಪ್ರಕರಣಗಳು ಹೆಚ್ಚಾಗುತ್ತಿರುವುದರ ನಡುವೆ ಈ ಜೋಡಿ ಸುಂದರ ಸಂಸಾರ ನಡೆಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ನಟಿ ಜ್ಯೋತಿಕಾ 90ರ ದಶಕದಲ್ಲಿ ತಮಿಳು ಚಿತ್ರರಂಗದಲ್ಲಿ ಪ್ರಮುಖ ನಟಿಯಾಗಿ ಹೊರಹೊಮ್ಮಿದರು. ಕನ್ನಡದಲ್ಲಿ ಉಪೇಂದ್ರ ಅಭಿನಯದ ನಾಗರಹಾವು ಸಿನಿಮಾದಲ್ಲಿ ನಟಿಸಿದ್ದಾರೆ. ಕಾಕಕಾಕ ಸಿನಿಮಾದಲ್ಲಿ ಸೂರ್ಯ ಮತ್ತು ಜ್ಯೋತಿಕಾ ಒಟ್ಟಿಗೆ ನಟಿಸಿದ್ದು, ಚಿತ್ರೀಕರಣದ ವೇಳೆ ಪ್ರೀತಿಯಲ್ಲಿ ಬಿದ್ದು ಇಬ್ಬರು ಮದುವೆಯಾದರು. ಸಂಸಾರದ ಜೊತೆಗೆ ಸಿನಿಮಾಗಳಲ್ಲೂ ಜ್ಯೋತಿಕಾ ಬಿಜಿಯಾಗಿದ್ದಾರೆ.
ಜ್ಯೋತಿಕಾ ಮತ್ತು ಸೂರ್ಯ ಸದ್ಯ ಮುಂಬೈನಲ್ಲಿಯೇ ನೆಲೆಸಿದ್ದಾರೆ. ಇತ್ತೀಚೆಗಷ್ಟೇ ಇಬ್ಬರು ತಮ್ಮ 18ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ್ದು, ಅಭಿಮಾನಿಗಳು ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ. ಇದರ ನಡುವೆ ಜ್ಯೋತಿಕಾ ಮಾಧ್ಯಮವೊಂದಕ್ಕೆ ಈ ಹಿಂದೆ ನೀಡಿದ್ದ ಸಂದರ್ಶನವೊಂದರ ವಿಡಿಯೋ ತುಣುಕು ಹರಿದಾಡುತ್ತಿದೆ.
ಸೂರ್ಯ ನನ್ನೊಂದಿಗೆ ಸ್ನೇಹದಿಂದ ಇರುತ್ತಾನೆ. ನನಗೆ ಬಹಳ ಗೌರವವನ್ನು ಕೊಡುತ್ತಾನೆ. ನನಗೆ ಅದು ತುಂಬಾ ಇಷ್ಟ. ಆದರೆ, ಸೂರ್ಯನ ಈ ಒಂದು ಅಭ್ಯಾಸ ಮಾತ್ರ ನನಗೆ ಇಷ್ಟವಾಗುವುದಿಲ್ಲ. ಅದೇನೆಂದರೆ, ಬಾತ್ರೂಂನಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ಇದೊಂದನ್ನು ನನಗೆ ಸಹಿಸಲಾಗದು. ಈ ವಿಚಾರಕ್ಕೆ ಇಬ್ಬರು ಜಗಳವಾಡುತ್ತೇವೆ ಎಂದು ಜ್ಯೋತಿಕಾ ಈ ಹಿಂದಿನ ಸಂದರ್ಶನದಲ್ಲಿ ಹೇಳಿದ್ದರು. (ಏಜೆನ್ಸೀಸ್)
ನೀವು ಎಷ್ಟು ಆರೋಗ್ಯವಂತರೆಂದು ತಿಳಿಯಲು ನಿಮ್ಮ ನಾಲಿಗೆ ಬಣ್ಣ ಚೆಕ್ ಮಾಡಿ! ಈ ಬಣ್ಣದಲ್ಲಿದ್ರೆ ತುಂಬಾ ಡೇಂಜರ್!
ಸೌಂದರ್ಯಕ್ಕೆ ಮರುಳಾಗಿ ಲೇಡಿ ಕಾನ್ಸ್ಟೆಬಲ್ ಪ್ರೀತಿಯ ಬಲೆಯಲ್ಲಿ ಬಿದ್ದ ಎಸ್ಐಗೆ ಕಾದಿತ್ತು ಬಿಗ್ ಶಾಕ್!