ಪ್ರತಿಯೊಬ್ಬರೂ ಆರೋಗ್ಯವಾಗಿರಲು ಬಯಸುತ್ತಾರೆ. ಏಕೆಂದರೆ, ಆರೋಗ್ಯವೇ ಭಾಗ್ಯ. ಎಲ್ಲ ಇದ್ದು ಆರೋಗ್ಯವೇ ಇಲ್ಲದಿದ್ದರೆ ಏನು ಪ್ರಯೋಜನಾ? ಸಕಲವನ್ನು ಅನುಭವಿಸಲು ಆರೋಗ್ಯವೇ ಬಹುಮುಖ್ಯ. ಆದರೆ ನಾವು ಆರೋಗ್ಯವಾಗಿದ್ದೇವೆಯೇ ಅಥವಾ ಇಲ್ಲವೇ ಎಂಬುದನ್ನು ವೈದ್ಯರ ಬಳಿ ಹೋಗದೆ ತಿಳಿಯುವುದು ಹೇಗೆ? ಹೇಗೆಂದರೆ ನಮ್ಮ ದೇಹದ ಕೆಲವೊಂದು ಸೂಚನೆಗಳಿಂದ ಖಚಿತವಾಗಿ ತಿಳಿಯಬಹುದು.
ನಿಮ್ಮ ನಾಲಿಗೆಯ ಬಣ್ಣ ನೀವು ಎಷ್ಟು ಆರೋಗ್ಯಕರ ಎಂದು ಹೇಳುತ್ತದೆ. ಆರೋಗ್ಯಕರ ನಾಲಿಗೆಯು ಗುಲಾಬಿ ಬಣ್ಣವನ್ನು ಹೊಂದಿರುತ್ತದೆ. ಆದರೆ ಕೆಲವೊಮ್ಮೆ ಕೆಲವು ಕಾರಣಗಳಿಂದ ನಾಲಿಗೆಯ ಬಣ್ಣ ಬದಲಾಗುತ್ತದೆ. ಆರೋಗ್ಯವಂತ ವ್ಯಕ್ತಿಯ ನಾಲಿಗೆ ಯಾವಾಗಲೂ ಮಸುಕಾದ ಗುಲಾಬಿ ಬಣ್ಣವನ್ನು ಹೊಂದಿರುತ್ತದೆ ಮತ್ತು ಅದರ ಮೇಲೆ ಬಿಳಿ ಪದರವಿದ್ದರೆ ನೀವು ಆರೋಗ್ಯವಾಗಿದ್ದೀರಿ ಎಂದರ್ಥ.
ನೀಲಿ ಬಣ್ಣದಲ್ಲಿ ನಾಲಿಗೆ: ನಾಲಿಗೆ ನೀಲಿ ಬಣ್ಣದಲ್ಲಿದ್ದರೆ ಹೃದಯ ಸಂಬಂಧಿ ಸಮಸ್ಯೆಗಳ ಸೂಚನೆಯಾಗಿದೆ. ಹೃದಯವು ಆರೋಗ್ಯಕರವಾಗಿಲ್ಲದಿದ್ದರೆ, ರಕ್ತದಲ್ಲಿನ ಆಮ್ಲಜನಕದ ಮಟ್ಟವು ಕಡಿಮೆಯಾಗುತ್ತದೆ. ಇದರಿಂದ ನಾಲಿಗೆ ನೀಲಿ ಬಣ್ಣಕ್ಕೆ ತಿರುಗುತ್ತದೆ.
ಕಪ್ಪು ನಾಲಿಗೆ: ನಿಮ್ಮ ನಾಲಿಗೆ ಬಣ್ಣ ಕಪ್ಪಾದರೆ ಖಂಡಿತಾ ಅಪಾಯ ಎಂದು ತಿಳಿಯಿರಿ. ಶಿಲೀಂಧ್ರಗಳ ಸೋಂಕಿನಿಂದ ಹುಣ್ಣುಗಳು ಉಂಟಾಗಬಹುದು. ಇಲ್ಲದಿದ್ದರೆ ಅಪಾಯಕಾರಿ ಕ್ಯಾನ್ಸರ್ನಂತಹ ಸಮಸ್ಯೆಗಳಿಂದ ನಾಲಿಗೆ ಕಪ್ಪು ಬಣ್ಣಕ್ಕೆ ತಿರುಗಬಹುದು.
ಹಳದಿ ನಾಲಿಗೆ: ನಾಲಿಗೆ ಬಣ್ಣ ಹಳದಿಯಾಗಿದ್ದರೆ ವಿಟಮಿನ್ ಕೊರತೆ ಇದೆ ಎಂದರ್ಥ. ಅಜೀರ್ಣ ಸಮಸ್ಯೆಗಳಿಂದ ನಾಲಿಗೆ ಹಳದಿ ಬಣ್ಣಕ್ಕೆ ತಿರುಗಬಹುದು. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು, ಯಕೃತ್ತಿನ ಸಮಸ್ಯೆಗಳಿದ್ದರೂ ನಾಲಿಗೆ ಹಳದಿ ಬಣ್ಣಕ್ಕೆ ತಿರುಗುತ್ತದೆ.
ಬಿಳಿ ನಾಲಿಗೆ: ನಿಮ್ಮ ನಾಲಿಗೆ ಪೂರ್ತಿಯಾಗಿ ಬೆಳ್ಳಗಿದ್ದರೆ ನಿರ್ಜಲೀಕರಣದ ಸಮಸ್ಯೆ ಇದೆ ಎಂದರ್ಥ. ಅಲ್ಲದೆ, ಧೂಮಪಾನದ ಕಾರಣದಿಂದ ನಾಲಿಗೆ ಬಿಳಿಯಾಗಬಹುದು. ನಾಲಿಗೆ ಬೆಳ್ಳಗಿದ್ದರೆ ಹೆಚ್ಚು ನೀರು ಕುಡಿಯಿರಿ.
ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ಸೌಂದರ್ಯಕ್ಕೆ ಮರುಳಾಗಿ ಲೇಡಿ ಕಾನ್ಸ್ಟೆಬಲ್ ಪ್ರೀತಿಯ ಬಲೆಯಲ್ಲಿ ಬಿದ್ದ ಎಸ್ಐಗೆ ಕಾದಿತ್ತು ಬಿಗ್ ಶಾಕ್!
ಶಿಕ್ಷಣ, ಮಾಡೆಲಿಂಗ್ ಮತ್ತು… ಈ ಬ್ಯೂಟಿಫುಲ್ IPS ಅಧಿಕಾರಿಯ ಹಿಂದಿದೆ ಒಂದು ಮನಮಿಡಿಯುವ ಕತೆ!