ಚಾಣಕ್ಯನ ಪ್ರಕಾರ ಜೀವನದಲ್ಲಿ ನೀವು ಮಾಡುವ ಈ ಸಣ್ಣ ತಪ್ಪುಗಳು ನಿಮ್ಮನ್ನು ನರಕಕ್ಕೆ ದೂಡುತ್ತದೆ ಎಚ್ಚರ!

Chanakya
Published on

ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಚಾಣಕ್ಯ ತಿಳಿಯದ ವಿಷಯವು ಇಲ್ಲ. ಅರ್ಥಶಾಸ್ತ್ರ, ಸಮಾಜ ವಿಜ್ಞಾನ, ರಾಜಕೀಯ, ರಾಜತಾಂತ್ರಿಕತೆ ಮತ್ತು ಮಿಲಿಟರಿ ಸೈನ್ಸ್ ಸೇರಿದಂತೆ ಅನೇಕ ವಿಷಯಗಳ ಮೇಲೆ ಅಗಾಧ ಜ್ಞಾನವನ್ನು ಹೊಂದಿದ್ದಾರೆ. ಪ್ರತಿಯೊಂದು ವಿಷಯದ ಮೇಲೂ ಚಾಣಕ್ಯರ ದೃಷ್ಟಿಕೋನ ತುಂಬಾ ವಿಶಾಲವಾಗಿದೆ. ಈ ಕಾರಣದಿಂದಲೇ ಮಾನವ ಜೀವನದ ಮೇಲೆ ಪರಿಣಾಮ ಬೀರುವ ಸಣ್ಣ ಮತ್ತು ದೊಡ್ಡ ವಿಚಾರ ಅಥವಾ ವಸ್ತುಗಳ ಮೇಲೆ ಬಹಳ ಸೂಕ್ಷ್ಮವಾಗಿ ಬೆಳಕು ಚೆಲ್ಲುತ್ತಾರೆ. ಚಾಣಕ್ಯನ ನೀತಿಯು ಒಬ್ಬ ವ್ಯಕ್ತಿ ಯಶಸ್ವಿಯಾಗಲು ಪ್ರೇರೇಪಿಸುತ್ತದೆ.

ಚಾಣಕ್ಯ ತತ್ವಗಳನ್ನು ಒಳಗೊಂಡಿರುವ ಚಾಣಕ್ಯ ನೀತಿ ಎಂಬ ಪುಸ್ತಕವನ್ನು ಬರೆಯಲಾಗಿದೆ. ಸಂತೋಷದ ಜೀವನದ ಅನೇಕ ರಹಸ್ಯಗಳನ್ನು ಆ ಪುಸ್ತಕದಲ್ಲಿ ತಿಳಿಸಲಾಗಿದೆ. ಅಲ್ಲದೆ, ಮನುಷ್ಯನಾಗಿ ಜನ್ಮ ತಾಳಿದ ವ್ಯಕ್ತಿ ತನ್ನ ಬದುಕನ್ನು ಸುಧಾರಿಸಿಕೊಳ್ಳಲು ಅನುಸರಿಸಬೇಕಾದ ಧರ್ಮ, ಕರ್ಮ, ಪಾಪ ಹಾಗೂ ಪುಣ್ಯಗಳ ಬಗ್ಗೆ ಚಾಣಕ್ಯನ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಮನುಷ್ಯರಾಗಿ ಹುಟ್ಟಿದ ನಾವು ನಮ್ಮ ಜೀವನದಲ್ಲಿ ಯಶಸ್ವಿಯಾಗಬೇಕು ಎಂದು ಭಾವಿಸುತ್ತೇವೆ. ಅದಕ್ಕೆ ದಾರಿಯನ್ನು ಚಾಣಕ್ಯ ಹಾಕಿಕೊಟ್ಟಿದ್ದಾನೆ. ಆ ದಾರಿಯಲ್ಲಿ ನಡೆದರೆ ಯಶಸ್ಸು ಖಂಡಿತವಾಗಿ ಸಿಗುತ್ತದೆ. ಚಾಣಕ್ಯ ತತ್ವಗಳ ಪ್ರಕಾರ, ಒಬ್ಬ ವ್ಯಕ್ತಿಯ ನಡತೆಯು ಮರಣದ ನಂತರ ಸ್ವರ್ಗಕ್ಕೆ ಅಥವಾ ನರಕಕ್ಕೆ ಹೋಗುವುದನ್ನು ನಿರ್ಧರಿಸುತ್ತದೆ. ಹೀಗಾಗಿ ನಾವು ಜೀವನದಲ್ಲಿ ಮಾಡಬಾರದಂತಹ ತಪ್ಪುಗಳನ್ನು ಈ ಪೋಸ್ಟ್‌ನಲ್ಲಿ ನೋಡಬಹುದು.

1. ಚಾಣಕ್ಯನ ಪ್ರಕಾರ, ಹೆಚ್ಚು ಪಾಪ ಮಾಡುವವರು ನರಕಕ್ಕೆ ಹೋಗುತ್ತಾರೆ. ಉದಾಹರಣೆಗೆ ಸಂಬಂಧಿಕರನ್ನು ದ್ವೇಷಿಸುವವರು, ಹಿರಿಯರನ್ನು ಅವಮಾನಿಸುವವರು, ದುಷ್ಟ ಸ್ವಭಾವದವರು, ಇತರರನ್ನು ಹಿಂಸಿಸುವವರು ಪಾಪಿಗಳಾಗಿ ಕಾಣುತ್ತಾರೆ. ಅಂತಹ ಪಾಪಗಳನ್ನು ಮಾಡಿದವರು ಸತ್ತ ನಂತರ ನರಕಕ್ಕೆ ಹೋಗುತ್ತಾರೆ.

2. ಚಾಣಕ್ಯ ನೀತಿಯ ಪ್ರಕಾರ, ಹೆಣ್ಣನ್ನು ಅಗೌರವಿಸುವವರು, ಮಕ್ಕಳನ್ನು ಹೀನಾಯವಾಗಿ ನಡೆಸಿಕೊಳ್ಳುವವರು, ಬಡವರನ್ನು ಶೋಷಿಸುವವರು ಮುಂತಾದವರು ಮಹಾಪಾಪಿಗಳಾಗಿ ಕಾಣುತ್ತಾರೆ. ಅವರು ಸಾವಿನ ನಂತರ ನರಕಕ್ಕೆ ಹೋಗುತ್ತಾರೆ. ದೇವರು ಕೂಡ ಈ ಪಾಪಗಳನ್ನು ಕ್ಷಮಿಸುವುದಿಲ್ಲ.

3. ದುಷ್ಟರು ಯಾವಾಗಲೂ ಇತರರಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಮಾತು ಮತ್ತು ಕೆಟ್ಟ ಕೆಲಸಗಳಿಂದ ನೋವನ್ನುಂಟುಮಾಡುತ್ತಾರೆ. ಈ ಪಾಪವನ್ನು ಯಾರೂ ಮಾಡಬಾರದು ಎನ್ನುತ್ತಾನೆ ಚಾಣಕ್ಯ. ಪ್ರೀತಿಪಾತ್ರರನ್ನು ನೋಯಿಸುವುದು ಅತ್ಯಂತ ಕ್ರೂರ ಕೃತ್ಯವಾಗಿ ಕಂಡುಬರುತ್ತದೆ. ಅಂತಹ ವ್ಯಕ್ತಿಯು ಎಂದಿಗೂ ಸಂತೋಷದಿಂದ ಬದುಕುವುದಿಲ್ಲ.

4. ದುರಾಸೆಯುಳ್ಳ ವ್ಯಕ್ತಿಯು ಜೀವಿಸುತ್ತಿರುವಾಗಲೇ ನರಕದಲ್ಲಿ ತನ್ನ ಸ್ಥಳಾವಕಾಶವನ್ನು ಕಾಯ್ದಿರಿಸಿಕೊಳ್ಳುತ್ತಾನೆ. ಹಣ, ಸಂಪತ್ತು, ಗೌರವ ಅವರನ್ನು ಸ್ವಾರ್ಥಿಗಳನ್ನಾಗಿ ಮಾಡುತ್ತದೆ. ಅದಕ್ಕಾಗಿ ಅವರು ಹಾನಿಕಾರಕ ವ್ಯಕ್ತಿಯಾಗುತ್ತಾರೆ. ಇಂಥವರು ಖಂಡಿತವಾಗಿಯೂ ಶಾಂತಿಯುತವಾಗಿ ಸಾಯುವುದಿಲ್ಲ. ಅವರು ಬಹುದಿನಗಳ ಕಾಲ ಈ ಲೋಕದಲ್ಲಿ ದುರಾತ್ಮವಾಗಿ ಸಂಚರಿಸುತ್ತಾರೆ.

ವಿಶೇಷ ಸೂಚನೆ: ಮೇಲಿನ ಮಾಹಿತಿ ಸಾಮಾನ್ಯ ಸಾರ್ವಜನಿಕ ಮಾಹಿತಿಯನ್ನು ಆಧರಿಸಿದೆ. ವಿಜಯವಾಣಿ.ನೆಟ್​ ಅದರ ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ. ಯಾವುದೇ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೊದಲು, ಸಂಬಂಧಿತ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net