24 ವರ್ಷದ ಸಿನಿಜರ್ನಿಯಲ್ಲಿ ಸುದೀಪ್​ ಸಂಪಾದಿಸಿದ್ದೇನು?; ಅವರೇ ಹೇಳಿದ್ದಾರೆ ನೋಡಿ!!

se
Published on

ಕಿಚ್ಚ ಸುದೀಪ್​ ಚಿತ್ರರಂಗಕ್ಕೆ ಬಂದು ದಶಕಗಳು ಕಳೆದಿವೆ. ಕನ್ನಡ ಮಾತ್ರವಲ್ಲದೆ ಇಡೀ ಭಾರತೀಯ ಸಿನಿಮಾರಂಗದಲ್ಲಿ ಸುದೀಪ್​ ಹೆಸರು ಮಾಡಿದ್ದಾರೆ. ಬಿಗ್​ಬಿ ಅಮಿತಾಬ್​ ಅವರಿಂದ ಹಿಡಿದು ಮೆಗಾಸ್ಟಾರ್ ಚಿರಂಜೀವಿ ಅವರೊಟ್ಟಿಗೆ ತೆರೆಹಂಚಿಕೊಂಡಿದ್ದಾರೆ. ಬಾಲಿವುಡ್​ ಸೇರಿ ದಕ್ಷಿಣದ ಖ್ಯಾತ ನಾಮ ನಿರ್ದೇಶಕರ ಜತೆ ಕೆಲಸ ಮಾಡಿದ ಅನುಭವ ಸುದೀಪ್​ಗಿದೆ. 1997ರಲ್ಲಿ ತಾಯವ್ವ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟ ಕಿಚ್ಚ, ಸಿನಿಮಾರಂಗದಲ್ಲಿ ಹೆಚ್ಚು ಕಡಿಮೆ ಎರಡೂವರೆ ದಶಕ ಪೂರೈಸಿದ್ದಾರೆ.

ಹಾಗಾದರೆ ಆ ಸುದೀರ್ಘ ಅವಧಿಯಲ್ಲಿ ಕಿಚ್ಚ ಸುದೀಪ್​ ಗಳಿಸಿದ್ದಷ್ಟು? ಗಳಿಸಿದ್ದೇನು? ಈ ಪ್ರಶ್ನೆ ಸಹಜವಾಗಿ ಎಲ್ಲರ ತಲೆಯಲ್ಲಿ ಕೊರೆಯಬಹುದು. ಅದಕ್ಕೆ ಹಿಂದಿ ವೆಬ್​ಸೈಟ್​ವೊಂದಕ್ಕೆ ನೀಡಿದ ಸಂದರ್ಭದಲ್ಲಿ ಸುದೀಪ್​ ಉತ್ತರ ನೀಡಿದ್ದಾರೆ. ‘ನಿಮ್ಮ ಅಭಿಮಾನಿಗಳ ಬಗ್ಗೆ ಏನು ಹೇಳಲು ಬಯಸುತ್ತೀರಿ?.. ಎಂದು ನಿರೂಪಕ ಕೇಳುತ್ತಿದ್ದಂತೆ, ಸುದೀಪ್​ ಹೀಗೆಂದರು..

‘ಹ್ಹ ಹ್ಹ ನಾನು ಹೆಚ್ಚು ಹೊತ್ತು ನನ್ನ ಅಭಿಮಾನಿಗಳ ಜತೆ ಕಳೆಯುತ್ತೇನೆ. ಸದಾ ನನ್ನ ಜೊತೆಗಿರುತ್ತಾರೆ. ಸಂತೋಷದ ಕ್ಷಣಗಳ ಜತೆಗೆ ನನ್ನ ಕಠಿಣ ಸಂದರ್ಭದಲ್ಲೂ ನನಗೆ ಸಾಥ್​ ನೀಡುತ್ತಾರೆ. ಅವರಿಂದಲೇ ನಾನೀಗ ಈ ಸ್ಥಾನದಲ್ಲಿದ್ದೇನೆ. 24 ವರ್ಷದ ಸಿನಿಮಾ ಜರ್ನಿಯಲ್ಲಿ ನಾನು ಏನನ್ನಾದರೂ ಸಂಪಾದಿಸಿದ್ದೇನೆಂದರೆ ಅದು ನನ್ನ ಅಭಿಮಾನಿಗಳು ಮಾತ್ರ’ ಎಂದು ಸುದೀಪ್​ ಪ್ರತಿಕ್ರಿಯಿಸಿದ್ದಾರೆ.

ಸದ್ಯ ಅನೂಪ್​ ಭಂಡಾರಿ ನಿರ್ದೇಶನದಲ್ಲಿ ಫ್ಯಾಂಟಮ್​​ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಸುದೀಪ್​, ಜು.17ರಿಂದ ಹೈದರಾಬಾದ್​ಗೆ ತೆರಳಿ ಶೂಟಿಂಗ್​ನಲ್ಲಿ ಪಾಲ್ಗೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net