

ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟಿ ನಯನಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್. ಏನೇ ನಡೆದರೂ ಅದನ್ನು ತಮ್ಮ ಫಾಲೋವರ್ಸ್ಗೆ ತಲುಪಿಸುತ್ತಾರೆ. ಹೀಗಿರುವಾಗಲೇ ಇದೀಗ ಅದೇ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ಗೆ ಆಹಾರವಾಗಿದ್ದಾರೆ. ಫೋಟೋವೊಂದಕ್ಕೆ ಇಂಗ್ಲಿಷ್ನಲ್ಲಿ ಕ್ಯಾಪ್ಶನ್ ಬರೆದಿದ್ದಕ್ಕೆ ಒಂದಷ್ಟು ನೆಟ್ಟಿಗರು, ಕನ್ನಡದಲ್ಲಿಯೇ ಕಮೆಂಟ್ ಮಾಡುವಂತೆ ಕೋರಿದ್ದರು. ಆ ಕಮೆಂಟ್ಗೆ ಪ್ರತಿಕ್ರಿಯಿಸಿದ್ದೇ ಇದೀಗ ನಯನಾಗೆ ಮುಳುವಾಗಿದೆ. ಫೇಸ್ಬುಕ್ನಲ್ಲಿ ಹಿಗ್ಗಾ ಮುಗ್ಗಾ ತರಾಟೆ ತೆಗೆದುಕೊಳ್ಳುತ್ತಿದ್ದಾರೆ.
ಅಷ್ಟಕ್ಕೂ ನಯನಾ ಕಮೆಂಟ್ ಮಾಡಿದ್ದಾದರೂ ಏನು? ಇಂಗ್ಲಿಷ್ನಲ್ಲಿ ಪೋಸ್ಟ್ ಹಾಕಿದ್ದಕ್ಕೆ ಪ್ರತಿಯಾಗಿ, ‘ಫೇಮಸ್ ಆಗೋತನ ಕನ್ನಡ ಬೇಕು. ಆದಮೇಲೆ ಇಂಗ್ಲಿಷ್’ ಎಂಬ ಕಮೆಂಟ್ಗೆ ‘ಅಪ್ಪ ಕನ್ನಡದ ಭಕ್ತ, ಮುಚ್ಕೊಂಡು ನಿನ್ ಕೆಲ್ಸ ನೋಡ್ಕೊ’ ಎಂದು ನಯನಾ ಪ್ರತಿಕ್ರಿಯಿಸಿದ್ದರು. ಅವರು ಹಾಗೆ ಉತ್ತರಿಸುತ್ತಿದ್ದಂತೆ ಸಾಕಷ್ಟು ಮಂದಿ ನಯನ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಂತ ಕೆಲವೊಂದಿಷ್ಟು ಕಮೆಂಟ್ಗಳು ಇಲ್ಲಿವೆ..
ಇದನ್ನೂ ಓದಿ: ಪ್ರಭಾಸ್ ಹೊಸ ಚಿತ್ರದ ಪೋಸ್ಟರ್ ಹೀಗಿದೆ ನೋಡಿ …
‘ವಾವ್.... ಅದ್ಕೆ ಹೇಳೋದು ಕನ್ನಡ ಭಾಷೆ,ಕನ್ನಡಿಗರತ್ರ ತಗ್ಗಿ ಬಗ್ಗಿ ನಡೆಯೋ ಕಲಾವಿದರನ್ನ ಬೆಳಸಬೇಕು, ಪ್ರೋತ್ಸಾಹಿಸಬೇಕು ಅಂತ! ಹೀಗೆ ಸಡನ್ನಾಗಿ ಪಾಪ್ಯೂಲಾರಿಟಿ, ದುಡ್ಡು, ಅವಕಾಶ ಸಿಕ್ಕಾಗ ತಲೆತಿರುಗುತ್ತೆ ಅಂತ ಈಕೆನ ನೋಡೀನೇ ಹೇಳಿರಬೇಕು.. ಕನ್ನಡಾಭಿಮಾನಿ ಹತ್ರ ಹೀಗೆ ಮಾತಾಡ್ತಿದ್ದೀರ ಅಂದ್ರೆ ಎಷ್ಟ್ ಧಿಮಾಕಿರಬೇಕು..#ಅಣ್ಣಾವ್ರನ್ನನೋಡ್ಕೊಂಡುಬನ್ನಿ ಯಾವೋ ಇವೆಲ್ಲ ಥೋ..’
‘ಅಲ್ಪನಿಗೆ ಐಶ್ವರ್ಯ ಬಂದ್ರೆ ಅರ್ಧ ರಾತ್ರಿಯಲ್ಲಿ ಛತ್ರಿ ಹಿಡಿದ್ನಂತೆ...ನಿಮ್ಮಂತವರು ಡಾ ! ರಾಜ್ ಕುಮಾರ್ ಅಣ್ಣನವರ ಕಾಲು ಧೂಳಿಗೂ ಸಮವಿಲ್ಲಾ..ಎಷ್ಟೇ ಎತ್ತರಕ್ಕೆ ಬೆಳೆದರೂ ಸ್ವಲ್ಪವೂ ಅಹಂ ಪಟ್ಟವರಲ್ಲಾ ಈಗಿನ ಕಾಲದಲ್ಲಿ ಸ್ವಲ್ಪ ಬೆಳೆದರೆ ತಲೆನೆ ನಿಲ್ಲಲ್ಲಾ..ವಾವ್ ಸ್ವಲ್ಪ ದಿನ ಇರಿ ನಿಮಗೆಲ್ಲಾ ಕಾಲವೇ ಉತ್ತರ ಕೊಡುತ್ತೆ " ನಿಮ್ಮ ಅಹಂಕಾರದ ಮಾತುಗಳಿಗೆ..ಒಬ್ಬ ಕನ್ನಡಿಗನನ್ನು ಅವಮಾನಿಸಿದರೆ ಈಡೀ ಕರ್ನಾಟಕವನ್ನೇ ಅವಮಾನಿಸಿದಂತೆ" ನೆನಪಿರಲಿ’
‘ನೀವು ಇರೋದು ಕರ್ನಾಟಕದಲ್ಲ ಅಥವಾ ಅಮೆರಿಕಾದಲ್ಲ ಸ್ವಲ್ಪ ಹೇಳಿತ್ತೀರ ಬೆಳೆಯುವವರೆಗೂ ಕನ್ನಡ ಬೇಕು ಬೆಳೆದ ಮೇಲೆ ಕನ್ನಡ ಬೇಡ್ವ.. ನಿಮ್ಮಲ್ಲಿ ಒಳ್ಳೆಯ ಅಭಿನಯ ನೋಡಿ ನಿಮಗೆ ಕಾಮಿಡಿ ಕಿಲಾಡಿಗಳ ಕಾರ್ಯಕ್ರಮದಲ್ಲಿ ಓಟು ಹಾಕಿ ಗೆಲ್ಲಿಸಿದ್ದು ಕನ್ನಡಗರು ಇಂಗ್ಲಿಷ್ ನವರು ಅಲ್ಲ ಮೊದಲು ಭಾಷೆಯ ಪ್ರೇಮ ಬೆಳೆಸುಕೋಬೇಕು.. ನೀವು ಇಂಗ್ಲಿಷ್ ನಲ್ಲಿ ಬರೆದ್ದಿದೀರ ಅಂದ್ರೆ ಹಾಲಿವುಡ್ ಇಂಗ್ಲಿಷ್ ಭಾಷೆಯಲ್ಲಿ ಅವಕಾಶ ಸಿಗಲ್ಲ ಅದಕ್ಕೆ ಕನ್ನಡಿಗರು ನಿಮ್ಮನ್ನು ಬೆಳೆಸ ಬೇಕು ಇಲ್ಲ ಅಂದ್ರೆ ಲಾಟರಿ ಹೋಡಿಬೇಕಾಗುತ್ತೆ’ ಎಂಬಂಥ ಕಮೆಂಟ್ಗಳು ಸಂದಾಯವಾಗಿವೆ.