More

    ಕಂಗನಾ ಅವರನ್ನೇ ಹೋಲುತ್ತದೆ ಈ ಮುದ್ದು ಗೊಂಬೆ!

    ನಟಿ ಕಂಗನಾ ರಣಾವತ್​ ಸದ್ಯ ಬಾಲಿವುಡ್​ನಲ್ಲಿ ನಡೆಯುತ್ತಿರುವ ನೆಪೋಟಿಸಂ ಚರ್ಚೆಯಲ್ಲಿ ಸಕ್ರಿಯರಾಗಿದ್ದಾರೆ. ಮಹೇಶ್​ ಭಟ್​ ಕುಟುಂಬದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಒಂದಾದ ಮೇಲೊಂದರಂತೆ ಕಮೆಂಟ್​ ಮಾಡುತ್ತ ಪೂಜಾ ಭಟ್​ ಮತ್ತು ಆಲಿಯಾ ಭಟ್​ ಅವರನ್ನು ಹಿಗ್ಗಾ ಮುಗ್ಗಾ ತರಾಟೆ ತೆಗೆದುಕೊಳ್ಳುತ್ತಿದ್ದಾರೆ. ಇಷ್ಟೆಲ್ಲ ಗದ್ದಲ ಗಲಾಟೆಯ ನಡೆವೆಯೂ ಕಂಗನಾ ರಣಾವತ್​ ಇದೀಗ ಬೇರೆ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ.

    ಇದನ್ನೂ ಓದಿ: ಪ್ರಭಾಸ್ ಹೊಸ ಚಿತ್ರದ ಪೋಸ್ಟರ್ ಹೀಗಿದೆ ನೋಡಿ …

    ಹೌದು, ಕಂಗನಾ ರಣಾವತ್​ ಅವರನ್ನೇ ಹೋಲುವ ಗೊಂಬೆಯೊಂದು ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ಆಗಿದ್ದು, ಮಣಿಕರ್ಣಿಕಾ ಚಿತ್ರದಲ್ಲಿನ ಕಂಗನಾ ಅವತಾರದಲ್ಲಿ ಗೊಂಬೆ ತಯಾರಾಗಿದೆ. ಆ ಫೋಟೋವನ್ನು ಸ್ವತಃ ಕಂಗನಾ ಟೀಮ್​ ಟ್ವಿಟ್​ ಮಾಡಿಕೊಂಡು ಅದಕ್ಕೊಂದು ಒಳ್ಳೇ ಕ್ಯಾಪ್ಶನ್​ ಸಹ ನೀಡಿ ಪೋಸ್ಟ್ ಮಾಡಿದೆ. ‘ಮಣಿಕರ್ಣಿಕಾ ಗೊಂಬೆಗಳು ಮಕ್ಕಳಿಗೆ ತುಂಬ ಪ್ರಿಯವಾಗುತ್ತಿವೆ. ನಿಜಕ್ಕೂ ಇದು ಖುಷಿ ವಿಚಾರ. ಪುಟ್ಟ ಮಕ್ಕಳು ಸ್ವತಂತ್ರ ಹೋರಾಟಗಾರರನ್ನು ನೋಡಿಕೊಂಡು ಬೆಳೆಯಬೇಕು. ಅದು ದೇಶಭಕ್ತಿ ಮತ್ತು ಶೌರ್ಯದ ಪ್ರತೀಕ ಮತ್ತು ಸ್ಫೂರ್ತಿ ಎಂದು ಟ್ವಿಟ್​ ಮಾಡಲಾಗಿದೆ.

    ಕಂಗನಾ ಅವರನ್ನೇ ಹೋಲುತ್ತದೆ ಈ ಮುದ್ದು ಗೊಂಬೆ!

    ಇದನ್ನೂ ಓದಿ: ಚಾಮುಂಡಿ ತಾಯಿಯ ದರ್ಶನ ಪಡೆದ ದರ್ಶನ್

    ಕಂಗನಾ ತೊಟ್ಟ ಸೀರೆಯನ್ನೇ ಹೋಲುವ ಮತ್ತು ಮೈ ಮೇಲಿನ ಒಡವೆಗಳನ್ನೇ ಹೋಲುವ ಪುಟಾಣಿ ಒಡೆವೆ ಸಿದ್ಧಪಡಿಸಿ ಗೊಂಬೆ ತಯಾರಿಸಲಾಗಿದೆ. ಅಂದಹಾಗೆ, ಈ ಹಿಂದೆ ಕರೀನಾ ಕಪೂರ್​ ಮತ್ತು ಸೈಫ್​ ಅಲಿ ಖಾನ್​ ಪುತ್ರ ತೈಮೂರ್ ಫೋಟೋ ಸಹ ಸೋಶಿಯಲ್​ ಮೀಡಿಯಾದಲ್ಲಿ ಭಾರೀ ಮೆಚ್ಚುಗೆ ಗಳಿಸಿತ್ತು. ತೈಮೂರ್​ನನ್ನೇ ಹೋಲುವ ಗೊಂಬೆಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು. ಇದೀಗ ಕಂಗನಾ ಗೊಂಬೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. (ಏಜೆನ್ಸೀಸ್​)

    ಕಿವಿ ಕೇಳಿಸಲ್ಲ, ಮಾತು ಆಡಲು ಬರಲ್ಲ; ಸ್ಟಂಟ್​ ಮಾಸ್ಟರ್ ರವಿ ವರ್ಮಾಗೇನಾಯ್ತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts