

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಅದರಲ್ಲೂ ರಿಯಾ ವಿರುದ್ಧ ದೂರು ದಾಖಲಾಗುತ್ತಿದ್ದಂತೆ, ಪ್ರಕರಣದ ಚಹರೆಯೇ ಬದಲಾಗಿದೆ. ಕಲೆದ ಮೂರು ದಿನಗಳಿಂದ ಮುಂಬೈನಲ್ಲಿಮ ಮನೆಯನ್ನು ಬಿಟ್ಟು ರಾತ್ರೊರಾತ್ರಿ ಬೇರೆಡೆ ಸ್ಥಳಾಂತರಗೊಂಡಿರುವ ರಿಯಾ, ಯಾರ ಕಣ್ಣೀಗೂ ಕಾಣಿಸುತ್ತಿಲ್ಲ. ವಿಚಾರಣೆಗೂ ಹಾಜರಾಗುತ್ತಿಲ್ಲ. ರಿಯಾ ಅವರ ಈ ನಡೆ ಸದ್ಯ ಹಲವು ಅನುಮಾನಕ್ಕೆ ಕಾರಣವಾಗಿದ್ದು, ಬಿಹಾರ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಅಂದಹಾಗೆ, ಸುಶಾಂತ್ ತಂದೆ ಕೆಕೆ ಸಿಂಗ್ ಪಾಟ್ನಾದ ರಾಜೀವ್ ನಗರ್ ಪೊಲೀಸ್ ಠಾಣೆಯಲ್ಲಿ ರಿಯಾ ವಿರುದ್ಧ ದೂರು ನೀಡಿದ್ದಾರೆ. ಅದರ ಆಧಾರದ ಮೇಲೆ ಬಿಹಾರ ಪೊಲೀಸರು ಮುಂಬೈನಲ್ಲಿ ಬೀಡು ಬಿಟ್ಟಿದ್ದು, ಈಗಾಗಲೇ ಒಂದಷ್ಟು ಮಾಹಿತಿಯನ್ನು ಕಲೆಹಾಕಿದ್ದಾರೆ. ಸುಶಾಂತ್ ಮನೆ ಕೆಲಸದವರ ವಿಚಾರಣೆಯನ್ನೂ ಮಾಡಿದ್ದಾರೆ. ಆದರೆ ರಿಯಾ ಮಾತ್ರ ಯಾರ ಕೈಗೂ ಸಿಗದೆ ತಲೆಮರೆಸಿಕೊಂಡಿದ್ದಾರೆ.
ಇದೀಗ ಇದೇ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಬಿಹಾರ ಪೊಲೀಸರು, ರಿಯಾಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಈ ಪ್ರಕರಣದಲ್ಲಿ ನಿಮ್ಮ ಪಾತ್ರ ಇಲ್ಲ ಎಂದಾದರೆ, ಏಕೆ ಈ ಕಣ್ಣಾಮುಚ್ಚಾಲೆ. ನಿಮ್ಮ ಇಲಿ ಮತ್ತು ಬೆಕ್ಕಿನ ಆಟವನ್ನು ಇಲ್ಲಿಗೆ ಬಿಟ್ಟು, ವಿಚಾರಣೆಯಲ್ಲಿ ಪಾಲ್ಗೊಂಡು ನಿಮ್ಮ ಹೇಳಿಕೆ ನೀಡಿ ತೆರಳಿ’ ಎಂದಿದ್ದಾರೆ.
ಸದ್ಯ ಮುಂಬೈನಲ್ಲಿ ಇನ್ನೂ ಹಲವು ಮಂದಿಯನ್ನು ವಿಚಾರಣೆಗೆ ಆಹ್ವಾನಿಸಿರುವ ಬಿಹಾರ ಪೊಲೀಸರು. ಶೀಘ್ರದಲ್ಲಿ ರಿಯಾ ಅವರನ್ನೂ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. (ಏಜೆನ್ಸೀಸ್)