ಮಗನನ್ನು ವಶಕ್ಕೆ ಪಡೆಯಲು, ಆತನ ಲಕ್ಷ ಲಕ್ಷ ಹಣವನ್ನೇ ಮಂತ್ರವಾದಿಗೆ ಸುರಿದಿದ್ದಾಳೆ ರಿಯಾ!; ಕೆಕೆ ಸಿಂಗ್

Sushanth
Published on

ಸುಶಾಂತ್​ ಸಾವಿನ ತನಿಖೆ ಬಗೆಬಗೆ ಕೋನಗಳಲ್ಲಿ ವಿಚಾರಣೆಗೊಳಪಡುತ್ತಿದ್ದಂತೆ ಈ ಪ್ರಕರಣ ದಿನದಿಂದ ದಿನಕ್ಕೆ ಕುತೂಹಲಕ್ಕೆ ಕಾರಣವಾಗುತ್ತಿದೆ. ಬಗೆದಷ್ಟು ಆಳಕ್ಕೆ ಇಳಿಯುತ್ತಿದೆ. ಸುಶಾಂತ್​ ಸಿಂಗ್​ ತಂದೆ ಕೆಕೆ ಸಿಂಗ್​, ರಿಯಾ ವಿರುದ್ಧ ದೂರು ನೀಡುತ್ತಿದ್ದಂತೆ, ಸಾಕಷ್ಟು ಬೆಳವಣಿಗೆಗಳು ನಡೆದವು. ತನಿಖೆಯ ಮಗ್ಗಲು ಬದಲಾಯಿತು. ವಿಚಾರಣೆಗೆ ಹೊಸಬರ ಆಗಮನವೂ ಆಗುತ್ತಿದೆ. ಇದೀಗ ಈ ಸಾವಿನ ಹಿಂದೆ ಮಾಟ ಮಂತ್ರದ ಜಾಲವೂ ಇದೆ ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ!

ಈಗಾಗಲೇ ಸುಶಾಂತ್​ ಸ್ನೇಹಿತೆ ಮಾಟ ಮಂತ್ರದ ಆರೋಪ ಮಾಡಿದ್ದು, ಸುಶಾಂತ್​ ತಂದೆ ಕೆಕೆ ಸಿಂಗ್​ ಸಹ ಆ ಮಾತನ್ನೇ ಹೇಳಿದ್ದಾರೆ. ಸುಶಾಂತ್​ ಖಾತೆಯಿಂದ ಪೂಜಾ ಸಾಮಗ್ರಿ ಖರೀದಿಗಾಗಿಯೇ ಲಕ್ಷಾಂತರ ರೂ ಖರ್ಚಾಗಿದೆ. ಆ ಹಣದಿಂದಲೇ ಸುಶಾಂತ್​ ಮೇಲೆ ರಿಯಾ ಮಾಟ ಮಾಡಿಸಿದ್ದಾಳೆ ಎಂದು ಕೆಕೆ ಸಿಂಗ್​ ದೂರಿದ್ದಾರೆ. ಖರ್ಚಾದ ಹಣದ ವಿವರವನ್ನೂ ನೀಡಿದ್ದಾರೆ.

ಇತ್ತೀಚೆಗಷ್ಟೇ ಸುಶಾಂತ್​ ಸಿಂಗ್ ಬ್ಯಾಂಕ್ ಖಾತೆಯ ವಿವರ ಲಭ್ಯವಾಗುತ್ತಿದ್ದಂತೆ, ಅದರಲ್ಲಿ ಹೆಚ್ಚಿನ ಪಾಲು ಪೂಜೆ ಪುನಸ್ಕಾರಕ್ಕೆ ಬಳಸಿಕೊಂಡ ಬಗ್ಗೆ ಮಾಹಿತಿ ಲಭ್ಯವಾಗಿದೆ. ಪೂಜೆ ಮಾಡಿದ ಪಂಡಿತರಿಗೂ ಹಣ ನೀಡಿದ ಬಗ್ಗೆ ದಾಖಲೆ ಇದೆ. 45 ಸಾವಿರ, 86 ಸಾವಿರ, 60 ಸಾವಿರ ಪೂಜಾ ಸಾಮಗ್ರಿ ಮತ್ತು 11 ಸಾವಿರ ಪಂಡಿತ್​ ನೀಡಲಾಗಿದೆ. ರಿಯಾ ಇದೆಲ್ಲ ಮೊತ್ತವನ್ನು ಮಾಟ ಮಂತ್ರ ಮಾಡಿಸುವುದಕ್ಕೆ ಬಳಸಿಕೊಂಡಿದ್ದಾಳೆ ಎಂದು ದೂರಿದ್ದಾರೆ.

ಇತ್ತ ಹಣ ದೋಚಿದ ಆರೋಪದ ಮೇಲೆ ರಿಯಾ ಮೇಲೆ ಜಾರಿ ನಿರ್ದೇಶನಾಲಯ ದೂರು ದಾಖಲಿಸಿಕೊಂಡಿದೆ. ಅಷ್ಟೇ ಅಲ್ಲ ರಿಯಾ ಕುಟುಂಬದವರೂ ಇದರಲ್ಲಿ ಭಾಗಿಯಾಗಿದ ಹಿನ್ನೆಲೆಯಲ್ಲಿ ಅವರೂ ವಿಚಾರಣೆ ಎದುರಿಸಲಿದ್ದಾರೆ. ಇನ್ನು ಸುಶಾಂತ್​ ಸಿಂಗ್​ ಆಪ್ತ ಸ್ನೇಹಿತೆ ಕ್ರಿಸನ್​ ಬರೆಟ್ಟೋ ಸಹ ಬ್ಲಾಕ್​ ಮ್ಯಾಜಿಕ್​ ಬಗ್ಗೆ ಮಾತನಾಡಿದ್ದಾರೆ. ‘ಯಾವಾಗ ಸುಶಾಂತ್​ ರಿಯಾ ನಡುವಿನ ನಂಟು ಹೆಚ್ಚಾಗುತ್ತ ಹೋಯಿತೋ ಆಗಿನಿಂದ ಸ್ನೇಹಿತರು ಸೇರಿ ಮನೆಯವರನ್ನೇ ಸುಶಾಂತ್​ ದೂರವಿಟ್ಟರು. ಅದಕ್ಕೆಲ್ಲ ರಿಯಾ ಕಾರಣ. ಆಕೆಯೇ ಬ್ಲಾಕ್​ ಮ್ಯಾಜಿಕ್​ ಮೂಲಕ ಇದೆಲ್ಲವನ್ನೂ ಮಾಡಿದ್ದಾಳೆ’ ಎಂದು ಕ್ರಿಸನ್​ ಆರೋಪಿಸಿದ್ದರು. (ಏಜೆನ್ಸಿಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net