More

    ಶುರುವಾಗಿದೆ ಬಿಗ್​ಬಾಸ್​ ಶೂಟಿಂಗ್​​; ಸೆಟ್​​ನಲ್ಲಿ ಕೆಲಸ ಮಾಡುವವರು 50 ಮಂದಿ ಮಾತ್ರ !

    ಕರೊನಾ ವೈರಸ್​ ಬಂದ ನಂತರ ನಿಂತಿದ್ದ ಧಾರಾವಾಹಿ, ಟಿವಿ ಶೋಗಳ ಶೂಟಿಂಗ್​​ಗಳೆಲ್ಲ ಈಗ ನಿಧಾನಕ್ಕೆ ಪ್ರಾರಂಭವಾಗಿವೆ. ಎಲ್ಲ ಮುಂಜಾಗೃತಾ ಕ್ರಮಗಳೊಂದಿಗೆ ಕಲಾವಿದರು ಚಿತ್ರೀಕರಣಗಳಲ್ಲಿ ತೊಡಗಿಕೊಂಡಿದ್ದಾರೆ.

    ಅದರಲ್ಲೂ ಕಿರುತೆರೆಯ ಟಿಆರ್​ಪಿ ಶೋಗಳಲ್ಲಿ ಒಂದಾದ ಬಿಗ್​ಬಾಸ್​ಗಾಗಿ ವೀಕ್ಷಕರು ಕಾಯುತ್ತಿದ್ದಾರೆ. ಕನ್ನಡದಲ್ಲಿ ಅಕ್ಟೋಬರ್​ ಅಷ್ಟೊತ್ತಿಗೆ ಬಿಗ್​ ಬಾಸ್​ ಪ್ರಾರಂಭವಾಗಬಹುದು ಎಂಬ ನಿರೀಕ್ಷೆ ಇದೆ. ಆದರೆ ತೆಲುಗು ಕಿರುತೆರೆಯಲ್ಲಿ ಬಿಗ್​ಬಾಸ್​ ಸೀಸನ್​ 4 ಶೂಟಿಂಗ್​ ಅದಾಗಲೇ ಶುರುವಾಗಿದ್ದು, ನಿರೂಪಕ, ನಟ ನಾಗಾರ್ಜುನ್​ ಅವರು ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಶೂಟಿಂಗ್​ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಸುಶಾಂತ್​ ಸಿಂಗ್​ ರಜಪೂತ್​ ಬಳಸುತ್ತಿದ್ದ ಸಿಮ್​ ಕಾರ್ಡ್​ಗಳು ಅವರ ಹೆಸರಿನಲ್ಲಿ ಇರಲಿಲ್ಲ…

    ನಾಗಾರ್ಜುನ್​ ಅವರು ಶೂಟಿಂಗ್​ ಸ್ಫಾಟ್​​ನಲ್ಲಿರುವ ಎರಡು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲದೆ, ಲೈಟ್​, ಕ್ಯಾಮರಾ, ಆ್ಯಕ್ಷನ್​ ಮತ್ತೆ ಶುರುವಾಗಿದೆ. ವಾವ್​…ಎಂದು ಥ್ರಿಲ್​ ಎಂಬ ಭಾವನೆಯನ್ನು ವ್ಯಕ್ತಪಡಿಸಿ ಕ್ಯಾಪ್ಷನ್​ ಬರೆದಿದ್ದಾರೆ. ನಾಗಾರ್ಜುನ್​ ಅವರೊಂದಿಗೆ ಇಬ್ಬರು ಸಹಾಯಕರು ಪಿಪಿಇ ಕಿಟ್​ ಧರಿಸಿ ನಿಂತಿದ್ದನ್ನು ಫೋಟೋದಲ್ಲಿ ನೋಡಬಹುದು.  ಕೆಲ ದಿನಗಳ ಹಿಂದೆ ಬಿಗ್​ಬಾಸ್​ ತೆಲುಗು ನಾಲ್ಕನೇ ಸೀಸನ್​ನ ಪ್ರೋಮೊವೊಂದು ಬಿಡುಗಡೆಯಾಗಿತ್ತು.

    ಈ ಬಾರಿಯ ತೆಲುಗು ಬಿಗ್​ ಬಾಸ್​ ಮನೆಯನ್ನು ಅನ್ನಪೂರ್ಣಾ ಸ್ಟುಡಿಯೋದಲ್ಲಿ ನಿರ್ಮಿಸಲಾಗಿದೆ. ಈ ಸ್ಟುಡಿಯೋ ನಾಗಾರ್ಜುನ್ ಹಾಗೂ ಅವರ ಕುಟುಂಬಕ್ಕೆ ಸೇರಿದ್ದು.

    ಈ ಬಾರಿಯ ಬಿಗ್​ಬಾಸ್ ಮನೆ ಪ್ರವೇಶ ಮಾಡಲಿರುವ ಸ್ಪರ್ಧಿಗಳು ಅದಕ್ಕೂ ಮೊದಲು 14 ದಿನಗಳ ಕಾಲ ಐಸೋಲೇಶನ್​ನಲ್ಲಿ ಇರಲಿದ್ದಾರೆ. ಹಾಗೇ ಸೆಟ್​​ನಲ್ಲೂ ಕೂಡ 50 ಮಂದಿಯಷ್ಟೇ ಕೆಲಸ ಮಾಡಲಿದ್ದಾರೆ. (ಏಜೆನ್ಸೀಸ್​)

    ಶಸ್ತ್ರಸಜ್ಜಿತರಾಗಿ ಬಂದವರು ಅಪಹರಿಸಿ, ಅತ್ಯಾಚಾರವೆಸಗಿ, ಹಣ, ಮೊಬೈಲ್ ಕದ್ದುಹೋದರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts