ಬೆಂಗಳೂರು: 'ಕೆಜಿಎಫ್ 2' ರಿಲೀಸ್ಗೆ ಇನ್ನೇನು ಮೂರೇ ದಿನ ಉಳಿದಿದೆ. ಇತ್ತ ಐಪಿಎಲ್ 2022 ಭರಾಟೆಯಿಂದ ಸಾಗುತ್ತಿದೆ. ಈಗಾಗಲೇ, ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಅಬ್ಬರವೂ ಜೋರಾಗಿದೆ. ಇನ್ನು, 'ಕೆಜಿಎಫ್ 2' ಮತ್ತು ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಈ ಎರಡಕ್ಕೂ ಕರುನಾಡಲ್ಲಿ ಅಭಿಮಾನಿಗಳ ಕ್ರೇಜ್ ಈಗಾಗಲೇ ಬಹಳಷ್ಟು ಇದೆ. ಈ ಸಂದರ್ಭದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು 'ಕೆಜಿಎಫ್ 2' ಸಿನಿಮಾ ನಿರ್ಮಾಪಕರಾಗಿರುವ ಹೊಂಬಾಳೆ ಫಿಲ್ಮ್ಸ್ ಒಂದು ಭರ್ಜರಿ ಘೋಷಣೆ ಮಾಡಿವೆ. ಏನದು ಅಂತೀರಾ...? ಅಂದಹಾಗೆ, ಇದು ಕ್ರೀಡೆ ಮತ್ತು ಚಲನಚಿತ್ರ ಸೇರಿದ ಮನರಂಜನೆಯ ಪರಿಪೂರ್ಣ ಸಮ್ಮಿಲನವನ್ನು ಉಣಬಡಿಸಲಿರುವ ಬಗೆಗಿನ ಸುದ್ದಿ. ಹೌದು, ಹೊಂಬಾಳೆ ಫಿಲ್ಮ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರಸ್ಪರ ಕೈಜೋಡಿಸುವ ಮೂಲಕ ಕ್ರೀಡೆ ಮತ್ತು ಚಲನಚಿತ್ರದ ಮನರಂಜನೆಯನ್ನು ಒಟ್ಟಿಗೆ ಪ್ರೇಕ್ಷಕರಿಗೆ ನೀಡಲಿವೆ. ಈ ಸಹಯೋಗವು ಚಲನಚಿತ್ರ ಹಾಗೂ ಕ್ರೀಡೆಯ ಸಂಗಮವನ್ನುಂಟು ಮಾಡಲಿದ್ದು, ಎಲ್ಲರಿಗೂ ಭರಪೂರ ಮನೋರಂಜನೆ ನೀಡಲಿದೆ ಎನ್ನಬಹುದು.