ಬಾಲಿವುಡ್​ ಬ್ಯೂಟಿ ಮಲೈಕಾರ ಖಾಸಗಿ ಕ್ಷಣದ ವಿಡಿಯೋ ಸೆರೆ! ನಿಮಗೆ ನಾಚಿಕೆ ಆಗಲ್ವಾ ಅಂದ್ರು ನೆಟ್ಟಿಗರು

Malaika Arora
Published on

ಮುಂಬೈ: ಬಾಲಿವುಡ್​ನಲ್ಲಿ ಸೆಲೆಬ್ರಿಟಿಗಳನ್ನು ಕಾಡುವ ಪ್ರಮುಖರಲ್ಲಿ ಒಬ್ಬರೆಂದರೆ ಅದು ಪಾಪರಾಜಿಗಳು. ಸೆಲೆಬ್ರಿಟಿಗಳಿಗೂ ವೈಯಕ್ತಿಕ ಜೀವನ ಇದೆ ಎಂಬುದನ್ನು ಮರೆತು ಕೆಲವೊಮ್ಮೆ ತುಂಬಾ ಅತಿರೇಕದ ವರ್ತನೆ ತೋರುತ್ತಾರೆ. ಎಲ್ಲೆಂದರಲ್ಲಿ ಫೋಟೋಗಾಗಿ ಮುಗಿ ಬೀಳುತ್ತಾರೆ. ಇನ್ನು ಕೆಲವೊಮ್ಮೆ ಸೆಲೆಬ್ರಿಟಿಗಳ ಅನುಮತಿ ಇಲ್ಲದೇ ಫೋಟೋ ಕ್ಲಿಕ್ಕಿಸುತ್ತಾರೆ. ಇಂತಹ ಘಟನೆಗಳು ಅನೇಕ ಸೆಲೆಬ್ರಿಗಳನ್ನು ಮುಜುಗರಕ್ಕೆ ದೂಡುತ್ತದೆ.

ಇದೀಗ ಪಾಪರಾಜಿಗಳ ಅಂಥದ್ದೇ ವರ್ತನೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗೆ ಗುರಿಯಾಗಿದೆ. ಮಲೈಕಾ ಅರೋರಾ ಅನುಮತಿ ಇಲ್ಲದೆ ಆಕೆಯ ಫೋಟೋ ಮತ್ತು ವಿಡಿಯೋಯನ್ನು ಪಾಪರಾಜಿಗಳು ರಹಸ್ಯವಾಗಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದೀಗ ವಿಡಿಯೋ ವೈರಲ್​ ಆಗಿದ್ದು, ಪಾಪರಾಜಿಗಳನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

ವೈರಲ್​ ಆಗಿರುವ ವಿಡಿಯೋದಲ್ಲಿ ಬಾಲಿವುಡ್​ ಬ್ಯೂಟಿ ಮಲೈಕಾ ಅವರು ತಮ್ಮ ಫ್ರೆಂಡ್ಸ್​ ಅನ್ನು ಮುಂಬೈ ನಗರದ ರೆಸ್ಟೋರೆಂಟ್​ ಒಂದರಲ್ಲಿ ಭೇಟಿಯಾಗಿರುವುದನ್ನು ಕಾಣಬಹುದು. ಈ ವೇಳೆ ಮಲೈಕಾ ಬಿಳಿ ಬಣ್ಣದ ಬ್ಯಾಕ್​ಲೆಸ್​ ಶಾರ್ಟ್​ ಜಂಪ್​ಸೂಟ್​ ಧರಿಸಿ, ತಮ್ಮ ಕೂದಲನ್ನು ರಿಬ್ಬನ್​ನಿಂದ ಕಟ್ಟಿದ್ದಾರೆ. ಅಲ್ಲಿಂದ ಹೊರಡುತ್ತಿದ್ದಂತೆ ಮಲೈಕಾ ತನ್ನ ಉಡುಗೆಯನ್ನು ಸರಿ ಮಾಡಿಕೊಳ್ಳುವಾಗ, ಪಾಪರಾಜಿಗಳು ಕ್ಯಾಮೆರಾ ಜೂಮ್​ ಮಾಡಿದ್ದಾರೆ. ಕಿಟಕಿ ಮೂಲಕ ಮಲೈಕಾ ಸೌಂದರ್ಯವನ್ನು ಸೆರೆಹಿಡಿದಿದ್ದಾರೆ.

ಪಾಪರಾಜಿಗಳು ವಿಡಿಯೋ ರೆಕಾರ್ಡ್​ ಮತ್ತು ಫೋಟೋ ತೆಗೆಯುತ್ತಿರುವುದು ಗೊತ್ತಾದ ಕೂಡಲೇ ಕೊಂಚವೂ ಅಸಮಾಧಾನಗೊಳ್ಳದ ಮಲೈಕಾ ಶಾಂತಚಿತ್ತದಿಂದಲೇ ಪಾಪರಾಜಿಗಳತ್ತ ಕೈ ಬೀಸುತ್ತಾರೆ ಮತ್ತು ಅಲ್ಲಿಂದ ಹೊರಡುತ್ತಾರೆ. ಒಳಗಿದ್ದರೂ ಕ್ಯಾಮೆರಾ ಜೂಮ್​ ಮಾಡಿ ಸೆರೆಹಿಡಿದ ಪಾಪರಾಜಿಗಳ ವರ್ತನೆಯನ್ನು ಮಲೈಕಾ ಅವರು ಖಂಡಿಸದಿದ್ದರೂ ವಿಡಿಯೋ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕಲಾವಿದರಿಗೂ ಖಾಸಗಿ ಬದುಕಿದೆ. ಅದನ್ನು ಗೌರವಿಸಿ ಎಂದು ಪಾಪರಾಜಿಗಳನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮಗೆಲ್ಲ ಏನಾಗಿದೆ? ಸ್ವಲ್ಪವೂ ನಾಚಿಕೆ ಇಲ್ಲವಾ ಎಂದು ಒಬ್ಬ ಬಳಕೆದಾರ ಬರೆದರೆ, ಇನ್ನೊಬ್ಬರು, ಅನುಮತಿ ಇಲ್ಲದೆ ಫೋಟೋ ಅಥವಾ ವಿಡಿಯೋಗಳನ್ನು ಸೆರೆಹಿಡಿಯುವುದು ತಪ್ಪು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ.

ಇನ್ನೂ ಮಲೈಕಾ ಅವರು ಪ್ರಸ್ತುತ ತನ್ನ ಮಗ ಅರ್ಹಾನ್ ಮತ್ತು ಸಹೋದರಿ ಅಮೃತಾ ಅರೋರಾ, ಕರೀನಾ ಕಪೂರ್ ಖಾನ್ ಮತ್ತು ಕರಿಷ್ಮಾ ಕಪೂರ್ ಗ್ಯಾಂಗ್‌ನೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net