11 ವರ್ಷಗಳಿಂದ ಭಾರತದಲ್ಲಿರುವ ಯೂಕ್ರೇನ್ ನಟಿಯ ಫೋಟೋಗಳು ವೈರಲ್! ಕಾರಣ ಗೊತ್ತಾ?

Published on
ರಷ್ಯಾ ಹಾಗೂ ಯೂಕ್ರೇನ್ ದೇಶಗಳ ನಡುವಿನ ಬಿಕ್ಕಟ್ಟಿಗೆ ಅಂತ್ಯವಿಲ್ಲ ಎಂಬಂತಿದೆ. ಈ ಎರಡು ದೇಶಗಳ ನಡುವಿನ ಯುದ್ಧ ಯಾವಾಗ ಕೊನೆಯಾಗುತ್ತೆ ಎಂದು ಇಡೀ ವಿಶ್ವದ ಜನತೆ ಕಾದು ಕುಳಿತ್ತಿದ್ದಾರೆ. ಈ ನಡುವೆ ಯೂಕ್ರೇನ್ ಮೂಲದ ನಟಿಯೋರ್ವರು ಭಾರತದಲ್ಲಿ 11 ವರ್ಷಗಳಿಂದ ನೆಲೆಯೂರಿದ್ದು ಅವರ ಫೋಟೋಗಳು ಈಗಿನ ಪರಿಸ್ಥಿತಿಯಲ್ಲಿ ವೈರಲ್ ಆಗ ತೊಡಗಿವೆ.
ಹೌದು, ಭಾರತದಲ್ಲಿ ವೆಬ್ ಸರಣಿಯಾದ 'ಗಂಧಿ ಬಾತ್' ಮತ್ತು 'ಅತಿಥಿ ತುಮ್ ಕಬ್ ಜಾವೋಗೆ?' ಮತ್ತು 'ಅಂಜುನಾ ಬೀಚ್' ಸಿನಿಮಾಗಳಲ್ಲಿ ನಟಿಸಿ ಬಹಳಷ್ಟು ಖ್ಯಾತಿ ಪಡೆದಿರುವ ನಟಿ ನಟಾಲಿಯಾ ಕೊಜೆನೋವಾಗೆ ನಮ್ಮ ದೇಶದಲ್ಲಿ ಅಭಿಮನಿಗಳು ತುಂಬಾನೆ ಇದ್ದಾರೆ. ಹಿಂದಿ ಭಾಷೆಯಲ್ಲಿ ಸಖತ್ ಸುದ್ದಿಯಾಗಿರುವ ಬೋಲ್ಡ್ ವೆಬ್ ಸೀರೀಸ್ ‘ಗಂಧಿ ಬಾತ್’ ಮೂಲಕ ಈ ನಟಿ ಮೊದಲ ಬಾರಿಗೆ ಭಾರತದಲ್ಲಿ ಬಣ್ಣಹಚ್ಚಿದ್ದಾರೆ. 
ಇದೀಗ, ನಟಿಯ ಕೆಲವು, ಅದರಲ್ಲಿಯೂ ಬಿಕಿನಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ. ''ಯೂಕ್ರೇನ್ ಬಿಕ್ಕಟ್ಟಿನ ಬಗ್ಗೆ ಪ್ರತಿಕ್ರಯಿಸಿದ್ದ ನಟಿ, ''ಅಲ್ಲೇನಾದರೂ ನನ್ನ ಕುಟುಂಬಕ್ಕೆ ಹೆಚ್ಚುಕಡಿಮೆಯಾದರೆ ನಾನು ಅನಾಥೆಯಾಗುತ್ತೇನೆ'', ಎಂದು ಅಳಲು ತೋಡಿಕೊಂಡ ನಂತರ ನಟಿಯ ಫೋಟೋಗಳು ವೈರಲ್ ಆಗುತ್ತಿವೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net