Trademark Song: 3 ಕನ್ನಡದ ನಾಯಕಿಯರು, ಉತ್ತಮ ಡ್ಯಾನ್ಸ್ ಸ್ಟೆಪ್ಸ್, ಗಾಯನ! ಹಾಡಿನ ವೀಕ್ಷಣೆಗಳು ಎಷ್ಟು ಗೊತ್ತಾ?

Published on
ಬೆಂಗಳೂರು: ನಟ ಪುನೀತ್ ಅವರ ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್' ರಿಲೀಸ್‌ಗೆ ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ. ಹೌದು, ಅಪ್ಪು ಅಗಲಿದ ನೋವಿನಲ್ಲಿರುವ ಅಭಿಮಾನಿಗಳಿಗೆ 'ಜೇಮ್ಸ್' ಚಿತ್ರ ಅಂತ್ಯವಿಲ್ಲದ ಖುಷಿಯಾಗಲಿದೆ. ಇನ್ನು, ಮಹಾಶಿವರಾತ್ರಿಯಂದು 'ಜೇಮ್ಸ್' ಚಿತ್ರತಂಡ 'ಟ್ರೇಡ್‌ಮಾರ್ಕ್' ಅನ್ನೋ ಹಾಡನ್ನು 11:11 ಗಂಟೆಗೆ ಬಿಡುಗಡೆ ಮಾಡಿದೆ. ಚೇತನ್ ಕುಮಾರ್ ನಿರ್ದೇಶಿಸಿದ ಈ ಸಿನಿಮಾ ಅಪ್ಪು ಅವರ ಹುಟ್ಟುಹಬ್ಬದಂದು ರಿಲೀಸ್ ಆಗಲಿದೆ.
ಹಾಗಾಗಿ, ಅಪ್ಪು ಅಭಿಮಾನಿಗಳು ಮಾರ್ಚ್ 17ಕ್ಕೆ ಕಾಯುತ್ತಿದ್ದರೆ, ಇತ್ತ ಚಿತ್ರತಂಡ ಅಭಿಮಾನಿಗಳಿಗೆ ಒಂದೊಂದೇ ಸರ್ಪ್ರೈಸ್ ನೀಡುತ್ತಿದೆ. ಈ ಹಿಂದೆ ಪೋಸ್ಟರ್ ಬಳಿಕ ಟೀಸರ್ ಬಿಡುಗಡೆ ಮಾಡಿ ಅಭಿಮಾನಿಗಳ ಸಂಭ್ರಮಕ್ಕೆ ಚಿತ್ರತಂಡ ಕಾರಣವಾಯಿತು. ಇನ್ನು, ಇಂದು ಶಿವರಾತ್ರಿ ಹಬ್ಬಕ್ಕೆ 'ಟ್ರೇಡ್‌ಮಾರ್ಕ್' ಹಾಡನ್ನು ಬಿಡುಗಡೆ ಮಾಡಿದ್ದು, ಯೂಟ್ಯೂಬ್​ನಲ್ಲಿ ಈ ಸಾಂಗ್ ಸಿಕ್ಕಾಪಟ್ಟೆ ಸೌಂಡು ಮಾಡುತ್ತಿದೆ. ಅಪ್ಪು ಅವರ ಈ ಹಾಡನ್ನು ಅಭಿಮಾನಿಗಳು ಬೆಂಗಳೂರಿನ ಹಲವು ಏರಿಯಾಗಳಲ್ಲಿ LED ಪರದೆಗಳ ಮೇಲೆ ಕಂಡು ಕುಣಿದು ಕುಪ್ಪಳಿಸಿದ್ದಾರೆ.
ಹೌದು, ಚರಣ್ ರಾಜ್ ಅವರು ಸಂಗೀತ ನಿರ್ದೇಶನ ಮಾಡಿರುವ ಈ ಹಾಡಿನಲ್ಲಿ ಡಿಂಪಲ್ ಕ್ಷೀನ್ ನಟಿ ರಚಿತಾ ರಾಮ್, ಆಶಿಕಾ ರಂಗನಾಥ್, ಶ್ರೀಲೀಲಾ, ಚಂದನ್ ಶೆಟ್ಟಿ ಜತೆ ಸೇರಿ ಚರಣ್ ರಾಜ್ ಅಪ್ಪು ಅವರ ಗುಣಗಾನ ಮಾಡಿದ್ದಾರೆ. 'ಜೇಮ್ಸ್' ಸಿನಿಮಾದ ಮೊದಲ ಲಿರಿಕಲ್ ಸಾಂಗ್ ಇದಾಗಿದೆ. ಪಿಆರ್‌ಕೆ ಆಡಿಯೋದ ಯೂಟ್ಯೂಬ್ ಚಾನೆಲ್​ನಲ್ಲಿ ಈ ಹಾಡು ರಿಲೀಸ್ ಆಗಿದೆ. ಈ ಹಾಡಿನ ಸಾಹಿತ್ಯವನ್ನು ಚೇತನ್ ಕುಮಾರ್ ಅವರು ರಚಿಸಿದ್ದಾರೆ.
ಅಂದಹಾಗೆ, ಈ ಹಾಡು ಅಪ್ಪುಗಾಗಿಯೇ ರಚಿಸಿದ ಹಾಡು ಎನ್ನುವುದನ್ನು ಇಲ್ಲಿ ಎಲ್ಲರೂ ಗಮನಿಸಬೇಕು. 'ಜೇಮ್ಸ್' ಸಿನಿಮಾದ ಈ ಸಾಂಗಿನಲ್ಲಿ ಮೂರು ಕನ್ನಡದ ನಾಯಕಿಯರು ಸ್ಪೆಷಲ್ ಎಂಟ್ರಿಕೊಟ್ಟಿದ್ದು, ಹೆಜ್ಜೆ ಹಾಕಿದ್ದಾರೆ. ಡಿಂಪಲ್ ಕ್ವೀನ್ ರಚಿತಾ ರಾಮ್, ಶ್ರೀಲೀಲಾ ಹಾಗೂ ಆಶಿಕಾ ರಂಗನಾಥ್ ಈ ಹಾಡಿನಲ್ಲಿ ಅಪ್ಪುಗಾಗಿ ಹೆಜ್ಜೆ ಹಾಕಿ ಸಿಕ್ಕಾಪಟ್ಟೆ ಮಿಂಚಿದ್ದಾರೆ.
ಇನ್ನು ಈ ಹಾಡಿನಲ್ಲಿ ಚಂದನ್ ಶೆಟ್ಟಿ, ಚರಣ್ ರಾಜ್ ಕೂಡ ಕಾಣಿಸಿಕೊಂಡಿದ್ದಾರೆ. ಈ ಹಾಡಿಗೆ ಮತ್ತೊಂದು ಹೈಲೈಟ್ ಅಂದರೆ ನಟ ಯುವರಾಜ್‌ ಕುಮಾರ್ ಅವರು 'ಟ್ರೇಡ್‌ಮಾರ್ಕ್‌'ಗೆ ಧ್ವನಿ ನೀಡಿದ್ದಾರೆ. ಸದ್ಯ, ಅಪ್ಪು ಅಭಿಮಾನಿಗಳಿಗೆ ಈ ಹಾಡು ಸಖತ್ ಖುಷಿ ಕೊಟ್ಟಿದೆ. ಬಿಡುಗಡೆಯಾದ ನಂತರ ಕೇವಲ ಮೂರು ಗಂಟೆಗಳಲ್ಲಿ ಈ ಹಾಡು ಯೂಟ್ಯೂಬ್​ನಲ್ಲಿ ಬರೋಬ್ಬರಿ 5 ಲಕ್ಷ ವೀಕ್ಷಣೆಗಳು, 14,000 ಕಾಮೆಂಟ್​ಗಳು, 160 ಲಕ್ಷ ಲೈಕ್ಸ್ ಗಿಟ್ಟಿಸಿಕೊಂಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net