ನಟ ಪುನೀತ್ ರಾಜ್ಕುಮಾರ್ ಅವರನ್ನು ಎಲ್ಲರೂ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಅವರು ಹೀರೋ ಆಗಿ ನಟಿಸಿದ ಕೊನೆಯ ಚಿತ್ರ ‘ಜೇಮ್ಸ್’ ಬಗ್ಗೆ ಎಲ್ಲರಿಗೂ ಸಖತ್ ನಿರೀಕ್ಷೆ ಇದೆ. ಮಾ.17 ರಂದು ಪುನೀತ್ ಜನ್ಮದಿನ. ಆ ದಿನದಂದೇ ಅವರ ಕೊನೆಯ ಚಿತ್ರವಾದ ‘ಜೇಮ್ಸ್’ ರಿಲೀಸ್ ಆಗಲಿದೆ. ಈ ಸಿನಿಮಾವನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲು ಪುನೀತ್ ರಾಜ್ಕುಮಾರ್ ಅಭಿಮಾನಿಗಳು ರಾಜ್ಯಾದ್ಯಂತ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇದೀಗ, ಅಭಿಮಾನಿಗಳಲ್ಲಿ ಯಾವ ಪರಿಯ ಕ್ರೇಜ್ ಈ ಸಿನಿಮಾ ಸೃಷ್ಟಿ ಮಾಡಿದೆ ಎಂಬುದಕ್ಕೆ ಸಾಕ್ಷಿಯಾಗಿ ರಾಜ್ಯದಾದ್ಯಂತ ಹಲವು ಘಟನೆಗಳು ನಡೆಯುತ್ತಿವೆ. ಆದರೆ, ಸದ್ಯ ‘ಜೇಮ್ಸ್’ ಶೀರ್ಷಿಕೆಯ ಟ್ಯಾಟೂ ಫೋಟೋಗಳು ಎಲ್ಲರ ಗಮನ ಸೆಳೆಯುತ್ತಿದ್ದು, ಅವು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ ತೊಡಗಿವೆ.