ಇನ್​ಸ್ಟಾಗ್ರಾಂ ಆಯ್ತು, ಯೂಟ್ಯೂಬ್​ನಲ್ಲೂ ರಶ್ಮಿಕಾ ಹವಾ! ತಮ್ಮ ಚಾನೆಲ್​ನಲ್ಲಿ ಮೊದಲ ವಿಡಿಯೋ ಶೇರ್...

Published on
ನಟಿ ರಶ್ಮಿಕಾ ಮಂದಣ್ಣ ಅವರ ಜನಪ್ರಿಯತೆ ಈ ಮೊದಲೇ ಗಗನಕ್ಕೇರಿರಬಹುದು, ಆದರೆ ಅವರ ಜನಪ್ರಿಯತೆ ಚುರು ಕೂಡಾ ಕಡಿಮೆಯಾಗದೆ, ದಿನದಿಂದ ದಿನಕ್ಕೆ ಇನ್ನೂ ಹೆಚ್ಚು ಹೆಚ್ಚಾಗುತ್ತಲೇ ಇದೆ. ಈಗಾಗಲೇ, ತಮ್ಮ ಸಾಮಾಜಿಕ ಮಾಧ್ಯಮದ ಖಾತೆಗಳ ಮೂಲಕ ನಟಿ ನಿರಂತರವಾಗಿ ಅವರ ಅಭಿಮಾನಿಗಳ ಜತೆಗೆ ಸಂಪರ್ಕದಲ್ಲಿದ್ದಾರೆ. ಇದೀಗ, ನಟಿ ರಶ್ಮಿಕಾ ಮಂದಣ್ಣ ತನ್ನ ಅಭಿಮಾನಿಗಳೊಂದಿಗಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿದ್ದಾರೆ. ತಮ್ಮ ಚಾನೆಲ್​ನಲ್ಲಿ ತನ್ನ ಮೊದಲ ವೀಡಿಯೊವನ್ನು 'ನನ್ನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಿ, ಬಹುಶಃ?' ಎಂಬ ಕ್ಯಾಪ್ಯನ್ ಮೂಲಕ ಹಂಚಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಅವರು ಕೆಲವು ವೈಯಕ್ತಿಕ ಪ್ರಶ್ನೆಗಳಿಗೆ ಉತ್ತರಿಸುವುದನ್ನು ಕಾಣಬಹುದು ಮತ್ತು ಭವಿಷ್ಯದಲ್ಲಿ ತಮ್ಮ ಚಾನೆಲ್ ಏನನ್ನು ಅಭಿಮಾನಿಗಳಿಗೆ ನೀಡಲಿದೆ ಎಂಬುದನ್ನು ಕುರಿತು ವಿವರಿಸಿದ್ದಾರೆ. ಇನ್ನು, ಈ ವಿಡಿಯೋ ಕಂಡ ನಟಿಯ ಅಭಿಮಾನಿಗಳು ಸಂತೋಷಪಟ್ಟರು. ಇನ್​ಸ್ಟಾಗ್ರಾಂನಲ್ಲಿ ಬರೋಬ್ಬರಿ 30 ಮಿಲಿಯನ್ ಅನುಯಾಯಿಗಳನ್ನು ಪಡೆದ ಮೊದಲ ದಕ್ಷಿಣ ಭಾರತದ ನಟಿಯಾಗಿರುವ ರಶ್ಮಿಕಾ ಅವರು ಇದೀಗ ಯೂಟ್ಯೂಬ್​ನಲ್ಲೂ ತಮ್ಮದೇ ಹವಾ ಕ್ರೀಯೆಟ್ ಮಾಡುವುದು ಪಕ್ಕಾ ಎಂದು ಹೇಳಬಹುದು. ಯಾಕೆಂದರೆ, ಅವರು ಶೇರ್ ಮಾಡಿಕೊಂಡಿರುವ ಮೊದಲ ವಿಡಿಯೋಗೆ ಕೇವಲ 6 ಗಂಟೆಗಳಲ್ಲಿ 75,000 ವೀಕ್ಷಣೆಗಳು ಬಂದಿದ್ದು, 25,000 ಸಬ್​ಸ್ಕ್ರೈಬರ್ಸ್​ ಪಡೆದಿದ್ದಾರೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net