ಕರುನಾಡೇ ಪುನೀತ... ಅಪ್ಪು ಬಗೆಗಿನ ಹಾಡಿನ ಸಾಹಿತ್ಯ ಕೇಳಿ ಅಭಿಮಾನಿಗಳು ಭಾವುಕ

Published on
ಅಪ್ಪು ನಿಧನರಾಗಿ ನಾಲ್ಕು ತಿಂಗಳಾಯ್ತು. ಇದನ್ನು ನೆನೆದು ಪುನೀತ್ ರಾಜ್​ಕುಮಾರ್ ಕುಟುಂಬ, ಸ್ನೇಹಿತರು, ಆಪ್ತರು, ಸಿನಿತಾರೆಯರು, ಅಭಿಮಾನಿಗಳು, ಕರುನಾಡ ಜನತೆ ಇಂದಿಗೂ ಕಣ್ಣೀರಿಡುತ್ತಿದ್ದಾರೆ ಎಂಬುದು ನಿಜವಾದ ಮಾತು. ಈ ನಾಲ್ಕು ತಿಂಗಳಲ್ಲಿ ಅಭಿಮಾನಿಗಳು ಅಪ್ಪು ಅವರಿಗೆ ಯಾವ ಯಾವ ರೀತಿಯಲ್ಲಿ ಗೌರವ ಸಲ್ಲಿಸಬಹುದೋ, ಆ ಎಲ್ಲಾ ರೀತಿಗಳಲ್ಲಿ ಗೌರವ ಸಲ್ಲಿಸುತ್ತಲೇ ಬಂದಿದ್ದಾರೆ. ಇದೀಗ, ಹಾಲೇಶ್ ಮಾಳಿಗೇರ್ ಎಂಬುವರು ಅಪ್ಪು ಅವರ ಬಗ್ಗೆ ''ಕರುನಾಡೇ ಪುನೀತ'' ಎಂಬ ಹಾಡನ್ನು ಬರೆದಿದ್ದಾರೆ.
''ಕರುನಾಡೇ ಪುನೀತ'' ಹಾಡು ಇಂದು ಯೂಟ್ಯೂಬ್​ನಲ್ಲಿ ರಿಲೀಸ್ ಆಗಿದೆ. ಈ ಹಾಡಿಗೆ ಸಾಹಿತ್ಯ, ನಿರ್ದೇಶನ ಹಾಗೂ ನಿರ್ಮಾಪಣೆ ಹಾಲೇಶ್ ಮಾಳಿಗೇರ್ ಅವರು ಮಾಡಿದ್ದು, ಎ.ಟಿ.ರವೀಶ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಇನ್ನು, ನದೀರಾ ಬಾನು ಮತ್ತು ಶರಣ್ ಅಯ್ಯಪ್ಪ ಅವರು ಹಾಡಿದ್ದಾರೆ. ಸದ್ಯ, ಈ ಹಾಡಿನ ಸಂಗೀತಿ ಹಾಗು ಸಾಹಿತ್ಯ ಕೇಳಿ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ. ಇನ್ನು, ಹಾಡು ಕೇಳಿದ ಬಹುತೇಕ ಎಲ್ಲರೂ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹಾಡು ಸಖತ್ ವೈರಲ್ ಆಗುತ್ತಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net