ನಟ ಪಾಶಾ ಲೀ ಕೇವಲ ನಟನಾಗಿ ಅಲ್ಲದೇ ಬೇರೆ ಬೇರೆ ಪ್ರತಿಭೆಗಳನ್ನು ಹೊಂದಿದ್ದರು. ಅವರು ಡಬ್ಬಿಂಗ್ ಆರ್ಟಿಸ್ಟ್ ಆಗಿ ಕೂಡಾ ಕೆಲಸ ಮಾಡಿದ್ದರು. ಹೌದು, ಹಾಲಿವುಡ್ ಸಿನಿಮಾಗಳು ಯೂಕ್ರೇನ್ ಭಾಷೆಗೆ ಡಬ್ ಆದಾಗ, ಅಂತಹ ಅನೇಕ ಸಿನಿಮಾಗಳಿಗೆ ಪಾಶಾ ಲೀ ಅವರು ಡಬ್ ಮಾಡಿದ್ದಾರೆ. ಇನ್ನು, ಯೂಕ್ರೇನಿನ DOM ಚಾನೆಲ್‌ನಲ್ಲಿ ನಿರೂಪಕರಾಗಿಯೂ ಪಾಶಾ ಲೀ ಕೆಲಸ ಮಾಡಿದ್ದಾರೆ. ತಮ್ಮ ದೇಶಕ್ಕಾಗಿ ಹೋರಾಡಲು ಸೇನೆ ಸೇರಿದ ಹಲವು ಯೂಕ್ರೇನ್ ನಾಗರಿಕರು, ಸಿನಿತಾರೆಯರು, ಮಾಡೆಲ್ಗಳು ಕೂಡಾ ಸಾವನ್ನಪ್ಪುತ್ತಿರುವುದು ಇಡೀ ಪ್ರಪಂಚದಲ್ಲಿ ಜನರಿಗೆ ಬೇಸರವಾಗುತ್ತಿದೆ. ಸದ್ಯ, ನಟ ಪಾಶಾ ಲೀ ಅವರ ಕೊನೆಯ ಸಂದೇಶ, ಫೋಟೋಗಳು ವೈರಲ್ ಆಗುತ್ತಿದ್ದು, ನೆಟ್ಟಿಗರು ಬೇಜಾರಾಗಿದ್ದಾರೆ.