ಅಲ್ಲು ಅವರ ಪತ್ನಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪತಿಯೊಂದಿಗೆ ಕ್ಯಾಂಡಲ್‌ಲೈಟ್ ಡಿನ್ನರ್ ಮಾಡುತ್ತಿರುವ ಒಂದು ಫೋಟೋವನ್ನು ಹಂಚಿಕೊಂಡಿದ್ದು, ಅದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಸ್ನೇಹಾ ಹಂಚಿಕೊಂಡಿರುವ ಚಿತ್ರದಲ್ಲಿ ಅಲ್ಲು ಅರ್ಜುನ್ ಊಟ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಇದರ ಜತೆಗೆ, ಅಲ್ಲು ಪತ್ನಿ ಸ್ನೇಹಾ ತಮ್ಮ ಮಕ್ಕಳೊಂದಿಗಿನ ಒಂದೆರಡು ಸೆಲ್ಫಿಗಳನ್ನು ಶೇರ್ ಮಾಡಿದ್ದಾರೆ.