ಮತ್ತೊಂದೆಡೆ, ರಶ್ಮಿಕಾ ಮಂದಣ್ಣ, ಸಾಯಿ ಪಲ್ಲವಿ, ಕೃತಿ ಶೆಟ್ಟಿ ಅವರಿಂದ ಪೂಜಾಗೆ ಎದುರಾಗುತ್ತಿರುವ ಪೈಪೋಟಿ ಕೂಡಾ ಪೂಜಾ ಸಂಭಾವನೆಯ ಇಳಿಕೆಗೆ ಕಾರಣವಂತೆ. ಹಾಗಾಗಿಯೇ, ಪೂಜಾ ಬಾಲಿವುಡ್‌ನ 'ಸರ್ಕಸ್' ಮತ್ತು ತೆಲುಗಿನಲ್ಲಿ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಜೊತೆಗೆ ಹೊಸದೊಂದು ಟೈಟಲ್ ಇಲ್ಲದ ಸಿನಿಮಾ ಒಪ್ಪಿಕೊಂಡಿದ್ದಾರಂತೆ. ಇನ್ನು, ಟಾಲಿವುಡ್ನ ಪ್ರಿನ್ಸ್ ಮಹೇಶ್ ಬಾಬು ಅವರ #SSMB28 ಚಿತ್ರಕ್ಕೂ ಪೂಜಾ ಅವರೇ ನಾಯಕಿ. ಈಗ ಬಿಡುಗಡೆಯಾಗಲಿರುವ ಸಿನಿಮಾಗಳು ಬಿಟ್ಟರೆ, ಮುಂಬರುವ ಹಾಗೂ ಹೊಸದಾಗಿ ಸಹಿ ಹಾಕಿರುವ ಎಲ್ಲಾ ಸಿನಿಮಾಗಳಿಗೆ ನಟಿ ಪೂಜಾ ಹೆಗ್ಡೆ ತಮ್ಮ ಸಂಭಾವನೆಯನ್ನು 3 ಕೋಟಿ ಗಿಂತ ಕಡಿಮೆಗೆ ಇಳಿಸಿದ್ದಾರೆ ಎಂದು ವರದಿಗಳು ಹೇಳುತ್ತಿವೆ.