ನಾಗಚೈತನ್ಯ ಕುಟುಂಬಕ್ಕೆ ಹೊಸ ಶಾಕ್ ಕೊಟ್ಟ ಸಮಂತಾ! ಅಭಿಮಾನಿಗಳು ಬೇಜಾರು...

Published on
ನಟಿ ಸಮಂತಾ ರುತ್ ಪ್ರಭು ಮತ್ತು ನಟ ಅಕ್ಕಿನೇನಿ ನಾಗಚೈತನ್ಯ ಅವರು 2021 ಅಕ್ಟೋಬರ್‌ 2 ರಂದು ವಿಚ್ಛೇದನ ಪಡೆದಾಗಿನಿಂದ, ಅವರಿಬ್ಬರ ಬಗ್ಗೆ ಒಂದಲ್ಲಾ ಒಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೆ ಇವೆ. ಈಗಲೂ ಅವರ ಬಗ್ಗೆ ಒಂದು ಹೊಸ ಗಾಳಿ ಸುದ್ದಿ ಹರಿದಾಡುತ್ತಿದೆ. ಅಂದಹಾಗೆ, ನಟಿ ಸಮಂತಾ ಅವರ ಹೊಸ ಕೆಲಸವೊಂದು ಎಲ್ಲರನ್ನೂ ಶಾಕ್ ಮಾಡಿದೆ. ಹೌದು, ನಾಗಚೈತನ್ಯ ಕುಟುಂಬಕ್ಕೆ ಸಮಂತಾ ಅವರ ಹೊಸ ನಿರ್ಧಾರ ಶಾಕ್ ನೀಡಿದೆಯಂತೆ. ಹಾಗಾದರೆ, ನಟಿ ಸಮಂತಾ ಅಂತಹದ್ದು ಏನು ಮಾಡಿದ್ದಾರೆ ಅಂತೀರಾ...?
ವಿಚ್ಛೇದನ ಪಡೆದ ಬಳಿಕ ಬಹುತೇಕ ಎಲ್ಲಾ ಪತಿ, ಪತ್ನಿಯರಿಗೆ ತಮ್ಮ ಮಾಜಿಗಳ ಜತೆ ಮತ್ತೇನು ಬಾಕಿ ಇದೆ ಜೀವನದಲ್ಲಿ ಎಂದು ಅನ್ನಿಸುವುದು ಸಹಜ. ಬಹುಶಃ ನಟಿ ಸಮಂತಾಗೆ ಕೂಡಾ ಹೀಗೆ ಅನಿಸಿದೆ ಎಂಬಂತೆ ಕಾಣುತ್ತೆ. ಹೌದು, ತಮ್ಮ ಮಾಜಿ ಪತಿ ನಟ ನಾಗಚೈತನ್ಯಗೆ ಸಂಬಂಧಪಟ್ಟ ಎಲ್ಲಾ ವಸ್ತುಗಳನ್ನು ಹಿಂದಿರುಗಿಸುವ ನಿರ್ಧಾರವನ್ನು ನಟಿ ಸಮಂತಾ ಅವರು ತೆಗೆದುಕೊಂಡಿದ್ದು, ಇನ್ನು ಮುಂದೆ ಯಾವತ್ತೂ ಈ ಜೋಡಿ ಒಂದಾಗಲು ಸಾಧ್ಯವೇ ಇಲ್ಲ ಎಂಬುದನ್ನು ಮತ್ತೆ ಸಾಬೀತು ಪಡಿಸಿದ್ದಾರೆ ಎನ್ನಲಾಗುತ್ತಿದೆ.
ನಾಗಚೈತನ್ಯ ಅವರ ಕುಟುಂಬದೊಂದಿಗೆ ಪೂರ್ತಿ ಸಂಬಂಧ ಕೆಳೆದಿಕೊಂಡಿದಲ್ಲದೇ ಒಂದು ಹೆಜ್ಜೆ ಮುಂದೆ ಹಾಕಿದ ನಟಿ ಸಮಂತಾ ಅವರು ತಮ್ಮ ಮದುವೆ ದಿನ ತೊಟ್ಟ ಸೀರೆಯನ್ನು ನಾಗಚೈತನ್ಯ ಅವರಿಗೆ ಹಿಂದಿರುಗಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೌದು, 2017 ಅಕ್ಟೋಬರ್ 6 ರಂದು ಮದುವೆಯಲ್ಲಿ ನಾಗಚೈತನ್ಯ ಮನೆಯವರು ಸಮಂತಾಗೆ ಕೊಟ್ಟಿದ್ದ ಒಂದು ಸೀರೆಯನ್ನು ನಟಿ ವಾಸಪ್ ಕೊಟ್ಟಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಸಮಂತಾ ಅವರ ಮದುವೆ ಸೀರೆ ಬಹಳ ದುಬಾರಿ ಮತ್ತು ವಿಶೇಷವಾಗಿ ಸಮಂತಾ-ನಾಗಚೈತನ್ಯ ಅವರ ಪ್ರೀತಿಯ ಗುರುತುಗಳನ್ನು ಹೊಂದಿದ್ದು, ಆ ಸಮಯದಲ್ಲಿ ಸಾಕಷ್ಟು ಸುದ್ದಿ ಆಗಿತ್ತು.
ಇನ್ನು, ನಟಿ ಸಮಂತಾ ತಮ್ಮ ಮದುವೆ ಸೀರೆಯನ್ನು ಮಾತ್ರವಲ್ಲದೇ, ನಾಗಚೈತನ್ಯ ಮತ್ತು ಅವರ ಮನೆಗೆ ಸಂಬಂಧ ಪಟ್ಟ ಎಲ್ಲಾ ವಸ್ತುಗಳನ್ನು ವಾಪಸ್ ಕೊಡಬೇಕೆಂದು ನಿರ್ಧಾರಿಸಿದ್ದಾರೆ ಎಂಬ ಮಾಹಿತಿಗಳು ಕೇಳಿ ಬರುತ್ತಿವೆ. ಈಗಾಗಲೇ, ನಟ ನಾಗಚೈತನ್ಯ ಅವರ ಎಲ್ಲಾ ನೆನಪುಗಳನ್ನು ಮರೆತಿರುವ ಸಮಂತಾ, ತಮ್ಮ ಮೈ ಮೇಲೆ ಇರುವ ಹಚ್ಚೆ ಗುರುತುಗಳನ್ನು ಅಳಿಸಿ ಹಾಕುವ ಹಾಗೂ ಈಗ ಎಲ್ಲಾ ವಸ್ತುಗಳನ್ನು ತಿರುಗಿಸುವ ನಿರ್ಧಾರ ಮಾಡಿರುವುದು ಈ ಜೋಡಿಯ ಅಭಿಮಾನಿಗಳಿಗೂ ನೋವು ತಂದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net